ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಇಲಾಖೆ ಆದಾಯದಲ್ಲಿ 26,271 ಕೋಟಿ ರೂ. ಹೆಚ್ಚಳ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 12: ಆಗಸ್ಟ್ 2022ರ ಅಂತ್ಯದ ವೇಳೆಗೆ ಭಾರತೀಯ ರೈಲ್ವೆಯ ಒಟ್ಟಾರೆ ಆದಾಯವು 95,486.58 ಕೋಟಿ ರೂಪಾಯಿಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 38ರಷ್ಟು ಅಥವಾ 26,271.29 ಕೋಟಿ ಮೊತ್ತದಷ್ಟು ಹೆಚ್ಚಳವಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಪ್ರಯಾಣಿಕರಿಂದ 25,276.54 ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ವರ್ಷದಿಂದ ಈ ವರ್ಷಕ್ಕೆ ಹೋಲಿಸಿದಾಗ 13,574.44 ಕೋಟಿ (ಶೇ. 116) ಹೆಚ್ಚಳವಾಗಿದೆ. ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಎರಡೂ ಟಿಕೆಟ್‌ ವಿಭಾಗಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಯಾಣಿಕರ ದಟ್ಟಣೆಯೂ ಹೆಚ್ಚಾಗಿದೆ. ಕಾಯ್ದಿರಿಸಿದ ಮೇಲ್ ಎಕ್ಸ್‌ಪ್ರೆಸ್ ರೈಲುಗಳ ಆದಾಯ ಬೆಳವಣಿಗೆಯು ಪ್ರಯಾಣಿಕ ಮತ್ತು ಉಪನಗರ ರೈಲುಗಳಂತೆ ಒಂದೇ ರೀತಿಯದ್ದಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ದೀರ್ಘಾವಧಿಗೆ ರೈಲ್ವೆ ಭೂಮಿ ಗುತ್ತಿಗೆ ನೀಡಲು ಕೇಂದ್ರದ ಅನುಮೋದನೆದೀರ್ಘಾವಧಿಗೆ ರೈಲ್ವೆ ಭೂಮಿ ಗುತ್ತಿಗೆ ನೀಡಲು ಕೇಂದ್ರದ ಅನುಮೋದನೆ

ಇತರೆ ಕೋಚ್‌ಗಳ ಆದಾಯವು ರೂ 2,437.42 ಕೋಟಿಗಳಷ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ರೂ 811.82 ಕೋಟಿ ಇತ್ತು. ಭಾರತೀಯ ರೈಲ್ವೆಯ ಪಾರ್ಸೆಲ್ ವಿಭಾಗದಲ್ಲಿ ಉತ್ತಮ ಬೆಳವಣಿಗೆಯಿಂದ ಆದಾಯ ಹೆಚ್ಚಳಕ್ಕೆ ಉತ್ತೇಜನ ನೀಡುತ್ತಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. ಈ ವರ್ಷದ ಆಗಸ್ಟ್ ಅಂತ್ಯದವರೆಗೆ ಸರಕುಗಳ ಆದಾಯವು 10,780.03 ಕೋಟಿ (ಅಥವಾ ಶೇಕಡಾ 20)ಯಿಂದ 65,505.02 ಕೋಟಿಗೆ ಏರಿದೆ.

Railway department revenue increased by 38 percent

ಈ ಅವಧಿಯಲ್ಲಿ ಓಡಾಟದ ಕಿಲೋಮೀಟರ್‌ಗಳಲ್ಲೂ 18 ಶೇಕಡಾ ಬೆಳವಣಿಗೆ ಆಗಿದ್ದು, ಇದರಲ್ಲೂ ಹೆಚ್ಚಳದ ಮೂಲಕ ಸಾಧನೆ ಮಾಡಲಾಗಿದೆ. ಕಲ್ಲಿದ್ದಲು ಸಾಗಣೆ, ಹೆಚ್ಚುವರಿಯಾಗಿ ಆಹಾರ ಧಾನ್ಯಗಳು, ರಸಗೊಬ್ಬರ, ಸಿಮೆಂಟ್, ಖನಿಜ ತೈಲ, ಕಂಟೈನರ್ , ಇತರ ಸರಕುಗಳ ಸಾಗಣೆಯ ವಿಭಾಗಗಳು ಈ ಬೆಳವಣಿಗೆಯಲ್ಲಿ ಪ್ರಮುಖ ಕೊಡುಗೆ ನೀಡಿವೆ.

Railway department revenue increased by 38 percent

ರೈಲ್ವೆಗೆ ವಿವಿಧ ಆದಾಯವು 2,267.60 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 1105 ಕೋಟಿ ಅಥವಾ ಶೇಕಡಾ 95 ರಷ್ಟು ಹೆಚ್ಚಳವಾಗಿದೆ ಎಂದು ಅದು ಸೇರಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ (2021-22) ರೈಲ್ವೆಯ ಒಟ್ಟು ಆದಾಯ 1,91,278.29 ಕೋಟಿ ರೂ. ಆಗಿತ್ತು.

English summary
The overall revenue of Indian Railways at the end of August 2022 was Rs 95,486.58 crore, an increase of 38 per cent (Rs 26,271.29 crore) over the same period last year, an official statement said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X