• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೆಲಂಗಾಣ ಅತ್ಯಾಚಾರದ ನಂತರ ಅಮೆಜಾನ್‌ನಲ್ಲಿ ಹುಡುಗಿಯರು ಮಾಡಿದ್ದೇನು?

|

ಬೆಂಗಳೂರು, ಡಿಸೆಂಬರ್ 11; ನಿರ್ಭಯಾ ಹತ್ಯಾಚಾರದ ನಂತರ ದೇಶವನ್ನು ಮತ್ತೊಮ್ಮೆ ತಲ್ಲಣಗೊಳಿಸಿದ್ದ ತೆಲಂಗಾಣದ ಪಶುವೈದ್ಯೆ ದಿಶಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಹುಡುಗಿಯರಲ್ಲಿ ಭಾರೀ ಬದಲಾವಣೆ ತರಿಸಿದೆ.

ಹೌದು, ದಿಶಾಳನ್ನು ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆ ಮಾಡಿದ್ದರು. ಇದರಿಂದ ಒಂಟಿಯಾಗಿ ಅಡ್ಡಾಡುವ ಹುಡುಗಿಯರಿಗೆ ತಾವೆಷ್ಟು ಸುರಕ್ಷಿತ ಎಂಬ ಭಯ ಕಾಡಿತ್ತು. ಕಾಮ ಪಿಶಾಚಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಪ್ರತಿಯೊಬ್ಬ ಯುವತಿಯೂ ಸ್ವಯಂಪ್ರೇರಿತವಾಗ ವಿಚಾರ ಮಾಡುವಂತ ದಿನ ಬಂದಿತ್ತು. ಹೀಗಾಗಿ ಈಗ ಹುಡುಗಿಯರು, ಸರಳವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವಿಶಿಷ್ಠ ತಂತ್ರದ ಮೊರೆ ಹೋಗಿದ್ದಾರೆ.

ಆತ್ಮರಕ್ಷಣೆ ಗೆ ಹುಡುಗಿಯರು ಏನು ಮಾಡುತ್ತಿದ್ದಾರೆ?

ಆತ್ಮರಕ್ಷಣೆ ಗೆ ಹುಡುಗಿಯರು ಏನು ಮಾಡುತ್ತಿದ್ದಾರೆ?

ತೆಲಂಗಾಣ ದಿಶಾ ಅತ್ಯಾಚಾರ ಹಾಗೂ ಕೊಲೆಯ ನಂತರ ಹುಡುಗಿಯರು ಈ ಕಾಮುಕರಿಂದ, ದುರುಳರಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ಎಂದು ಚಿಂತಾಕ್ರಾಂತರಾಗಿದ್ದರು. ಕೆಲವರು ಜಿಮ್ ಗೆ ಹಾಗೂ ಕರಾಟೆಗೆ ಹೋಗಿ ಆತ್ಮರಕ್ಷಣೆ ಕಲೆ ಕಲಿಯುತ್ತಿರುವುದು ಕಂಡು ಬಂದಿದೆ. ಆದರೆ, ಇದು ಬಹಳಷ್ಟು ಯುವತಿಯರಿಗೆ ಮಹಿಳೆಯರಿಗೆ ಕಾರಣಾಂತರಗಳಿಂದ ಸಾಧ್ಯವಾಗುವುದಿಲ್ಲ. ಹಾಗಾಗಿ ಒಂಟಿಯಾಗುವ ಪ್ರಯಾಣಿಸುವ ಮಹಿಳೆಯರು, ಯುವತಿಯರು ತಮ್ಮ ರಕ್ಷಣೆಗೆ ಮೊರೆ ಹೋಗಿದ್ದು ಪೆಪ್ಪರ್ ಸ್ಪ್ರೆ ಬಳಿ!

ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್: ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ

ಅಮೆಜಾನ್‌ನಲ್ಲಿ ಪೆಪ್ಪರ್ ಸ್ಪ್ರೆ ಭಾರೀ ಮಾರಾಟ

ಅಮೆಜಾನ್‌ನಲ್ಲಿ ಪೆಪ್ಪರ್ ಸ್ಪ್ರೆ ಭಾರೀ ಮಾರಾಟ

ಆನ್‌ಲೈನ್ ದೈತ್ಯ ಮಾರುಕಟ್ಟೆಯಾಗಿರುವ ಅಮೆಜಾನ್ ನಲ್ಲಿ ಹುಡುಗಿಯರು, ಮಹಿಳೆಯರು ತಮ್ಮ ರಕ್ಷಣೆಗೆ ಪೆಪ್ಪರ್ ಸ್ಪ್ರೆ ಖರೀದಿ ಮಾಡುತ್ತಿದ್ದಾರೆ. ದಿಶಾ ಅತ್ಯಾಚಾರದ ಮೊದಲು ಪೆಪ್ಪರ್ ಸ್ಪ್ರೆ ಮಾರಾಟ ಕೆಳಮಟ್ಟದಲ್ಲಿತ್ತು. ಆದರೆ, ದಿಶಾ ಅತ್ಯಾಚಾರದ ನಂತರ ಪೆಪ್ಪರ್ ಸ್ಪ್ರೆ ಮಾರಾಟದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಅಮೆಜಾನ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಅದು ಶೇ 700 ರಷ್ಟು ಹೆಚ್ಚಳವಾಗಿದೆ. ಅಂದರೆ, ಒಂದು ತಿಂಗಳಲ್ಲಿ ಸಾಮಾನ್ಯವಾಗಿ 100 ಜನ ಪೆಪ್ಪರ್ ಸ್ಪ್ರೆ ಅಮೆಜಾನ್‌ನಲ್ಲಿ ಮಾರಾಟವಾಗಿದ್ದರೆ, ದಿಶಾ ಅತ್ಯಚಾರದ ಬಳಿಕ 700 ಪೆಪ್ಪರ್ ಸ್ಪ್ರೆ ಗಳು ಮಾರಾಟವಾಗಿವೆ ಎಂದು ಅಮೆಜಾನ್ ಹೇಳಿಕೊಂಡಿದೆ.

ಏನಿದು ಪೆಪ್ಪರ್ ಸ್ಪ್ರೆ?

ಏನಿದು ಪೆಪ್ಪರ್ ಸ್ಪ್ರೆ?

ಪೆಪ್ಪರ್ ಸ್ಪ್ರೇ ಒಂದು ಸ್ವಯಂ ಆತ್ಮರಕ್ಷಣೆ ಸಾಧನವಾಗಿದ್ದು, ಯಾರಾದರೂ ದಾಳಿ ಮಾಡಿದರೆ, ತೊಂದರೆ ಉಂಟು ಮಾಡಿದರೆ, ಅವರ ಮೇಲೆ ಈ ಸ್ಪ್ರೇಯನ್ನು ಸಿಂಪಡಿಸಬಹುದು. ತೊಂದರೆ ಕೊಡುವ ವ್ಯಕ್ತಿ ತೀವ್ರ ಕಣ್ಣು ಉರಿಯಿಂದ ಸ್ಥಳದಲ್ಲೇ ಬಿದ್ದು ಹೋಗುತ್ತಾನೆ. ಅಮೆಜಾನ್ ಆಧುನಿಕವಾದಂತಹ ಪೆಪ್ಪರ್ ಸ್ಪ್ರೆ ಗಳನ್ನು ಮಾರಾಟ ಮಾಡುತ್ತಿದೆ. ಹೈದರಾಬಾದ್ ಘಟನೆ ನಂತರ ಆನ್‌ಲೈನ್‌ನಲ್ಲಿ ಅತಿಹೆಚ್ಚು ಮಾರಾಟವಾಗಿದ್ದು ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ವಸ್ತುಗಳಾಗಿವೆ ಎಂದು ಹೇಳಿರುವ ಅಮೆಜಾನ್, ಪೂರೈಕೆದಾರರ ಕಡೆ ದಾಸ್ತಾನು ಕರಗಿದೆ ಎಂಬುದಾಗಿಯೂ ಅಚ್ಚರಿ ವ್ಯಕ್ತಪಡಿಸಿದೆ. ಮಹಿಳೆಯರು ಸ್ವಯಂಪ್ರೇರಿತವಾಗಿ ತಮ್ಮ ರಕ್ಷಣೆ ಮಾಡಿಕೊಳ್ಳಲು ಮುಂದೆ ಬಂದಿರುವುದು ಉತ್ತಮ ಕೆಲಸವಾಗಿದೆ ಎಂದು ಅದು ತಿಳಿಸಿದೆ.

ಎನ್ಕೌಂಟರ್ ಮಾಡಿದ್ದೇಕೆ, ನೈಜ ಕಾರಣ ಬಿಚ್ಚಿಟ್ಟ ಪೊಲೀಸ್ ಆಯುಕ್ತ ವಿಶ್ವನಾಥ

ಘಟನೆ ಏನು?

ಘಟನೆ ಏನು?

ಹೈದರಾಬಾದ್ ಬಳಿಯ ಶಂಶಾಬಾದ್ ನ ಪಶುವೈದ್ಯೆಯನ್ನು ನ.27 ರಂದು ಆರೋಪಿಗಳಾದ ಮಹಮ್ಮದ್, ಶಿವು, ನವೀನ ಹಾಗೂ ಕೇಶವ ಎಂಬವರು ಅತ್ಯಾಚಾರ ಮಾಡಿ, ಬರ್ಬರವಾಗಿ ಕೊಲೆ ಮಾಡಿದ್ದರು. ನ 29 ರಂದು ಆರೋಪಿಗಳನ್ನು ಬಂದಿಸಲಾಗಿತ್ತು. ನ. 30 ರಂದು ಚರಲಪಲ್ಲಿ ಜೈಲಿಗೆ ಕಳಿಸಲಾಗಿತ್ತು. ನ.4 ರಂದು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಆದರೆ ಸ್ಥಳ ಮಹಜರು ವೇಳೆ ಪೊಲೀಸರು ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗ ಡಿ 6ರಂದು ನಾಲ್ಕೂ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಿ ಬೀಸಾಕಿದ್ದರು.

English summary
Pepper Spray Sales Increase On Amazon After Telangana Rape. Amazon press release says, this is increased up to 700%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X