ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎನ್ ಬಿ ಹಗರಣ: ನೀರವ್ ಗೆ ಸೇರಿದ 43.86 ಕೋಟಿ ರು ಜಪ್ತಿ

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 23: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹು ಕೋಟಿ ವಂಚನೆ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಅವರ ಮನೆ, ಕಚೇರಿ ಮೇಲೆ ಮತ್ತೆ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಿ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿ ವಶಪಡಿಸಿಕೊಂಡಿದೆ.

ನೀರವ್ ಮೋದಿ ಒಡೆತನದ ಸಮೂಹ ಸಂಸ್ಥೆಗೆ ಸೇರಿದ ಡೆಪಾಸಿಟ್ ಮತ್ತು ಷೇರುಗಳನ್ನೆಲ್ಲ ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಆಸ್ತಿ ಮೌಲ್ಯ ಸುಮಾರು 43.86 ಕೋಟಿ ರುಪಾಯಿಗಳಷ್ಟು ಎಂದು ಅಂದಾಜಿಸಲಾಗಿದೆ.

ನೀರವ್ ಮೋದಿಗೆ ಸೇರಿರುವ 9 ಐಷಾರಾಮಿ ಕಾರುಗಳು ಜಪ್ತಿನೀರವ್ ಮೋದಿಗೆ ಸೇರಿರುವ 9 ಐಷಾರಾಮಿ ಕಾರುಗಳು ಜಪ್ತಿ

ವಜ್ರದ ಉದ್ಯಮಿ, ಆಭರಣ ವಿನ್ಯಾಸಗಾರ ಮೋದಿಗೆ ಸೇರಿದ ಕೆಲವು ದುಬಾರಿ ವಾಚುಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಬ್ಯಾಂಕ್ ಖಾತೆಯಲ್ಲಿದ್ದ 30 ಕೋಟಿ ರು, 13.86 ಕೋಟಿ ರು ಮೌಲ್ಯದ ಷೇರುಗಳನ್ನು ವಶಪಡಿಸಿಕೊಳ್ಳಲಾಗಿದೆ.

PNB fraud: ED freezes Nirav's assets worth Rs 43.86 cr

ಇದಲ್ಲದೆ, 176 ಸ್ಟೀಲ್ ಅಲ್ಮೇರಾಗಳು, 158 ಬಾಕ್ಸ್ ಗಳು ಹಾಗೂ 60 ಇತರ ಕಂಟೇನರ್ ಗಳನ್ನು ಕಳೆದ ವಾರವೇ ಜಪ್ತಿ ಮಾಡಲಾಗಿತ್ತು.

ಇತ್ತೀಚೆಗೆ ಸುಮಾರು 9 ದುಬಾರಿ ಕಾರುಗಳನ್ನು ಜಪ್ತಿ ಮಾಡಲಾಗಿದ್ದು, ಅವುಗಳ ಒಟ್ಟಾರೆ ಮೌಲ್ಯ 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಬ್ಯಾಂಕಿಂಗ್ ವಿಜಿಲೆನ್ಸ್ ಗಾಗಿ ಪ್ರಶಸ್ತಿ ಪಡೆದಿದ್ದ ಪಿಎನ್‌ಬಿಗೆ 11,400 ಕೋಟಿ ಪಂಗನಾಮ!ಬ್ಯಾಂಕಿಂಗ್ ವಿಜಿಲೆನ್ಸ್ ಗಾಗಿ ಪ್ರಶಸ್ತಿ ಪಡೆದಿದ್ದ ಪಿಎನ್‌ಬಿಗೆ 11,400 ಕೋಟಿ ಪಂಗನಾಮ!

ಪ್ರಕರಣದ ಮತ್ತೊಬ್ಬ ಆರೋಪಿ, ನೀರವ್ ಮೋದಿ ಸಂಬಂಧಿ, ಗೀತಾಂಜಲಿ ಜ್ಯುವೆಲರ್ಸ್ ಪ್ರಮೋಟರ್ ಮೆಹುಲ್ ಚೋಕ್ಸಿಯ ಆಸ್ತಿಯನ್ನು ಕೂಡ ತನಿಖೆಗೆ ಒಳಪಡಿಸಲಾಗಿದೆ. ಭಾನುವಾರದಂದು 15 ನಗರಗಳ 45 ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸುಮಾರು 11 ಸಾವಿರ ಕೋಟಿ ರುಗೂ ಅಧಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ನೀರವ್ ಮೋದಿ ಅವರು ಭಾರತದಿಂದ ಪರಾರಿಯಾಗಿ ಅಮೆರಿಕದಲ್ಲಿ ನೆಲೆಸಿರುವ ಶಂಕೆ ವ್ಯಕ್ತವಾಗಿದೆ.

English summary
The Enforcement Directorate (ED) on Friday froze assets of Nirav Modi worth Rs. 43.86 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X