ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನ ಬಳಕೆದಾರರಿಗೆ ಐಪಿಒ ಹೂಡಿಕೆ ಅವಕಾಶ ತೆರೆಯಲಿರುವ ಪೇಟಿಎಂ

|
Google Oneindia Kannada News

ನವದೆಹಲಿ, ನವೆಂಬರ್ 30: ಡಿಜಿಟಲ್ ಪಾವತಿ ವೇದಿಕೆಯಾದ ಪೇಟಿಎಂ ತನ್ನ ಬಳಕೆದಾರರಿಗೆ ಐಪಿಒ ಹೂಡಿಕೆಗಳಿಗೆ ಶೀಘ್ರದಲ್ಲೇ ಅವಕಾಶ ನೀಡುವ ಮೂಲಕ ಸೌಲಭ್ಯ ಒದಗಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಲಿಬಾಬಾ- ಮತ್ತು ಸಾಫ್ಟ್‌ಬ್ಯಾಂಕ್ ಬೆಂಬಲಿತ ಪೇಟಿಎಂ ತನ್ನ ಒಟ್ಟಾರೆ ಹಣಕಾಸಿನ ಸೇವೆಯನ್ನು ವಿಸ್ತರಿಸುವ ಮತ್ತು ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಲು ಸಿದ್ಧಗೊಂಡಿದೆ. ಅಪ್‌ಸ್ಟಾಕ್ಸ್, ಜೆರೋಧಾ ಮತ್ತು 5 ಪೈಸಾದಂತದ ಸ್ಟಾಕ್‌ ಬ್ರೋಕರ್‌ಗಳಿಗೆ ಸಮನಾಗಿ ನಿಲ್ಲುವ ಗುರಿಯನ್ನು ಹೊಂದಿದೆ.

 ದೇಶದಲ್ಲೇ ಅತಿದೊಡ್ಡ LPG ಸಿಲಿಂಡರ್ ಬುಕ್ಕಿಂಗ್ ವೇದಿಕೆಯಾದ ಪೇಟಿಎಂ ದೇಶದಲ್ಲೇ ಅತಿದೊಡ್ಡ LPG ಸಿಲಿಂಡರ್ ಬುಕ್ಕಿಂಗ್ ವೇದಿಕೆಯಾದ ಪೇಟಿಎಂ

''ಮುಂದಿನ ದಿನಗಳಲ್ಲಿ, ಹೂಡಿಕೆಯನ್ನು ತಡೆರಹಿತ ಮತ್ತು ಅನುಕೂಲಕರವಾಗಿಸಲು ಐಪಿಒ ಫಂಡಿಂಗ್, ಡೆರಿವೇಟಿವ್ಸ್‌ ಟ್ರೇಡಿಂಗ್, ಮಾರ್ಜಿನ್ ಫೈನಾನ್ಸ್‌ ಮತ್ತು ಇತರ ಮೌಲ್ಯವರ್ಧಕ ವೈಶಿಷ್ಟ್ಯಗಳನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ. ದೇಶಾದ್ಯಂತ ನಮ್ಮ ಧ್ಯೇಯದೊಂದಿಗೆ ಇದು ಆರ್ಥಿಕ ಹೊಂದಿಕೆಯಾಗಿದೆ "ಎಂದು ಪೇಟಿಎಂ ಮನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರುಣ್ ಶ್ರೀಧರ್ ಹೇಳಿದರು.

Paytm Money Opens IPO Investments For Its Users

2019 ರ ಹೊತ್ತಿಗೆ 76 ಲಕ್ಷ ರೂ.ಗಳ ವಹಿವಾಟು ನಡೆಸಲು ಕಂಪನಿಯು 37 ಕೋಟಿ ರೂ. ಖರ್ಚು ಮಾಡಿದೆ. 2020 ರ ದಾಖಲಾತಿಗಳನ್ನು ಇನ್ನೂ ಸಾರ್ವಜನಿಕವಾಗಿ ಪ್ರಕಟಿಸಿಲ್ಲ.

ಸ್ಟಾಕ್‌ ಬ್ರೋಕಿಂಗ್ ವಹಿವಾಟು ಪೇಟಿಎಂಗೆ ಅತ್ಯಂತ ಲಾಭದಾಯಕ ವ್ಯವಹಾರವಾಗಬಹುದು ಮತ್ತು ಒಂದರ ಹಿಂದೆ ಮತ್ತೊಂದು ಕೊಡುಗೆಗಳನ್ನು ಗ್ರಾಹಕರು ಪೇಟಿಎಂನಿಂದ ನಿರೀಕ್ಷಿಸಬಹುದಾಗಿದೆ.

ಪೇಟಿಎಂ ಮನಿ ಸೆಪ್ಟೆಂಬರ್‌ನಲ್ಲಿ ಆ್ಯಪ್ ಬಿಡುಗಡೆ ಮೂಲಕ ಸ್ಟಾಕ್ ಬ್ರೋಕಿಂಗ್ ಸೌಲಭ್ಯ ಒದಗಿಸಿದೆ. ಅಕ್ಟೋಬರ್‌ನಲ್ಲಿ ಕಂಪನಿಯು ಇಟಿಎಫ್‌ಗಳನ್ನು ಅಥವಾ ವಿನಿಮಯ ವಹಿವಾಟು ಹಣವನ್ನು ಸೇರಿಸಿತು. ಈಗ ಇದು ತನ್ನ ಬಳಕೆದಾರರಿಗೂ ಐಪಿಒ ಹೂಡಿಕೆಗಳನ್ನು ತೆರೆದಿದೆ.

English summary
Paytm Money, the wealth management arm of digital payments major Paytm, is set to open up IPO investments for its users, the company said in a press note on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X