ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 20ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

|
Google Oneindia Kannada News

ನವದೆಹಲಿ, ನವೆಂಬರ್ 11: ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸತತ 20ನೇ ದಿನವೂ ಇಳಿಕೆ ಕಂಡು ಬಂದಿದೆ.. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾನುವಾರ (ನವೆಂಬರ್ 11) ಬೆಳಗ್ಗೆ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್ ಬೆಲೆ 71 ಡಾಲರ್ ನಷ್ಟಿದೆ. ಇತ್ತೀಚೆಗೆ 86 ಡಾಲರ್ ಪ್ರತಿ ಬ್ಯಾರೆಲ್ ನಂತೆ ಏರಿಕೆಯಾಗಿತ್ತು.

ಇದಲ್ಲದೆ, ಡಾಲರ್ ಎದುರು ರೂಪಾಯಿ ಮೌಲ್ಯ ಸುಧಾರಿಸಿದೆ. ಹೀಗಾಗಿ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಇಳಿಕೆಯಾಗುತ್ತಿದೆ.

ನ.9ರಂದು ಪೆಟ್ರೋಲ್ ದರ 15 ಪೈಸೆ ಇಳಿಕೆ, ಯಾವ ನಗರದಲ್ಲಿ ಎಷ್ಟು ದರ?ನ.9ರಂದು ಪೆಟ್ರೋಲ್ ದರ 15 ಪೈಸೆ ಇಳಿಕೆ, ಯಾವ ನಗರದಲ್ಲಿ ಎಷ್ಟು ದರ?

ತೈಲ ಬೆಲೆ ಮೇಲೆ ನಿಯಂತ್ರಣ ಸಿಗದ ಕಾರಣ ಜನಸಾಮಾನ್ಯರ ಮೇಲೆ ತೀವ್ರ ಆರ್ಥಿಕ ಹೊರೆಯಾಗುತ್ತಿದೆ ಎಂದು ವಿರೋಧಪಕ್ಷಗಳ ಪ್ರತಿಭಟನೆ ನಡೆಸಿ, ತೀವ್ರ ಒತ್ತಡ ಹೇರಿದ್ದವು. ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಅಕ್ಟೋಬರ್ 4ರಂದು 2.50 ರೂ. ಇಳಿಕೆ ಮಾಡಿತ್ತು. ಆದರೆ, ಕಡಿಮೆ ಮಾಡಿದ ಮೊತ್ತವನ್ನು ಮೀರಿ ಹತ್ತೇ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಬೆಲೆ ಸತತವಾಗಿ ಕುಸಿಯುತ್ತಿದೆ.

ಬೆಂಗಳೂರಿನಲ್ಲಿ ಕೂಡ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ

ಬೆಂಗಳೂರಿನಲ್ಲಿ ಕೂಡ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ

ಬೆಂಗಳೂರಿನಲ್ಲಿ ಕೂಡ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 16 ಪೈಸೆ ಇಳಿಕೆ ಕಂಡು, ಪ್ರತಿ ಲೀಟರ್ ಗೆ 78.35ರು ನಷ್ಟಿತ್ತು. ಡೀಸೆಲ್ ಬೆಲೆ 12 ಪೈಸೆ ಇಳಿಕೆಯಾಗಿದ್ದು, 72.85ರು ನಷ್ಟಿದೆ

ಶನಿವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 18 ಪೈಸೆ ಕಡಿಮೆಯಾಗಿದ್ದು, 78.51ರು ನಷ್ಟಿತ್ತು. ಡೀಸೆಲ್ ಬೆಲೆ 16ಪೈಸೆ ಕಡಿಮೆಯಾಗಿದ್ದು, 72.97ರು ನಷ್ಟಿದೆ.

ನವದೆಹಲಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿಯಲ್ಲಿ ಭಾನುವಾರದಂದು ಪೆಟ್ರೋಲ್ 16 ಪೈಸೆ ಕಡಿತಗೊಂಡಿದ್ದು, ಪ್ರತಿ ಲೀಟರ್ ಗೆ 77.73ರು ನಷ್ಟಿದೆ. ಶನಿವಾರದಂದು ಬೆಲೆ 17 ಪೈಸೆ ಕದಿತಗೊಂಡು, 77.89ರು ನಷ್ಟಿತ್ತು.

ಡೀಸೆಲ್ ಬೆಲೆ ಭಾನುವಾರದಂದು 12 ಪೈಸೆ ಇಳಿಕೆಯಾಗಿದ್ದು, 72.46 ರು ನಷ್ಟಿದೆ. ಶನಿವಾರದಂದು 16 ಪೈಸಿ ಇಳಿಕೆಯಾಗಿ 72.58ರು ನಷ್ಟಿತ್ತು.

ವಾಣಿಜ್ಯ ನಗರಿ ಮುಂಬೈಯಲ್ಲಿ ಇಂಧನ ಬೆಲೆ

ವಾಣಿಜ್ಯ ನಗರಿ ಮುಂಬೈಯಲ್ಲಿ ಇಂಧನ ಬೆಲೆ

ವಾಣಿಜ್ಯ ನಗರಿ ಮುಂಬೈಯಲ್ಲಿ ಇಂಧನ ಬೆಲೆ ಬೇರೆ ನಗರಗಳಿಗೆ ಹೋಲಿಸಿದರೆ ಯಾವಾಗಲೂ ಅಧಿಕವಾಗಿರುತ್ತದೆ. ಇದಕ್ಕೆ ಜಿಎಸ್ ಟಿ ಹೇರಿಕೆಯೇ ಕಾರಣವಾಗಿದೆ.

ಆದರೆ, ಮುಂಬೈ ನಗರದಲ್ಲಿ ಭಾನುವರದದಂದು ಪೆಟ್ರೋಲ್ ದರ 16ಪೈಸೆ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ 83.24ರು ನಷ್ಟಿದೆ. ಶನಿವಾರದಂದು 17 ಪೈಸೆ ಇಳಿಕೆಯಾಗಿ 83.40ರು ನಷ್ಟಿತ್ತು.

ಭಾನುವಾರದಂದು ಡೀಸೆಲ್ ಬೆಲೆಯಲ್ಲಿ 13 ಪೈಸೆ ಇಳಿಕೆಯಾಗಿ, ಪ್ರತಿ ಲೀಟರ್ ಗೆ 75.92ರು ನಷ್ಟಿದೆ. ಶನಿವಾರದಂದು 17 ಪೈಸೆ ಇಳಿಕೆಯಾಗಿ 76.05ರು ನಷ್ಟಿತ್ತು.

ಕೋಲ್ಕತಾ ಹಾಗೂ ಚೆನ್ನೈ ನಗರಗಳಲ್ಲಿ ಬೆಲೆ

ಕೋಲ್ಕತಾ ಹಾಗೂ ಚೆನ್ನೈ ನಗರಗಳಲ್ಲಿ ಬೆಲೆ

ಕೋಲ್ಕತಾ ನಗರದಲ್ಲಿ ಭಾನುವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 16ಪೈಸೆ ಇಳಿಕೆಯಾಗಿ 76.65ರು ನಷ್ಟಿದೆ.

ಡೀಸೆಲ್ ಬೆಲೆಯಲ್ಲಿ 12 ಪೈಸೆ ಇಳಿಕೆಯಾಗಿದ್ದು, 74.32ರು ನಷ್ಟಿದೆ. ಶನಿವಾರದಂದು ಡೀಸೆಲ್ ದರದಲ್ಲಿ 16 ಪೈಸೆ ಇಳಿಕೆಯಾಗಿ, 74.44ರೂ.ಗೆ ಮಾರಾಟ ಆಗುತ್ತಿತ್ತು.

ಚೆನ್ನೈನಲ್ಲಿ ಭಾನುವಾರದಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 80.73 ರು(17ಪೈಸೆ ಇಳಿಕೆ) ಹಾಗೂ ಡೀಸೆಲ್ ಬೆಲೆ 80.90ರು(18 ಪೈಸೆ ಇಳಿಕೆ) ನಷ್ಟಿದೆ.

English summary
Petrol, diesel prices were slashed again on Sunday (Nov 11). Petrol prices fell by 16 paise per litre in Delhi while diesel prices dipped by 12 paise per litre. Diesel and petrol prices have been coming down for quite some days now due to a dip in crude oil price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X