ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನ ಸತ್ಯಂ ಸಿನಿಮಾಸ್ ಖರೀದಿಸಿದ ಪಿವಿಆರ್

By Mahesh
|
Google Oneindia Kannada News

ಚೆನ್ನೈ, ಆಗಸ್ಟ್ 13: ಚೆನ್ನೈನ ಸಿನಿಪ್ರಿಯರ ಪಾಲಿನ ನೆಚ್ಚಿನ ತಾಣ ಎಸ್ ಪಿಐ ಸಿನಿಮಾಸ್(ಸತ್ಯಂ) ಖರೀದಿಸಿರುವುದಾಗಿ ಪಿವಿಆರ್ ಲಿಮಿಟೆಡ್ ಪ್ರಕಟಣೆ ಹೊರಡಿಸಿದೆ. ಸುಮಾರು 633 ಕೋಟಿ ರು ನೀಡುವ ಮೂಲಕ ಭಾರತದ ಅತಿದೊಡ್ಡ ಮಲ್ಪಿಪ್ಲೆಕ್ಸ್ ಆಪರೇಟರ್ ಎನಿಸಿಕೊಂಡಿರುವ ಪಿವಿಆರ್ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡಿದೆ.

ದಕ್ಷಿಣ ಭಾರತದ ಅತಿದೊಡ್ಡ ಪ್ರದರ್ಶಕ ಸಂಸ್ಥೆ ಎನಿಸಿಕೊಂಡಿದ್ದ ಎಸ್ ಪಿಐ ಖರೀದಿ ಮೂಲಕ ಪಿವಿಆರ್ ಈಗ ವಿಶ್ವದ 7ನೇ ಅತಿದೊಡ್ಡ ಪ್ರದರ್ಶಕ ಸಂಸ್ಥೆ ಎನಿಸಿಕೊಂಡಿದೆ.

PVR widens its reach, buys SPI Cinemas for ₹ 633 crore

ಸುಮಾರು 60 ನಗರಗಳಲ್ಲಿ 152 ಕಟ್ಟಡಗಳನ್ನು ಹೊಂದಿದ್ದು, 706 ಸ್ಕ್ರೀನ್ ಗಳನ್ನು ಪಿವಿಆರ್ ಹೊಂದಿದೆ. 2013ರಲ್ಲಿ ಸಿನಿಮ್ಯಾಕ್ಸ್, 2016ರಲ್ಲಿ ಡಿಟಿ ಸಿನಿಮಾಸ್ ಗಳನ್ನು ಪಿವಿಆರ್ ಖರೀದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಾಗಡಿ ರಸ್ತೆಯಲ್ಲಿ ಅನಾವರಣ ಗೊಂಡ ಬೃಹತ್ ಮಾಲ್ಮಾಗಡಿ ರಸ್ತೆಯಲ್ಲಿ ಅನಾವರಣ ಗೊಂಡ ಬೃಹತ್ ಮಾಲ್

ತಮಿಳುನಾಡು, ತೆಲಂಗಾಣ, ಕರ್ನಾಟಕ, ಕೇರಳ, ಮುಂಬೈ ಹಾಗೂ ಆಂಧ್ರಪ್ರದೇಶಗಳ 10 ನಗರಗಳಲ್ಲಿ 17 ಕಟ್ಟಡಗಳಲ್ಲಿ 76ಸ್ಕ್ರೀನ್ ಗಳನ್ನು ಸತ್ಯಂ ಸಿನಿಮಾಸ್ ಹೊಂದಿದೆ. ಪಲಾಜೋ, ದಿ ದಿನಿಮಾ, ಎಸ್ 2 ಹಾಗೂ ಎಸ್ಕೇಪ್ ಮುಂತಾದ ಬ್ರಾಂಡ್ ಗಳನ್ನು ಎಸ್ ಪಿಐ ಹೊಂದಿದೆ.

ಸತ್ಯಂ ಸಿನಿಮಾಸ್ ನ ಶೇ 71.7 ಪಾಲು ಪಿವಿಆರ್ ಕೈ ಸೇರಲಿದ್ದು, ಮುಂದಿನ 30 ದಿನಗಳಲ್ಲಿ ಡೀಲ್ ಮುಗಿಯಲಿದೆ. ಈ ಒಪ್ಪಂದದ ನಂತರ ತಮಿಳುನಾಡಿನಲ್ಲಿ ಪಿವಿಆರ್ ಸ್ಕ್ರೀನ್ ಗಳ ಸಂಖ್ಯೆ 47ರಿಂದ 89ಕ್ಕೇರಲಿದೆ.

ಭಾರತದ ಬಾಕ್ಸಾಫೀಸ್ ಗೆ ತಮಿಳು, ತೆಲುಗು ಹಾಗೂ ಕನ್ನಡ ಶೇ 37ರಷ್ಟು ಕೊಡುಗೆ ನೀಡುತ್ತಿದೆ. ಈ ಬೃಹತ್ ಒಪ್ಪಂದದ ನಂತರ ಪಿವಿಆರ್ ಗೆ ಪ್ರಾದೇಶಿಕ ಸಿನಿಮಾಗಳಿಂದ ಬರುತ್ತಿದ್ದ ಶೇ 19ರಷ್ಟು ಆದಾಯವು ಶೇ 22ಕ್ಕೇರಲಿದೆ.

English summary
PVR Ltd on Sunday said it has agreed to buy a 71.7% stake in SPI Cinemas Pvt. Ltd for ₹ 633 crore. It is expected to help India’s largest multiplex chain strengthen its foothold in southern India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X