• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸತತ 11ನೇ ದಿನ ತೈಲ ಗ್ರಾಹಕರ ಜೇಬಿಗೆ ಕತ್ತರಿ: ಯಾವ ನಗರದಲ್ಲಿ ಎಷ್ಟು ದರ?

|

ನವದೆಹಲಿ, ಫೆಬ್ರವರಿ 19: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ 11ನೇ ದಿನವೂ ಏರಿಕೆಯಾಗಿದೆ. ಇದೇ ಮೊದಲ ಬಾರಿ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90 ರೂ ಗಡಿ ದಾಟಿದೆ. ಅಬಕಾರಿ ಸುಂಕ ಮತ್ತು ವ್ಯಾಟ್ ಹೆಚ್ಚಳದ ಕಾರಣ ಡೀಸೆಲ್ ಬೆಲೆಯಲ್ಲಿ ಸಹ ದಾಖಲೆಯ ಏರಿಕೆ ಕಂಡಿದೆ.

ದೇಶದ ಸರ್ಕಾರಿ ಸ್ವಾಮ್ಯದ ಹಾಗೂ ಸರ್ಕಾರಿ ನಿಯಂತ್ರನದ ತೈಲ ಮಾರುಕಟ್ಟೆ ಕಂಪೆನಿಗಳು ಶುಕ್ರವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ದೇಶಾದ್ಯಂತ ಪ್ರಮುಖ ನಗರಗಳಲ್ಲಿ 27-35 ಪೈಸೆಗಳವರೆಗೆ ಏರಿಕೆ ಮಾಡಿವೆ. ಭಾರತದಲ್ಲಿನ ಅಧಿಕ ಅಬಕಾರಿ ಸುಂಕ ಹಾಗೂ ವ್ಯಾಟ್ ತೆರಿಗೆಯ ಹೊರೆಯ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗಿರುವುದು ದೇಶಿ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯ ಅಲೆಯನ್ನು ಮತ್ತಷ್ಟು ಕದಡಿದೆ.

ಪೆಟ್ರೋಲ್ ಬೆಲೆ ಏರಿಕೆ: ಹಿಂದಿನ ಸರ್ಕಾರಗಳನ್ನು ಹೊಣೆ ಮಾಡಿದ ಪ್ರಧಾನಿ ಮೋದಿ

ಕಚ್ಚಾ ತೈಲ ಉತ್ಪಾದನೆಯ ನಿಯಂತ್ರಣವನ್ನು ನಿಲ್ಲಿಸುವಂತೆ ಮತ್ತು ಬೆಲೆ ಇಳಿಕೆ ಮಾಡುವಂತೆ ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಮನವಿ ಮಾಡಿದ್ದರು. ಜಗತ್ತಿನ ಮೂರನೇ ಅತಿ ದೊಡ್ಡ ತೈಲ ಆಮದುದಾರ ದೇಶವಾದ ಭಾರತವು ತನ್ನ ತೈಲ ಅಗತ್ಯದಲ್ಲಿ ಶೇ 85ರಷ್ಟು ಆಮದಿನ ಮೂಲಕ ಪೂರೈಸಿಕೊಳ್ಳುತ್ತಿದೆ.

ದೆಹಲಿಯಲ್ಲಿ 90 ಗಡಿ ದಾಟಿದ ಪೆಟ್ರೋಲ್

ದೆಹಲಿಯಲ್ಲಿ 90 ಗಡಿ ದಾಟಿದ ಪೆಟ್ರೋಲ್

ಇಂದಿನ ಬೆಲೆ ಏರಿಕೆಯಿಂದ ರಾಜಧಾನಿ ದೆಹಲಿಯಲ್ಲಿ ಗುರುವಾರ 89.88 ರೂ ಇದ್ದ ಲೀಟರ್ ಪೆಟ್ರೋಲ್ ಬೆಲೆ, 31 ಪೈಸೆ ಹೆಚ್ಚಾಗಿದ್ದು, 90.19 ರೂಪಾಯಿಗೆ ತಲುಪಿದೆ. ಹಾಗೆಯೇ ಡೀಸೆಲ್ ಬೆಲೆ ನಿನ್ನೆ ಲೀಟರ್‌ಗೆ 80.27 ರೂ ಇತ್ತು. ಇಂದು 80.60 ರೂಪಾಯಿಗೆ ಹೆಚ್ಚಳವಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ವೆಬ್‌ಸೈಟ್ ಮಾಹಿತಿ ನೀಡಿದೆ.

ಕಳೆದ 11 ದಿನಗಳಲ್ಲಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.26 ರೂಪಾಯಿ ಹೆಚ್ಚಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 3.81 ರೂ ಹೆಚ್ಚಳ ಕಂಡಿದೆ.

ಬೆಂಗಳೂರಲ್ಲಿ ಇಂದು ತೈಲ ಬೆಲೆ

ಬೆಂಗಳೂರಲ್ಲಿ ಇಂದು ತೈಲ ಬೆಲೆ

ಬೆಂಗಳೂರಿನಲ್ಲಿ ಗುರುವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 92.94 ರೂ ಇತ್ತು. ಇಂದು ಪೆಟ್ರೋಲ್ ಬೆಲೆ 93.21ಕ್ಕೆ ತಲುಪಿದ್ದು, 27 ಪೈಸೆ ಹೆಚ್ಚಳ ಕಂಡಿದೆ. ಡೀಸೆಲ್ ಬೆಲೆಯಲ್ಲಿ 35 ಪೈಸೆ ಏರಿಕೆಯಾಗಿದ್ದು ಲೀಟರ್‌ಗೆ 85.09 ರೂ. ದಿಂದ 85.44 ರೂಗೆ ತಲುಪಿದೆ.

Explained: ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿ ಏಕೆ?

ಮುಂಬೈನಲ್ಲಿ ದರವೆಷ್ಟು?

ಮುಂಬೈನಲ್ಲಿ ದರವೆಷ್ಟು?

ಮುಂಬೈನಲ್ಲಿ ಪೆಟ್ರೋಲ್ ಬೆಲೆಯು ಗುರುವಾರಕ್ಕಿಂತ 30 ಪೈಸೆಯಷ್ಟು ಹೆಚ್ಚಳವಾಗಿದೆ. ಮುಂಬೈನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.62 ರೂಪಾಯಿಗೆ ತಲುಪಿದೆ. ಗುರುವಾರ 87.32 ರೂ ಇದ್ದ ಪ್ರತಿ ಲೀಟರ್ ಡೀಸೆಲ್ ದರ ಇಂದು 87.67 ರೂ. ಅಂದರೆ 35 ಪೈಸೆಯಷ್ಟು ಏರಿಕೆಯಾಗಿದೆ.

ಕೋಲ್ಕತಾದಲ್ಲಿ ದರವೆಷ್ಟು?

ಕೋಲ್ಕತಾದಲ್ಲಿ ದರವೆಷ್ಟು?

ಕೋಲ್ಕತಾದಲ್ಲಿ ಕೂಡ ಪೆಟ್ರೋಲ್ ದರ 30 ಪೈಸೆ ಹೆಚ್ಚಳ ಕಂಡಿದ್ದು, ಗುರುವಾರದ 91.11 ರೂಪಾಯಿ ದರದಿಂದ ಶುಕ್ರವಾರ 91.41 ಪೈಸೆಗೆ ತಲುಪಿದೆ. ಡೀಸೆಲ್ ಬೆಲೆಯಲ್ಲಿ 33 ಪೈಸೆ ಏರಿಕೆಯಾಗಿದೆ. ಕೋಲ್ಕತಾದಲ್ಲಿ ಲೀಟರ್ ಡೀಸೆಲ್ ದರ ಶುಕ್ರವಾರ 84.19 ರೂ ಇದೆ.

ಚೆನ್ನೈನಲ್ಲಿ ದರ

ಚೆನ್ನೈನಲ್ಲಿ ದರ

ನೆರೆಯ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 27 ಪೈಸೆ ತುಟ್ಟಿಯಾಗಿದ್ದು, ಲೀಟರ್‌ಗೆ 92.25ಕ್ಕೆ ಮುಟ್ಟಿದೆ. ಡೀಸೆಲ್ ಬೆಲೆಯಲ್ಲಿ ಸಹ 32 ಪೈಸೆಯಷ್ಟು ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ ಗುರುವಾರದ 85.31 ರೂಪಾಯಿಯಿಂದ 85.63ಕ್ಕೆ ತಲುಪಿದೆ.

ಇತರೆ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಇತರೆ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಹೈದರಾಬಾದ್: 93.78 ರೂ. (ಪೆಟ್ರೋಲ್), 87.91 ರೂ. (ಡೀಸೆಲ್)

ಪಟ್ನಾ: 92.54 ರೂ. (ಪೆಟ್ರೋಲ್), 85.84 ರೂ. (ಡೀಸೆಲ್)

ಭೋಪಾಲ್: 98.20 ರೂ. (ಪೆಟ್ರೋಲ್), 88.84 ರೂ. (ಡೀಸೆಲ್)

ಜೈಪುರ: 96.69 ರೂ. (ಪೆಟ್ರೋಲ್), 89.05 ರೂ. (ಡೀಸೆಲ್)

ಗುರುಗ್ರಾಮ: 88.16 ರೂ. (ಪೆಟ್ರೋಲ್), 81.18 ರೂ. (ಡೀಸೆಲ್)

English summary
Petrol and diesel prices were reised for 11th straight day in India. Here is the list of fuel price in major cities across country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X