ಮತದಾನ ದಿನಾಂಕಕ್ಕೆ ತಕ್ಕಂತೆ ಇಂಧನ ದರ ಏರಿಕೆ ನಿಗದಿ?
ನವದೆಹಲಿ, ಏಪ್ರಿಲ್ 4: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಭಾನುವಾರ (ಏಪ್ರಿಲ್ 4)ದಂದು ಯಾವುದೇ ಬದಲಾವಣೆಯಾಗಿಲ್ಲ. ಈ ಮೂಲಕ ಸತತ ಐದು ದಿನಗಳಿಂದ ಇಂಧನ ದರವನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳು ಪರಿಷ್ಕರಿಸಲು ಹೋಗಿಲ್ಲ. ಕಳೆದ ಮಂಗಳವಾರದಂದು ದೇಶದೆಲ್ಲೆಡೆ ಪೆಟ್ರೋಲ್ ಬೆಲೆ 19 ರಿಂದ 22 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 21 ರಿಂದ 23 ಪ್ರತಿ ಲೀಟರ್ ಇಳಿಕೆಯಾಗಿತ್ತು.
ದಾಖಲೆ ಮಟ್ಟಕ್ಕೆ ಇಂಧನ ದರ ಏರಿಕೆಯಾದರೂ ನಂತರ ತಗ್ಗಲಿದೆ, ಸದ್ಯ ಚುನಾವಣೆ ನಿಮಿತ್ತ ನೋಡಿಕೊಂಡು ಬೆಲೆ ಏರಿಕೆ/ಇಳಿಕೆ ಮಾಡಲಾಗುತ್ತಿದೆ.
ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಸುಮಾರು 24 ದಿನಗಳ ಕಾಲ ತೈಲ ಬೆಲೆ ಏರಿಕೆಯನ್ನು ತಡೆ ಹಿಡಿಯಲಾಗಿತ್ತು. ಕಚ್ಚಾತೈಲ ಬೆಲೆ ಏರುಪೇರಾದರೂ ತೈಲ ಕಂಪನಿಗಳು ಇಂಧನ ಬೆಲೆ ಪರಿಷ್ಕರಿಸಿರಲಿಲ್ಲ. ಮಾರ್ಚ್ 27ರಿಂದ ಕೆಲ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮೇ 2ರಂದು ಫಲಿತಾಂಶ ಹೊರಬರಲಿದೆ. ಮತದಾನ ದಿನಾಂಕ ನೋಡಿಕೊಂಡು ಬೆಲೆ ಏರಿಕೆ, ಇಳಿಕೆ ಮಾಡಲು ತೈಲ ಕಂಪನಿಗಳು ನಿರ್ಧರಿಸಿರುವ ಸುದ್ದಿ ಬಂದಿದೆ.
ಇದೇ ವೇಳೆ ಜೆಟ್ ಇಂಧನ ದರ ಶೇ 3ರಷ್ಟು ತಗ್ಗಿಸಲಾಗಿದೆ. ಎಟಿಎಫ್ 1,887 ರು ಪ್ರತಿ ಕಿಲೋಲೀಟರ್‌ನಂತೆ ಇಳಿಕೆಯಾಗಿದ್ದು, ದೆಹಲಿಯಲ್ಲಿ ಎಟಿಎಫ್ ದರ 58,374.16 ರು ಪ್ರತಿ ಕಿಲೋಲೀಟರ್‌ನಷ್ಟಿದೆ. ಆದರೆ, ಏಪ್ರಿಲ್ 1ರಿಂದ ವಿಮಾನಯಾನ ದುಬಾರಿಯಾಗಿದೆ.

ಏಪ್ರಿಲ್ 04ರಂದು ಪೆಟ್ರೋಲ್ ಬೆಲೆ
ಫೆಬ್ರವರಿ 27ರ ಬಳಿಕ ಮತ್ತೆ ಇಂಧನ ದರ ಪರಿಷ್ಕರಣೆಗೊಂಡಿರಲಿಲ್ಲ. ಮಾರ್ಚ್ 25ರಂದು ಪೆಟ್ರೋಲ್ ಬೆಲೆಯಲ್ಲಿ 21 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 20 ಪೈಸೆ ತಗ್ಗಿಸಲಾಗಿತ್ತು.
ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 90.56 ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 23 80.87 ರೂಪಾಯಿ ಆಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ.

ಈ ವರ್ಷದಲ್ಲಿ ಇಂಧನ ದರ 26 ಬಾರಿ ಪರಿಷ್ಕರಣೆ
ಒಟ್ಟಾರೆ, ಈ ವರ್ಷದಲ್ಲಿ ಇಂಧನ ದರ 26 ಬಾರಿ ಪರಿಷ್ಕರಣೆಗೊಂಡಿದ್ದು, ಪೆಟ್ರೋಲ್ ಒಟ್ಟು 7.46 ಪ್ರತಿ ಲೀಟರ್ ಹಾಗೂ ಡೀಸೆಲ್ 7.60 ಪ್ರತಿ ಲೀಟರ್ ನಷ್ಟು ಏರಿಕೆಯಾಗಿತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 64.86 ಯುಎಸ್ ಡಾಲರ್( 1 USD=73.38 ರು) ಪ್ರತಿ ಬ್ಯಾರೆಲ್‌ನಷ್ಟಿದೆ. ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವುದರಿಂದ ಭಾರತದಂಥ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98ರು ಹಾಗೂ ಡೀಸೆಲ್ ಮೇಲೆ 31.80 ರು ನಷ್ಟಿದೆ.

ಪ್ರಮುಖ ನಗರಗಳಲ್ಲಿ ಏಪ್ರಿಲ್ 2ರಂದು ಇಂಧನ ದರ
ನಗರ - ಪೆಟ್ರೋಲ್- ಡೀಸೆಲ್
ದೆಹಲಿ: 90.56ರೂ- 80.87ರೂ
ಮುಂಬೈ: 96.98 ರೂ - 87.96 ರೂ
ಚೆನ್ನೈ: 92.58 ರೂ- 85.88 ರೂ
ಬೆಂಗಳೂರು: 93.59ರೂ - 85.75 ರೂ
ಕೋಲ್ಕತ್ತಾ: 90.77 ರೂ-83.75 ರೂ
ಹೈದರಾಬಾದ್: 94.16 ರು -88.20 ರು
ನೋಯ್ಡಾ: 88.91 ರೂ-81.33 ರೂ
ಪಾಟ್ನ: 92.89 ರು -86.12 ರು
ಲಕ್ನೋ: 88.85 ರು -81.27 ರು

ತೈಲ ಬೆಲೆ ನಿರ್ಧಾರ ಹೇಗೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ನಿಮ್ಮ ನಗರ, ಪಟ್ಟಣಗಳಲ್ಲಿನ ಇಂಧನ ದರವನ್ನು ತಿಳಿಯಲು ಕ್ಲಿಕ್ ಮಾಡಿ