ನವರಾತ್ರಿ ಶುಕ್ರವಾರದಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ನವದೆಹಲಿ, ಅಕ್ಟೋಬರ್ 7: ಜಾಗತಿಕವಾಗಿ ಕಚ್ಚಾತೈಲ ಬೆಲೆ 80 ಡಾಲರ್ ದಾಟಿ ಏರಿಳಿತ ಕಾಣುತ್ತಿದೆ. ಭಾರತದಲ್ಲಿ ಕಳೆದ 14 ದಿನಗಳಲ್ಲಿ 12 ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದೆ. ನೋಯ್ಡಾ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ಇಂಧನ ದರ 100 ಪ್ಲಸ್ ರು ದಾಟಿದೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಅಡುಗೆ ಅನಿಲದ ಜೊತೆಗೆ ಇಂಧನ ದರ ನಿರಂತರ ಏರಿಕೆ ಕಾಣುತ್ತಿದೆ.
ಇಂದು (ಅ.8) ದಂದು ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಿಸಲಾಗಿದೆ ಎಂದು ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಾಹಿತಿ ನೀಡಿವೆ. ಪೆಟ್ರೋಲ್ ದರ ಪ್ರತಿ ಲೀಟರ್ ಮೇಲೆ 30 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಮೇಲೆ 35 ಪೈಸೆ ಹೆಚ್ಚಳವಾಗಿದೆ. ಕಳೆದ ನಾಲ್ಕು ದಿನಗಳಿಂದ ಇಂಧನ ದರ ಸರಾಸರಿ 25-30 ಪೈಸೆಯಂತೆ ಏರಿಕೆಯಾಗುತ್ತಿದೆ. ಕಳೆದ 10 ದಿನಗಳಲ್ಲಿ ಪೆಟ್ರೋಲ್ 2.15 ರುಪಾಯಿ, ಡೀಸೆಲ್ 3.30 ರುಪಾಯಿಯಷ್ಟು ಬೆಲೆ ಹೆಚ್ಚಳ ಕಂಡಿದೆ. ಸೆ.5ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸರಾಸರಿ 15 ರಿಂದ 19 ಪೈಸೆಯಷ್ಟು ಇಳಿಕೆ ಮಾಡಲಾಗಿತ್ತು. ನಂತರ ಇಂಧನ ಬೆಲೆ ಏರಿಕೆಯಾಗುತ್ತಿದೆ.
ತಮಿಳುನಾಡಿನಂತೆ ಪುದುಚೇರಿ ಸರ್ಕಾರ ಕೂಡಾ ಪೆಟ್ರೋಲ್ ಮೇಲಿನ ತೆರಿಗೆ ತಗ್ಗಿಸಿದೆ. ಇದರಿಂದ ಪ್ರತಿ ಲೀಟರ್ ಮೇಲೆ ಸರಾಸರಿ 3 ರು ತಗ್ಗಿತ್ತು. ಹೀಗಾಗಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಬೆಲೆ ಕಡಿಮೆಯಿದೆ. ಡೀಸೆಲ್ ಬೆಲೆ ಮಾತ್ರ ಏರಿಕೆಯಾಗಿದೆ.
ಜಾಗತಿಕವಾಗಿ ಕಚ್ಚಾತೈಲ ಬೆಲೆ ತೀವ್ರ ಏರಿಳಿತ ನಡುವೆಯೂ ಇಂಧನ ದರದಲ್ಲಿ ವ್ಯತ್ಯಾಸ ಕಂಡು ಬಂದಿರಲಿಲ್ಲ. ಪ್ರತಿ ಬ್ಯಾರೆಲ್ ಬೆಲೆ 66 ಯುಎಸ್ ಡಾಲರ್‌ಗಿಂತಲೂ ಕಡಿಮೆ ಮೊತ್ತಕ್ಕೂ ಕುಸಿದಿತ್ತು. ಆದರೆ, ಕಳೆದ 10 ದಿನಗಳಿಂದ ಚೇತರಿಸಿಕೊಂಡಿದೆ. ತಮಿಳುನಾಡಿನ ಬಜೆಟ್‌ನಲ್ಲಿ ಪೆಟ್ರೋಲ್ ಮೇಲಿನ ರಾಜ್ಯ ತೆರಿಗೆಯನ್ನು ಪ್ರತಿ ಲೀಟರ್ ಮೇಲೆ 3 ರು ತಗ್ಗಿಸಿದ್ದು ಬಿಟ್ಟರೆ, ಉಳಿದೆಡೆ ಇಂಧನ ದರ ಪ್ರತಿ ಲೀಟರ್ ಮೇಲೆ 100 ರು ಬೆಲೆ ಇದ್ದೇ ಇದೆ.

ರಾಜ್ಯಗಳಲ್ಲಿನ ಸೆಸ್, ವ್ಯಾಟ್ ಅಧಿಕ
ಉಳಿದಂತೆ, ಉಳಿದ ಎಲ್ಲಾ ರಾಜ್ಯಗಳಲ್ಲಿನ ಸೆಸ್, ವ್ಯಾಟ್ ಅಧಿಕವಾಗಿರುವುದರಿಂದ ಯಾವ ರಾಜ್ಯದಲ್ಲೂ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 100 ರು ಗಿಂತ ತಗ್ಗಿಲ್ಲ.
ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 46 ಬಾರಿ ಹಾಗೂ ಡೀಸೆಲ್ 41 ಬಾರಿ ಏರಿಕೆಯಾಗಿತ್ತು. ಮೇ 4ರಿಂದ ಪೆಟ್ರೋಲ್ 11.15 ರು ಪ್ರತಿ ಲೀಟರ್ ಹಾಗೂ ಡೀಸೆಲ್ 10.80 ರು ಪ್ರತಿ ಲೀಟರ್ ಆಗಿದೆ.
ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಲಡಾಕ್, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರು ಪ್ಲಸ್ ದಾಟಿದೆ. ಈ ಪೈಕಿ ಅನೇಕ ರಾಜ್ಯಗಳಲ್ಲಿ ವ್ಯಾಟ್, ಸೆಸ್ ದರ ಅಧಿಕವಾಗಿವೆ.
ದೆಹಲಿಯಲ್ಲಿ ದರ ಶುಕ್ರವಾರದಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 103.54ರು ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 92.12ರು ಆಗಿದೆ. ದೇಶದ ವಿವಿಧ ನಗರಗಳ ದರ ಪಟ್ಟಿ ವಿವರ ಮುಂದಿದೆ...

ಕಚ್ಚಾತೈಲ ಬೆಲೆ ಹೇಗೆ ನಿರ್ಧರಿತವಾಗುತ್ತದೆ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 07ರಂದು ಈ ಸಮಯಕ್ಕೆ ಕಚ್ಚಾತೈಲ ಬೆಲೆ ಕೊಂಚ ಇಳಿಕೆ ಕಂಡು 82.88ಯುಎಸ್ ಡಾಲರ್(1 USD=75.02ರೂ) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ನಂತರ ಸರಾಸರಿ 75 ಪ್ಲಸ್ ಡಾಲರ್ ನಂತೆ ಮುಂದುವರೆದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.

ಯಾವ್ಯಾವ ನಗರದಲ್ಲಿ ಎಷ್ಟಿದೆ ಇಂಧನ ಬೆಲೆ
ನವದೆಹಲಿ: ಪೆಟ್ರೋಲ್ 103.54ರೂ- ಡೀಸೆಲ್ 92.12ರೂ
ಕೋಲ್ಕತಾ: ಪೆಟ್ರೋಲ್ 104.23ರೂ- ಡೀಸೆಲ್ 95.23ರೂ
ಮುಂಬೈ: ಪೆಟ್ರೋಲ್ 109.54ರೂ- ಡೀಸೆಲ್ 99.92ರೂ
ಚೆನ್ನೈ: ಪೆಟ್ರೋಲ್ 101.01ರೂ- ಡೀಸೆಲ್ 96.60ರೂ
ಬೆಂಗಳೂರು: ಪೆಟ್ರೋಲ್ 107.14ರೂ- ಡೀಸೆಲ್ 97.77ರೂ
ತಿರುವನಂತಪುರಂ: ಪೆಟ್ರೋಲ್ 105.51ರೂ- ಡೀಸೆಲ್ 98.83ರೂ
ಪಾಟ್ನಾ: ಪೆಟ್ರೋಲ್ 106.70ರೂ- ಡೀಸೆಲ್ 98.75ರೂ
ಹೈದರಾಬಾದ್: ಪೆಟ್ರೋಲ್ 107.71ರೂ- ಡೀಸೆಲ್ 100.51ರೂ
ನೋಯ್ಡಾ: ಪೆಟ್ರೋಲ್ 100.61ರೂ- ಡೀಸೆಲ್ 92.55ರೂ
ಜೈಪುರ: ಪೆಟ್ರೋಲ್ 110.49ರೂ- ಡೀಸೆಲ್ 101.46ರೂ
(ಮಾಹಿತಿ ಕೃಪೆ: ಗುಡ್ ರಿಟರ್ನ್ಸ್ .ಇನ್)

ಇಂಧನ ಬೆಲೆ 100 ರೂ ಬೆಲೆ ದಾಟಿದ ರಾಜ್ಯಗಳು
ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಲಡಾಖ್, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ ದಾಟಿದೆ. ನೋಯ್ಡಾದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ 100 ರು ಗಡಿ ದಾಟಿದೆ. ರಾಜಸ್ಥಾನದಲ್ಲಿ ಡೀಸೆಲ್ ಬೆಲೆ ಕೂಡಾ 100 ರು ಪ್ಲಸ್ ಇದೆ. ಚೆನ್ನೈ, ಗುರುಗ್ರಾಮ, ಚಂಡೀಗಢ, ನೋಯ್ಡಾ ಹಾಗೂ ಲಕ್ನೋದಲ್ಲಿ 100ರುಗಿಂತ ಕೆಳಗಿದೆ.

ಹೆಚ್ಚು ವ್ಯಾಟ್, ಸೆಸ್ ವಿಧಿಸಿರುವ ರಾಜ್ಯಗಳು
ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ ಹಾಗೂ ಒಡಿಶಾ ಹೆಚ್ಚು ವ್ಯಾಟ್, ಸೆಸ್ ವಿಧಿಸುತ್ತಿವೆ. ದೇಶದಲ್ಲಿ ಈ ರಾಜ್ಯಗಳಲ್ಲಿ ಇಂಧನ ದರ ದುಬಾರಿಯಾಗಿದೆ. ಅರುಣಾಚಲ ಪ್ರದೇಶ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಇಂಧನ ದರದ ಮೇಲೆ ತೆರಿಗೆ ಅತ್ಯಂತ ಕಡಿಮೆ ಇದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 110.49ರೂ ನಷ್ಟಿದೆ, ಡೀಸೆಲ್ ಬೆಲೆ 101.46ರೂ ಆಗಿದೆ. ಅಲ್ಲದೆ ರಾಜಸ್ಥಾನದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 100 ರೂ ಗಡಿ ದಾಟಿದೆ.
-
ಭಾರತದಲ್ಲಿ ಇಂಧನ ಭದ್ರತೆಗೆ ಒತ್ತು, ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ: ಮೋದಿ ನೇತೃತ್ವದಲ್ಲಿ ಸಭೆ, ಹಲವು ಮಹತ್ವದ ತೀರ್ಮಾನ -
Arecanut Price: ಶಿವಮೊಗ್ಗ ಮಾರುಕಟ್ಟೆಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾರ್ಚ್ 23ರ ದರಪಟ್ಟಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications