ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ

ನವದೆಹಲಿ, ಏಪ್ರಿಲ್ 01: ಕಳೆದ 4 ವರ್ಷಗಳಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿ, ದಾಖಲೆ ಬರೆದಿದೆ.

ಭಾನುವಾರದಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 18 ಪೈಸೆ ಏರಿಕೆಯಾದ ಬಳಿಕ ದೆಹಲಿಯಲ್ಲಿ ಭಾನುವಾರದಂದು ಪೆಟ್ರೋಲ್ ಪ್ರತಿ ಲೀಟರ್ ಗೆ 73.73 ರೂ. ತಲುಪಿದೆ. ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದ್ದು, ಪ್ರತಿ ಲೀಟರ್ ಗೆ 64.58 ರೂ. ಮುಟ್ಟಿದೆ.

2014 ರ ಸೆಪ್ಟಂಬರ್ 14 ರಂದು 76.06 ರೂ. ಇದ್ದ ಪೆಟ್ರೋಲ್, ನಂತರದಲ್ಲಿ ಕೊಂಚ ತಗ್ಗಿತ್ತು. ಆದರೆ, ಭಾನುವಾರದದು ಏರಿಕೆಯಾದ ಬಳಿಕ 4 ವರ್ಷಗಳಲ್ಲಿನ ಹೆಚ್ಚಿನ ಬೆಲೆಯನ್ನು ದಾಖಲಿಸಿದೆ.

Petrol price hits 4-year high, diesel at highest level

ಫೆಬ್ರವರಿ 07, 2018ರಂದು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 64.22 ರೂ. ತಲುಪಿ, ದಾಖಲೆ ಬರೆದಿತ್ತು. ಈಗ ಲೀಟರ್ 64.58 ರೂ. ತಲುಪಿ ಮತ್ತೆ ಹೊಸ ದಾಖಲೆ ಬರೆದಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತ, ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಬೆಲೆ ಸಮತೋಲನ ಕಾಯ್ದುಕೊಳ್ಳಲಾಗಿದೆ. ಒಟ್ಟಾರೆ, ಅರುಣ್ ಜೇಟ್ಲಿ ಅವರು ಕೇಂದ್ರ ವಿತ್ತ ಸಚಿವರಾದ ಬಳಿಕ 9 ಸಲ ಅಬಕಾರಿ ಸುಂಕ ಏರಿಕೆ ಮಾಡಲಾಗಿದೆ.

ಅಬಕಾರಿ ಸುಂಕ ಇಳಿಕೆಗೆ ಸಲಹೆ: ಪ್ರತಿ ಲೀಟರ್ ಪೆಟ್ರೋಲ್ ಗೆ 2 ರೂ. ಅಬಕಾರಿ ಸುಂಕ ಕಡಿಮೆ ಮಾಡಿ, ವ್ಯಾಟ್ ಇಳಿಕೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಾಗಿತ್ತು.

ಆದರೆ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಸುಂಕ ಇಳಿಕೆ ಮಾಡಿದ್ದರೂ, ಉಳಿದ ರಾಜ್ಯಗಳು ವ್ಯಾಟ್ ಇಳಿಕೆ ಮಾಡಲಿಲ್ಲ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಹಾಗೂ ಹಿಂದುಸ್ತಾನ್ ಕಾರ್ಪೊರೇಷನ್ ಸಂಸ್ಥೆಗಳು ಕಳೆದ ಜೂನ್ ತಿಂಗಳಿನಲ್ಲಿ 15 ವರ್ಷಗಳ ಪದ್ಧತಿಯನ್ನು ಕೈಬಿಡಲಾಯಿತು. ಪ್ರತಿ ತಿಂಗಳ ಮೊದಲ ದಿನ ಹಾಗೂ 16ನೇ ದಿನದಂದು ಬೆಲೆ ಏರಿಕೆ ಮಾಡುವುದನ್ನು ಬಿಟ್ಟು ಪ್ರತಿದಿನ ಬೆಲೆ ಏರಿಳಿತಕ್ಕೆ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+