11 ದಿನಗಳಿಂದ ಇಂಧನ ದರ ಏರಿಕೆ, ಏನಿದ್ದಕ್ಕೆ ಕಾರಣ?

ಬೆಂಗಳೂರು, ಜೂನ್ 16: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸುಮಾರು 82 ದಿನಗಳ ಕಾಲ ಬೆಲೆ ಏರಿಕೆಗೆ ಬ್ರೇಕ್ ಹಾಕಿದ್ದವು. ಜೂನ್ 7ರಿಂದ ಮತ್ತೆ ಏರಿಕೆ ಶುರು ಮಾಡಿದ್ದು, ಪ್ರತಿ ದಿನ ಬೆಲೆ ಪರಿಷ್ಕರಣೆಯ ಆದೇಶವನ್ನು ಪಾಲಿಸುತ್ತಾ ಬಂದಿವೆ. ಅದರಂತೆ ಸತತ 11ನೇ ದಿನ(ಜೂನ್ 17) ಕೂಡಾ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿವೆ.

Recommended Video

      Rahul Gandhi wants Modi to speak up about Indo China issue | Oneindia Kannada

      ಜೂನ್ 7ರಿಂದ ಇಂದಿನ ತನಕ ಸುಮಾರು 6 ರು ನಷ್ಟು ಏರಿಕೆ ಕಂಡು ಬಂದಿದೆ. ನವದೆಹಲಿಯಲ್ಲಿಂದು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 77.28 ರು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 75.79 ರು ನಷ್ಟಿದೆ.

      ಬುಧವಾರ (ಜೂನ್ 17) ಬೆಳಗ್ಗೆ ಮತ್ತೊಮ್ಮೆ ತೈಲ ಬೆಲೆ ಏರಿಕೆ ಮಾಡಲಾಗಿದೆ. ಪೆಟ್ರೋಲ್ ದರದಲ್ಲಿ 55 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ ದರಲ್ಲಿ 69 ಪ್ರತಿ ಲೀಟರ್ ನಂತೆ ಹೆಚ್ಚಳವಾಗಿದೆ. ಒಟ್ಟಾರೆ ಕಳೆದ 10 ದಿನಗಳಲ್ಲಿ ಪೆಟ್ರೋಲ್ ದರದಲ್ಲಿ 6.02 ರು ಹೆಚ್ಚಳವಾಗಿದ್ದರೆ, ಡೀಸೆಲ್ ದರಲ್ಲಿ 6.49 ರು ಹೆಚ್ಚಳವಾಗಿದೆ.

      Petrol, diesel price hiked for 11th day, Check todays rate

      ಭಾರತದ ಇಂಧನ ಮಾರುಕಟ್ಟೆಯಲ್ಲಿ ಶೇ 90ರಷ್ಟು ಪಾಲನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಹೊಂದಿವೆ ಹಾಗೂ ತೈಲ ದರ ನಿಗದಿಯನ್ನು ನಿರ್ಧರಿಸುತ್ತಾ ಬಂದಿವೆ. ತೈಲ ಬೆಲೆ ಏರಿಕೆಗೆ ಜಾಗತಿಕವಾಗಿ ಕಚಾತೈಲ ಬೆಲೆಯಲ್ಲಿ ವ್ಯತ್ಯಯ, ಅಬಕಾರಿ ಸುಂಕ ಹೆಚ್ಚಳ, ಆಯಾ ರಾಜ್ಯಗಳಲ್ಲಿನ ಪ್ರತ್ಯೇಕ ವ್ಯಾಟ್ ದರ ಎಲ್ಲವೂ ಕಾರಣವಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+