ಸದ್ಯಕ್ಕೆ ಭಾನುವಾರದಂದು ಪೆಟ್ರೋಲ್ ಬಂಕ್ ಬಂದ್ ಮಾಡಲ್ಲ

Posted By:
Subscribe to Oneindia Kannada

ಬೆಂಗಳೂರು, ಮೇ 14 : ಭಾನುವಾರದಂದು ಬಂಕ್ ಮುಚ್ಚುವ ನಿರ್ಧಾರ ಕೈಗೊಂಡಿದ್ದ ಪೆಟ್ರೋಲ್ ಬಂಕ್ ಮಾಲೀಕರು ತಮ್ಮ ತೀರ್ಮಾನದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆ.

ಭಾನುವಾರ ರಜೆ ಘೋಷಿಸಿ ಸೋಮವಾರ ಬೆಳಗ್ಗೆ 9 ರಿಂದ 6 ಗಂಟೆವರೆಗೆ ಮಾತ್ರ ಬಂಕ್ ತೆರೆಯಲು ತೀರ್ಮಾನಿಸಿದ್ದರು. ಮೇ 17ರಂದು ಈ ಬಗ್ಗೆ ತೈಲ ಕಂಪೆನಿಗಳ ಜತೆ ಪೆಟ್ರೋಲ್ ಬಂಕ್ ಮಾಲೀಕರು ಮಾತುಕತೆ ನಡೆಸಲಿದ್ದಾರೆ.

Petrol pumps to operate on Sundays for now

ಕಮಿಷನ್ ಹೆಚ್ಚಳ, ಡೀಲರ್ ಗಳಿಗೆ ಹೆಚ್ಚಿನ ಸೌಲಭ್ಯ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಭಾನುವಾರದಂದು ಪೆಟ್ರೋಲ್ ಬಂಕ್ ಬಂದ್ ಮಾಡಲು ನಿರ್ಧರಿಸಲಾಗಿತ್ತು. ದೇಶದಾದ್ಯಂತ ಕನಿಷ್ಠ 52,800 ಪೆಟ್ರೋಲ್ ಬಂಕ್ ಗಳು ಭಾನುವಾರದಂದು ಕಾರ್ಯ ನಿರ್ವಹಿಸದಿರಲು ನಿರ್ಧರಿದ್ದವು.

ಮೇ 10ರಿಂದ ತೈಲ ಖರೀದಿ ಬಂದ್ ಮಾಡಲಾಗಿತ್ತು. ಮೇ 15ರ ಸೋಮವಾರದಿಂದ ಶನಿವಾರದ ತನಕ ಬೆಳಗ್ಗೆ 9 ರಿಂದ 6 ಗಂಟೆವರೆಗೆ ಮಾತ್ರ ಬಂಕ್ ತೆರೆಯಲು ತೀರ್ಮಾನಿಸಿದ್ದರು.[ಮೇ 1ರಿಂದ ಆಯ್ದ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಆಯಾ ದಿನವೇ ನಿಗದಿ]

ವಿವಿಧ ಬೇಡಿಕೆಗಳು:
* ಅಪೂರ್ವ ಚಂದ್ರ ಕಮಿಟಿ ವರದಿ ಜಾರಿಯಾಗಬೇಕು.
* ಜನವರಿಯಿಂದ ಜುಲೈನೊಳಗೆ ಆರು ತಿಂಗಳೊಳಗೆ ಎಲ್ಲ ಬಿಲ್‍ಗಳ ಪರಿಷ್ಕರಣೆಯಾಗಬೇಕು.
* ಈಗ ಇರುವ ಕಮಿಷನ್ ಹೆಚ್ಚಳ ಮಾಡಬೇಕು.
* ಪೆಟ್ರೋಲ್‍ಗೆ 15, ಡೀಸೆಲ್‍ಗೆ 10 ಪೈಸೆ ಕಮಿಷನ್ ಮಾಲೀಕರಿಗೆ ನೀಡಬೇಕು.
* ಕೇಂದ್ರ ಸರ್ಕಾರದ ನಿರ್ದೇಶನದ ಮೇಲೆ ವಾರದ ರಜೆ ನೀಡಲು ತೀರ್ಮಾನಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A group of petrol pump owners on Saturday said it has deferred the plan to shut shop on Sundays.
Please Wait while comments are loading...