ನೀರವ್ ಮೋದಿ ಪರಿಣಾಮ: 'ಎಲ್ಒಯು', 'ಎಲ್ಒಸಿ' ಸೇವೆ ಸ್ಥಗಿತ

Posted By: ದೀಪಿಕಾ
Subscribe to Oneindia Kannada

ನವದೆಹಲಿ, ಮಾರ್ಚ್ 13: ವಜ್ರದ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿ (ಪಿಎನ್ ಬಿ) ಗೆ ಹಾಕಿದ ಪಂಗನಾಮದ ಪರಿಣಾಮ ಉಳಿದವರ ಮೇಲೆ ಬಿದ್ದಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹಗರಣದ ಮೂಲವಾಗಿದ್ದ 'ಎಲ್ಒಯು' ಮತ್ತು 'ಎಲ್ಒಸಿ' ಸೇವೆಗಳನ್ನೇ ಆರ್.ಬಿ.ಐ ಸ್ಥಗಿತಗೊಳಿಸಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಕಲಿ 'ಲೆಟರ್ ಆಫ್ ಅಂಡರ್ಸ್ಟ್ಯಾಂಡಿಂಗ್' (ಎಲ್ಒಯು) ಗಳ ಮೂಲಕ ನೀರವ್ ಮೋದಿ ಪಿಎನ್ ಬಿ ಬ್ಯಾಂಕಿಗೆ ವಂಚನೆ ಎಸಗಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ಇದೀಗ 'ಎಲ್ಒಯು'ಗಳ ಸೇವೆಯನ್ನೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಗಿತಗೊಳಿಸಿದೆ.

ನೀರವ್ ಮೋದಿ ಆಸ್ತಿ ಕುಸಿತ, ಕೋಟ್ಯಧಿಪತಿ ಪಟ್ಟಿಯಿಂದ ಔಟ್!

ತಕ್ಷಣದಿಂದ ಜಾರಿಗೆ ಬರುವಂತೆ 'ಎಲ್ಒಯು', 'ಎಲ್ಒಸಿ'ಗಳನ್ನು ರದ್ದುಗೊಳಿಸಲಾಗಿದೆ ಎಂದು ಹೊಸ ಸುತ್ತೋಲೆಯಲ್ಲಿ ಆರ್.ಬಿ.ಐ ಸ್ಪಷ್ಟವಾಗಿ ಹೇಳಿದೆ.

PNB effect: RBI ends LoUs, LoCs with immediate effect

ಕಳೆದ ತಿಂಗಳು ತನಗೆ 12,967 ಕೋಟಿ ರೂಪಾಯಿ ವಂಚನೆಯಾಗಿರುವುದಾಗಿ ಪಿಎನ್ ಬಿ ಬ್ಯಾಂಕ್ ಸಿಬಿಐಗೆ ದೂರು ನೀಡಿತ್ತು. ಬ್ಯಾಂಕಿಗೆ ವಂಚನೆ ನಡೆಸಿದ ನೀರವ್ ಮೋದಿ ಮತ್ತು ಸಂಬಂಧಿಕರು ವಿದೇಶಕ್ಕೆ ಪಲಾಯನ ಮಾಡಿದ್ದರು. ಇದೀಗ ಪ್ರಕರಣದ ಬಗ್ಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ಮುಂದುವರಿಸಿದ್ದು, ಇದರ ಮಧ್ಯೆ ಈ ರೀತಿಯ ಪ್ರಕರಣಗಳನ್ನು ಹತೋಟಿಗೆ ತರಲು ಆರ್.ಬಿ.ಐ ಈ ತೀರ್ಮಾನ ತೆಗೆದುಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Reserve Bank of India has discontinued Letters of Undertaking (LoUs) or guarantees for overseas credit after the Punjab National Bank (PNB) fraud.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ