ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 7ನೇ ದಿನ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸವಿಲ್ಲ

|
Google Oneindia Kannada News

ನವದೆಹಲಿ, ಡಿ. 14: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಇಂಧನ ದರ ಏರಿಕೆ ಕಂಡಿತ್ತು. ಆದರೆ, ಕಳೆದ 7 ದಿನಗಳಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.

ಎರಡು ತಿಂಗಳ ವಿರಾಮದ ಬಳಿಕ ದೇಶೀಯವಾಗಿ ನವೆಂಬರ್ 20ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಏರಿಕೆ ಮಾಡಿದವು. ನಂತರದ ದಿನಗಳಲ್ಲಿ ತೈಲ ದರವು ಸತತ ಏರಿಕೆ ಕಂಡು ಬಂದಿತ್ತು. 2018ರಲ್ಲಿ ಪೆಟ್ರೋಲ್ ಬೆಲೆ ದಾಖಲೆಯ 84ರು ಮುಟ್ಟಿತ್ತು. ಈ ದಾಖಲೆ ಕಳೆದ ವಾರ ಧೂಳಿಪಟವಾಗಿತ್ತು.

''ಪೆಟ್ರೋಲ್ ಬಂಕ್‌ಗೆ ನರೇಂದ್ರ ಮೋದಿ ವಸೂಲಿ ಕೇಂದ್ರ ಎಂದು ಹೆಸರಿಡಿ''''ಪೆಟ್ರೋಲ್ ಬಂಕ್‌ಗೆ ನರೇಂದ್ರ ಮೋದಿ ವಸೂಲಿ ಕೇಂದ್ರ ಎಂದು ಹೆಸರಿಡಿ''

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚಾತೈಲ ದರ 50 ಡಾಲರ್ ಪ್ರತಿ ಬ್ಯಾರೆಲ್ ನಷ್ಟಿದೆ. ಕೊರೊನಾ ಲಸಿಕೆ, ಬ್ರೆಕ್ಸಿಟ್ ಒಪ್ಪಂದ, ಜಾಗತಿಕ ತೈಲ ಬೇಡಿಕೆ ಮುಂತಾದ ಅಂಶಗಳು ತೈಲ ಬೆಲೆಯನ್ನು ನಿರ್ಧರಿಸುತ್ತಿವೆ.

Petrol, Diesel Rates Unchanged For Seventh Straight Day

ಡಿಸೆಂಬರ್ 14ರಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 83.71 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 73.87 ರು ಪ್ರತಿ ಲೀಟರ್ ನಷ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ. ಕಳೆದ 22 ದಿನಗಳಲ್ಲಿ ದೆಹಲಿಯಲ್ಲಿ ಪೆಟ್ರೋಲ್ ದರ 2.65 ರು ಪ್ರತಿ ಲೀಟರ್ ಹಾಗೂ ಡೀಸೆಲ್ 3.40 ಪ್ರತಿ ಲೀಟರ್ ನಷ್ಟು ಏರಿಕೆ ಕಂಡಿದೆ.

ನಗರ-ಪೆಟ್ರೋಲ್-ಡೀಸೆಲ್
ದೆಹಲಿ-83,71 ರು- 73.87 ರು
ಮುಂಬೈ- 90.34 ರು - 80.51ರು
ಚೆನ್ನೈ- 86.51 ರು- 79.21ರು
ಕೋಲ್ಕತಾ- 85.19 ರು -77.44 ರು
ಬೆಂಗಳೂರು-86.51 ರು-78.31 ರು

Recommended Video

ಬೆಂಗಳೂರು: ಜೆಡಿಎಸ್ ವರಿಷ್ಠರ ಭೇಟಿಯಾದ ಸಿಎಂ ಇಬ್ರಾಹಿಂ | Oneindia Kannada

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary
Petrol and diesel prices remained unchanged for seventh straight day on Monday (December 14).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X