ಏರ್‌ ಇಂಡಿಯಾದಲ್ಲಿ ಇನ್ನೂ ಪೊಡಿ ಇಡ್ಲಿ, ಆಲೂ ಪರಾಠ, ಚಿಕನ್ ಚೆಟ್ಟಿನಾಡು ಲಭ್ಯ!

ನವದೆಹಲಿ, ಅಕ್ಟೋಬರ್‌ 3: ಹಬ್ಬದ ಋತುವಿನ ಆರಂಭದೊಂದಿಗೆ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ತನ್ನ ದೇಶೀಯ ಪ್ರಯಾಣಿಕರಿಗಾಗಿ ಸ್ಥಳೀಯವಾಗಿ ಸಿಗುವ ವಿಶೇಷವಾದ ಊಟದ ಮೆನುವನ್ನು ಪ್ರಾರಂಭಿಸಿದೆ.

ಅಕ್ಟೋಬರ್ 1 ರಿಂದ ಜಾರಿಗೆ ಬಂದ ಹೊಸ ಇನ್-ಫ್ಲೈಟ್ ಮೆನು ಗೌರ್ಮೆಟ್ ಊಟಗಳು, ಟ್ರೆಂಡಿ ಅಪೆಟೈಸರ್‌ಗಳು ಮತ್ತು ಡಿಕಡೆಂಟ್ ಡೆಸರ್ಟ್‌ಗಳ ಮೆನುವನ್ನು ಒಳಗೊಂಡಿದೆ, ಇದು ಭಾರತ ಸ್ಥಳೀಯವಾಗಿ ಲಭ್ಯವಾಗುವ ಊಟವನ್ನು ವಿತರಣೆ ಮಾಡಲು ಆರಂಭಿಸಿದೆ.

ಅಡುಗೆ ಮನೆಯಿಂದ ಟ್ರೇ ಟೇಬಲ್‌ವರೆಗೆ ಭಕ್ಷ್ಯಗಳ ಶ್ರೇಣಿಯು ಆರೋಗ್ಯಕರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ವಿಮಾನಯಾನ ಸಂಸ್ಥೆಯು ಹೆಚ್ಚಿನ ಗಮನವನ್ನು ನೀಡಿದೆ. ಹೊಸ ಮೆನುವು ರುಚಿಕರವಾದ ಬಿಸಿ ಊಟಗಳು, ಸಿಹಿತಿಂಡಿಗಳು ಮತ್ತು ತಾಜಾ ಹಣ್ಣಿನ ರಸಗಳು ಮತ್ತು ಸ್ಮೂಥಿಗಳು ಸೇರಿದಂತೆ ರಿಫ್ರೆಶ್ ಪಾನೀಯಗಳ ವ್ಯಾಪಕ ಆಯ್ಕೆಯನ್ನು ಒಳಗೊಂಡಿದೆ. ಪ್ರತಿ ಊಟವನ್ನು ನೈರ್ಮಲ್ಯ ಮತ್ತು ಗುಣಮಟ್ಟದ ಅತ್ಯಂತ ಮಾನದಂಡಗಳ ಪ್ರಕಾರ ತಯಾರಿಸಲಾಗುತ್ತದೆ.

Podi Idli, Aloo Paratha, Chicken Chettinadu are still available in Air India Menu!

ಬಿಸಿನೆಸ್‌ ಕ್ಲಾಸ್‌ ಪ್ರಯಾಣಿಕರು ಈ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಎದುರು ನೋಡಬಹುದು. ಅದ್ಯಾಗೂ ಬೆಳಗ್ಗಿನ ತಿಂಡಿ ಇಂತಿದೆ. ಬೆಣ್ಣೆ ಮತ್ತು ಫ್ಲಾಕಿ ಕ್ರೋಸೆಂಟ್, ಸಕ್ಕರೆ ರಹಿತ ಡಾರ್ಕ್ ಚಾಕೊಲೇಟ್ ಓಟ್ ಮೀಲ್ ಮಫಿನ್, ಚೀವ್ಸ್‌ನೊಂದಿಗೆ ಚೀಸ್ ಮತ್ತು ಟ್ರಫಲ್ ಆಯಿಲ್ ಸ್ಕ್ರಾಂಬಲ್ಡ್ ಎಗ್, ಸಾಸಿವೆ ಕೆನೆ ಲೇಪಿತ ಚಿಕನ್ ಸಾಸೇಜ್, ಆಲೂ ಪರಾಠ, ಮೆತ್ತಗಿನ ವಡೆ, ಪೋಡಿ ಇಡ್ಲಿ ಸಿಗಲಿದೆ.

ಮಧ್ಯಾಹ್ನಕ್ಕೆ ಮೀನಿನ ಕರಿ, ಚಿಕನ್ ಚೆಟ್ಟಿನಾಡು, ಆಲೂಗಡ್ಡೆ ಪೊಡಿಮಾಸ್ ಸಿಗಲಿದೆ. ಸಂಜೆ ಟೀ ಸಮಯದಲ್ಲಿ ಚಿಕನ್‌ 65, ಗ್ರಿಲ್ಡ್‌ ಪೆಸ್ಟೊ ಚಿಕನ್ ಸ್ಯಾಂಡ್‌ವಿಚ್, ಮುಂಬೈ ಬಟಾಟವಡ ಸಿಗಲಿದೆ. ಬಿಸಿನೆಸ್‌ ಕ್ಲಾಸ್‌ ಪ್ರಯಾಣಿಕರಿಗೆ ಬೆಳಗ್ಗೆ ಚೀಸ್ ಮಶ್ರೂಮ್ ಆಮ್ಲೆಟ್, ಒಣ ಜೀರಾ ಆಲೂ ತುಂಡುಗಳು, ಬೆಳ್ಳುಳ್ಳಿ ಪಾಲಕ್ ಮತ್ತು ಕಾರ್ನ್ ಸಿಗಲಿದೆ.

Podi Idli, Aloo Paratha, Chicken Chettinadu are still available in Air India Menu!

ಮಧ್ಯಾಹ್ನಕ್ಕೆ ರುಚಿಕರವಾದ ತರಕಾರಿ ಬಿರಿಯಾನಿ, ಮಲಬಾರ್ ಚಿಕನ್ ಕರಿ, ಮಿಶ್ರ ತರಕಾರಿ ಪೊರಿಯಾಲ್ ಸಿಗಲಿದೆ. ಟೀ ಸಮಯಕ್ಕೆ ಹುರಿದ ತರಕಾರಿ ನೂಡಲ್ಸ್, ಚಿಲ್ಲಿ ಚಿಕನ್, ಬ್ಲೂಬೆರ್ರಿ ವೆನಿಲ್ಲಾ ಪೇಸ್ಟ್ರಿ, ಕಾಫಿ ಟ್ರಫಲ್ ಸ್ಲೈಸ್ ಲಭ್ಯವಾಗಲಿದೆ. ಏರ್ ಇಂಡಿಯಾದ ಗ್ರಾಹಕರು ಬುಕಿಂಗ್ ಸಮಯದಲ್ಲಿ ತಮ್ಮ ಆದ್ಯತೆಯ ಊಟದ ಆಯ್ಕೆಯನ್ನು ಆಯ್ಕೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+