ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಬಿಐನ 2 ಗ್ರಾಹಕ-ಸ್ನೇಹಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

|
Google Oneindia Kannada News

ನವದೆಹಲಿ, ನವೆಂಬರ್‌ 12: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಎರಡು ನವೀನ ಗ್ರಾಹಕ-ಸ್ನೇಹಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿ ಈ ಯೋಜನೆಗಳಾದ ಚಿಲ್ಲರೆ ನೇರ ಯೋಜನೆ ಮತ್ತು ಸಮಗ್ರ ಒಂಬುಡ್ಸ್ ಮನ್ ಯೋಜನೆಯ ಮಹತ್ವವನ್ನು ವಿವರಿಸಿದ್ದಾರೆ.

ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಈ ಯೋಜನೆಯು ಹೂಡಿಕೆ ವಿಚಾರಗಳು, ಆರ್ಥಿಕ ವಿಚಾರಗಳು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಜನರಿಗೆ ಈ ವಿಚಾರಗಳ ಬಗ್ಗೆ ಮಾಹಿತಿ ನೀಡಿಲಿದೆ. ಈ ಯೋಜನೆಯು ಆತ್ಮ ನಿರ್ಭರ ಭಾರತಕ್ಕೆ ಸಹಕಾರಿ," ಎಂದು ಹೇಳಿದರು.

"ದೇಶದ ವಿಕಾಸಕ್ಕೆ ಇದು ಸಹಕಾರಿ. ಈ ಬಗ್ಗೆ ನನಗೆ ವಿಶ್ವಾಸವಿದೆ. ಆರ್‌ಬಿಐ ಬೇರೆ ವಿತ್ತೀಯ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಆರ್‌ಬಿಐ ಕೂಡಾ ಸಾಮಾನ್ಯ ಜನರಿಗೆ ಸಹಕಾರಿ ಆಗುವ ಯೋಜನೆಯನ್ನು ಜಾರಿಗೆ ತಂದಿರುವುದು ಖುಷಿಯ ವಿಚಾರ," ಎಂದರು.

PM Narendra Modi Launched 2 Customer-Centric RBI Schemes

"ಜನರಿಗೆ ಕೆಲವು ಹೂಡಿಕೆ ವಿಚಾರಗಳು, ಆರ್ಥಿಕ ವಿಚಾರಗಳು ತಿಳಿಯುವುದಿಲ್ಲ. ಆದರೆ ಈ ಹೊಸ ಯೋಜನೆಯ ಮೂಲಕ ದೇಶದ ಮೂಲೆ ಮೂಲೆ ಜನರಿಗೂ, ಸಾಮಾನ್ಯ ಜನರಿಗೂ ಈ ಆರ್ಥಿಕ ಮಾಹಿತಿಯನ್ನು ತಿಳಿಯಲು ಸಹಾಯ ಮಾಡಲಿದೆ. ನೀವು ಆನ್‌ಲೈನ್ ಮೂಲಕವೇ ಉಚಿತ ಸರ್ಕಾರಿ ಷೇರು ಖಾತೆಗಳನ್ನು ತೆರೆಯಬಹುದು. ನೀವು ಎಲ್ಲಿಗೂ ಹೋಗಬೇಕಾಗಿಲ್ಲ. ಮೊಬೈಲ್‌ ಫೋನ್‌, ಇಂಟರ್‌ನೆಟ್‌ ಮೂಲಕವೇ ಎಲ್ಲಾ ಕಾರ್ಯವನ್ನು ಮಾಡಬಹುದು," ಎಂದು ಪ್ರಧಾನಿ ಮೋದಿ ವಿವರಿಸಿದರು.

"ಅಮೃತ ಮಹೋತ್ಸವದ ಈ ಅವಧಿಯಲ್ಲಿ ದೇಶದ ಅಭಿವೃದ್ದಿಗೆ ಬಹಳ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ಬಿಐ ಪಾತ್ರವು ಬಹಳ ದೊಡ್ಡದು. ಆರ್‌ಬಿಐ ತಂಡವು ದೇಶದ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಣೆ ಮಾಡುತ್ತದೆ ಎಂಬ ವಿಶ್ವಾಸ ನನಗೆ ಇದೆ," ಎಂದು ಕೂಡಾ ಮೋದಿ ಹೇಳಿದ್ದಾರೆ.

"ಚಿಲ್ಲರೆ ನೇರ ಯೋಜನೆಯು ದೇಶದ ಸಣ್ಣ ಹೂಡಿಕೆದಾರರು ಸರ್ಕಾರದ ಷೇರುಗಳಲ್ಲಿ ಹೂಡಿಕೆ ಮಾಡಲು ಸರಳ ಹಾಗೂ ಸುರಕ್ಷಿತವಾದ ಮಾಧ್ಯಮವಾಗಿದೆ. ಹಾಗೆಯೇ ಸಮಗ್ರ ಒಂಬುಡ್ಸ್ ಮನ್ ಯೋಜನೆಯು ಬ್ಯಾಂಕಿಂಗ್‌ ವಲಯದಲ್ಲಿ ಒಂದು ರಾಷ್ಟ್ರ ಒಂದು ಒಂಬುಡ್ಸ್ ಮನ್ ವ್ಯವಸ್ಥೆ ರೂಪುಗೊಳ್ಳಲು ಸಹಕಾರಿ. ಆರ್‌ಬಿಐ ಆರಂಭ ಮಾಡಿರುವ ಈ ಎರಡು ಯೋಜನೆಗಳು ದೇಶದಲ್ಲಿ ಹೂಡಿಕೆಯ ವ್ಯಾಪ್ತಿಯನ್ನು ವಿಸ್ತರಣೆ ಮಾಡಲಿದೆ. ಹಾಗೆಯೇ ಬಂಡವಾಳವು ಷೇರು ಮಾರುಕಟ್ಟೆಗೆ ಸುಲಭವಾಗಿ ಪ್ರವೇಶಿಸಲು ಸಹಾಯಕ. ಹೂಡಿಕೆದಾರರಿಗೂ ಸುರಕ್ಷಿತ," ಎಂದು ತಿಳಿಸಿದರು.

ಏಳು ವರ್ಷದಲ್ಲೇ ಭಾರತ 19 ಪಟ್ಟು ಅಭಿವೃದ್ದಿ

"ಚಿಲ್ಲರೆ ನೇರ ಯೋಜನೆ ಮತ್ತು ಸಮಗ್ರ ಒಂಬುಡ್ಸ್ ಮನ್ ಯೋಜನೆಯು ಹೂಡಿಕೆದಾರರಿಗೆ ಆಯ್ಕೆಯನ್ನು ವಿಸ್ತಾರ ಮಾಡುತ್ತಿದೆ. ಬಂಡವಾಳ ಮಾರುಕಟ್ಟೆ ತಲುಪಲು ಹೂಡಿಕೆದಾರರಿಗೆ ಹೆಚ್ಚು ಸುಲಭವಾಗಲಿದೆ," ಎಂದು ಪುನರುಚ್ಛರಿಸಿದ ಪ್ರಧಾನಿ ಮೋದಿ, "ಕಳೆದ ಏಳು ವರ್ಷಗಳಲ್ಲಿ ಎನ್‌ಪಿಎ (ಅನುತ್ಪಾದಕ ಆಸ್ತಿಗಳು) ಪಾರದರ್ಶಕವಾಗಿದೆ. ರೆಸಲ್ಯೂಶನ್ ಮತ್ತು ಚೇತರಿಕೆಯ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಸಾರ್ವಜನಿಕ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳನ್ನು ವಿಲೀನ ಮಾಡಲಾಗಿದೆ. ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳ ಸುಧಾರಣೆ ಮಾಡಲಾಗಿದೆ," ಎಂದು ಪ್ರಧಾನಿ ಮೋದಿ ಹೇಳಿದರು. ಪ್ರಸ್ತುತ ಯುಪಿಐ ಎಂಬುವುದು ಭಾರತದಲ್ಲಿ ಅಧಿಕವಾಗಿ ಕೇಳಿ ಬರುವುದು. ಜನರು ಡಿಜಿಟಲ್‌ ವ್ಯವಹಾರವನ್ನು ಅಧಿಕವಾಗಿ ಅವಲಂಭಿಸಿದ್ದಾರೆ. ಏಳು ವರ್ಷದಲ್ಲೇ ಭಾರತ ಡಿಜಿಟಲ್‌ ಪಾವತಿ ವಲಯದಲ್ಲಿ 19 ಪಟ್ಟು ಅಧಿಕ ಅಭಿವೃದ್ದಿ ಹೊಂದಿದೆ. ಇಂದು ನಮ್ಮ ಬ್ಯಾಂಕಿಂಗ್‌ ವ್ಯವಸ್ಥೆಯು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಣೆ ಮಾಡುತ್ತಿದೆ," ಎಂದರು.

ಆರ್‌ಬಿಐನ ಯೋಜನೆಗಳು ಯಾವುದು?

ಚಿಲ್ಲರೆ ಹೂಡಿಕೆದಾರರು ಸರ್ಕಾರಿ ಷೇರುಗಳಲ್ಲಿ ಅಧಿಕ ಹೂಡಿಕೆ ಮಾಡುವುದು ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್‌ಬಿಐ ಈ ಚಿಲ್ಲರೆ ನೇರ ಯೋಜನೆಯನ್ನು ಆರಂಭ ಮಾಡಿದೆ. ಹೂಡಿಕೆದಾರರು ಉಚಿತವಾಗಿ ಸರ್ಕಾರಿ ಷೇರು ಖಾತೆಗಳನ್ನು ತೆರೆಯಬಹುದಾಗಿದೆ. ಆನ್‌ಲೈನ್‌ ಮೂಲಕ ಉಚಿತ ಸರ್ಕಾರಿ ಷೇರು ಖಾತೆಗಳನ್ನು ತೆರೆದು ನಿರ್ವಹಣೆ ಮಾಡಬಹುದು. ಇನ್ನು ಸಮಗ್ರ ಒಂಬುಡ್ಸ್ ಮನ್ ಯೋಜನೆಯ ಮೂಲಕ ಆರ್‌ಬಿಐನಿಂದ ನಿಯಂತ್ರಣ ಮಾಡುವ ಘಟಕಗಳ ವಿರುದ್ಧ ಗ್ರಾಹಕರು ನೀಡುವ ದೂರುಗಳನ್ನು ನಿರ್ವಹಣೆ ಮಾಡಲಾಗುತ್ತದೆ. ಜನರಿಗೆ ಇರುವ ಅನುಮಾನಗಳನ್ನು, ದೂರುಗಳನ್ನು ಬಗೆಹರಿಸಲಾಗುತ್ತದೆ. 'ಒಂದು ರಾಷ್ಟ್ರ- ಒಂದು ಒಂಬುಡ್ಸ್ ಮನ್' ಎಂಬ ಧ್ಯೇಯ ವಾಕ್ಯವನ್ನು ಈ ಸಮಗ್ರ ಒಂಬುಡ್ಸ್ ಮನ್ ಯೋಜನೆ ಹೊಂದಿದೆ.

(ಒನ್‌ಇಂಡಿಯಾ ಸುದ್ದಿ)

English summary
PM Narendra Modi Launched 2 Customer-Centric RBI Schemes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X