ಸರ್ಕಾರಿ ಬ್ಯಾಂಕ್ ನೌಕರರ ಮುಷ್ಕರ ಮುಂದೂಡಿಕೆ
ಬೆಂಗಳೂರು, ಜ. 20: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ.21 ರಿಂದ ನಾಲ್ಕು ದಿನ ಕಾಲ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಬ್ಯಾಂಕ್ ಗಳ ನೌಕರರ ಒಕ್ಕೂಟ ಮುಂದೂಡಿದೆ.
ನೌಕರರ ಯೂನಿಯನ್ ಮುಂದಿಟ್ಟಿರುವ ಬೇಡಿಕೆಗೆ ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಈ ಬಗ್ಗೆ ಸೂಕ್ತ ಆದೇಶ ಹೊರಬೀಳಲಿದೆ.[ಮುಂದಿನ ವಾರ ಬ್ಯಾಂಕ್ ಓಪನ್ ಇರುತ್ತಾ?]

ನೌಕರರ ಯೂನಿಯನ್‌ಗಳ ಒಕ್ಕೂಟ ಶೇ.19.50ರಷ್ಟು ವೇತನ ಹೆಚ್ಚಿಸುವಂತೆ ಬೇಡಿಕೆ ಇಟ್ಟಿತ್ತು. ಆದರೆ, ಸೋಮವಾರ ನಡೆದ ಸಭೆಯಲ್ಲಿ ಬ್ಯಾಂಕ್‌ಗಳ ಒಕ್ಕೂಟವು ವೇತನವನ್ನು ಶೇ.12.50ರಿಂದ ಶೇ.12.75ರಷ್ಟು ಹೆಚ್ಚಿಸಲು ಒಲವು ತೋರಿತ್ತು.
ಪಟ್ಟು ಸಡಿಲಿಸಿರುವ ನೌಕರರ ಒಕ್ಕೂಟವು ಕನಿಷ್ಠ ಶೇ.16ರಷ್ಟಾದರೂ ಹೆಚ್ಚಳ ಮಾಡುವಂತೆ ಆಗ್ರಹಿಸಿದೆ.ಬೇಡಿಕೆ ಪರಿಗಣಿಸುವ ಸಂಬಂಧ ಬ್ಯಾಂಕ್‌ಗಳ ಒಕ್ಕೂಟ ಇನ್ನಷ್ಟು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡಲು ನಿರ್ಧರಿಸಲಾಗಿದೆ.












Click it and Unblock the Notifications