• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಆರಂಭಿಸಿದ ಚಿನ್ನ ಠೇವಣಿ ಯೋಜನೆ ಟುಸ್!

By Mahesh
|

ನವದೆಹಲಿ, ನ.20: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಆರಂಭಿಸಿದ್ದ ಚಿನ್ನ ಠೇವಣಿ ಯೋಜನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 20 ಸಾವಿರ ಟನ್ ಗಳಷ್ಟು ಚಿನ್ನವನ್ನು ಚಾಲನೆಗೆ ತರಲು ಯೋಜಿಸಿದ್ದ ಮೋದಿ ಸರ್ಕಾರಕ್ಕೆ ಸದ್ಯಕ್ಕೆ ದಕ್ಕಿರುವುದು 400 ಗ್ರಾಂ ಮಾತ್ರ.

ನಿಮ್ಮ ಮನೆ ಮತ್ತು ದೇವಸ್ಥಾನಗಳಲ್ಲಿ ಇಟ್ಟಿರುವ ಚಿನ್ನವನ್ನು ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ಇಟ್ಟು ಅದರಿಂದ ಬಡ್ಡಿ ಪಡೆಯಿರಿ ಎಂದು ಮೋದಿ ಅವರು ಭಾರತೀಯರಿಗೆ ನೀಡಿದ ಕರೆ ವ್ಯರ್ಥವಾಗಿದೆ. ಚಿನ್ನಕ್ಕೆ ಮಿತ ದರದಲ್ಲಿ ಬಡ್ಡಿಯನ್ನು ನೀಡುವ ಪ್ರಸ್ತಾಪ ಯೊಜನೆಯಲ್ಲಿದೆ. ಆದರೆ, ಯೋಜನೆ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮನವರಿಕೆ ಮಾಡಿಕೊಡುವಲ್ಲಿ ಇಲಾಖೆ ವಿಫಲವಾಗಿದೆ ಎನ್ನಲಾಗುತ್ತಿದೆ.[ಏನಿದು ಸವರನ್ ಗೋಲ್ಡ್ ಬಾಂಡ್? ಏನು ಪ್ರಯೋಜನ?]

ಠೇವಣಿಯಿಡುವ ಚಿನ್ನವನ್ನು ಪರೀಕ್ಷಿಸುವ ಕೇಂದ್ರಗಳ ಕೊರತೆಯೂ ಇದಕ್ಕೆ ಕಾರಣವಾಗಿದೆ ಹಾಗೂ ಇದನ್ನು ಪರಿಹರಿಸಲು ಸರಕಾರ ಒಪ್ಪಿದೆ ಎಂದು ಭಾರತದ ಮುತ್ತು ಮತ್ತು ಚಿನ್ನ ರಫ್ತು ಉತ್ತೇಜನ ಮಂಡಳಿಯ ಉತ್ತರ ವಲಯ ಅಧ್ಯಕ್ಷ ಅನಿಲ್ ಸಂಖ್ವಾಲ್ ಹೇಳಿದ್ದಾರೆ.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]

ದೇಶದಲ್ಲಿ ಸುಮಾರು 52 ಲಕ್ಷ ಕೋಟಿ ರೂ. ಮೌಲ್ಯದ 20 ಸಾವಿರ ಟನ್ ಚಿನ್ನದ ಸಂಗ್ರಹವಿದೆ ಎಂದು ಸರ್ಕಾರ ಅಂದಾಜಿಸಿದೆ. ಇದನ್ನು ಚಿನ್ನದ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಜೆಮ್ ಮತ್ತು ಜ್ಯುವೆಲರ್ ರಫ್ತು ಉತ್ತೇಜನ ಮಂಡಳಿಯ ಉತ್ತರ ವಲಯದ ಅಧ್ಯಕ್ಷ ಅನಿಲ್ ಸಂಖ್ವಾಲ್ ತಿಳಿಸಿದ್ದಾರೆ. [ಅಶೋಕ ಚಕ್ರ ಚಿನ್ನದ ನಾಣ್ಯ, ಏನು? ಎತ್ತ? ಏತಕ್ಕೆ?]

ಕೇಂದ್ರ ಸರ್ಕಾರವು ನವೆಂಬರ್ 5 ರಂದು ಚಿನ್ನದ ಯೋಜನೆಗಳಿಗೆ ಚಾಲನೆ ನೀಡಿತ್ತು. ಇದರಲ್ಲಿ ಹೂಡಿಕೆ ಮಾಡುವವರಿಗೆ ಶೇ. 2.5ರ ಬಡ್ಡಿ ದರದಲ್ಲಿ ಬಡ್ಡಿ ಪಾವತಿಯಾಗುತ್ತಿತ್ತು. ಆದರೆ ಇದು ಬ್ಯಾಂಕ್​ನಲ್ಲಿ ನೀಡುವ ಬಡ್ಡಿ ದರಕ್ಕಿಂತಲೂ ಕಡಿಮೆ ಇರುವುದು ಸೇರಿದಂತೆ ಹಲವು ಕಾರಣಗಳಿಂದ ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ದೊರೆತಿಲ್ಲ. ಅಶೋಕ ಚಕ್ರ ವಿಶೇಷ ಚಿನ್ನದ ನಾಣ್ಯಗಳು ಕೂಡಾ 6,200 ರಷ್ಟು ಮಾರಾಟವಾಗಿದೆ ಎಂದು ತಿಳಿದು ಬಂದಿದೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A gold deposit scheme launched amid fanfare by Prime Minister Narendra Modi two weeks ago has so far attracted only 400 grammes, an industry official said on Thursday, out of a national hoard estimated at 20,000 tonnes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more