ಕೇಬಲ್‌ನಲ್ಲಿ ನಿಮ್ಮ ಇಷ್ಟದ ಚಾನೆಲ್‌ಗೆ ಮಾತ್ರ ಹಣ ಕೊಡಿ
ಬೆಂಗಳೂರು, ಡಿ. 24 : ಕೇಬಲ್ ಬಿಲ್ ಜಾಸ್ತಿ ಆಯ್ತಪ್ಪ ಎಂದು ಹೇಳುವ ಜನರಿಗೆ ಸಿಹಿ ಸುದ್ದಿ ಕಾದಿದೆ. ಡಿಟಿಎಚ್ ಮಾದರಿಯಲ್ಲಿ ನಿಮಗೆ ಬೇಕಾದ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿ ಮಾಡುವ ವ್ಯವಸ್ಥೆ ಕೇಬಲ್ ಟಿವಿ ಗ್ರಾಹಕರಿಗೂ 2015ರಲ್ಲಿ ಲಭ್ಯವಾಗಲಿದೆ, ಇದರಿಂದ ಕೇಬಲ್ ಬಿಲ್ ಕಡಿಮೆಯಾಗಲಿದೆ.
ಡೈರೆಕ್ಟ್ ಟು ಹೋಮ್ (ಡಿಟಿಎಚ್) ಮಾದರಿಯಲ್ಲೇ ಸೆಟ್‌ಟಾಪ್ ಬಾಕ್ಸ್ ಕೇಬಲ್ ಸೇವೆಯಲ್ಲೂ ಗ್ರಾಹಕರಿಗೆ ಇಷ್ಟದ ಚಾನೆಲ್‌ಗಳ ಆಯ್ಕೆಗೆ ಅವಕಾಶ ಕಲ್ಪಿಸಲು ರಾಜ್ಯ ಕೇಬಲ್ ಟಿ.ವಿ ಆಪರೇಟರ್ಗಳ ಸಂಘ ನಿರ್ಧರಿಸಿದೆ. ಇದರಂತೆ ನೀವು ಪ್ಯಾಕೇಜ್‌ಗೆ ಅನುಗುಣವಾಗಿ ಹಣ ಪಾವತಿ ಮಾಡುವ ಅವಕಾಶವಿದೆ.

ಸದ್ಯ, ಬೆಂಗಳೂರು ಮತ್ತು ಮೈಸೂರಿನಲ್ಲಿರುವ ಸೆಟ್‌ಟಾಪ್ ಬಾಕ್ಸ್ ಕೇಬಲ್ ಸಂಪರ್ಕದಾರರಿಗೆ ತಮ್ಮ ನೆಚ್ಚಿನ ಚಾನೆಲ್‌ಗಳ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಜನವರಿಯಲ್ಲಿ ನೀಡಲಾಗುತ್ತದೆ. ಪ್ಯಾಕೇಜ್‌ಗೆ ಸಂಬಂಧಿಸಿದಂತೆ ದರ ಪಟ್ಟಿ ನಿಗದಿಯಾಗಲಿದ್ದು, ಜನವರಿಯಲ್ಲಿ ಇದು ಬಿಡುಗಡೆಗೊಳ್ಳಲಿದೆ. [ಕೇಬಲ್ ಟಿವಿ ನೋಡಲು ಹೆಚ್ಚು ಹಣ ಪಾವತಿಸಬೇಕು]
ರಾಜ್ಯ ಕೇಬಲ್ ಟಿ.ವಿ ಆಪರೇಟರ್ಗಳ ಸಂಘದ (ಕೆಎಸ್‌ಸಿಒಎ) ಅಧ್ಯಕ್ಷ ವಿ.ಎಸ್.ಪ್ಯಾಟ್ರಿಕ್ ರಾಜು ಅವರು ಈ ಕುರಿತು ಮಾಹಿತಿ ನೀಡಿದ್ದು, 4 ಬಗೆಯ ಚಾನೆಲ್ ಪ್ಯಾಕೇಜ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಗ್ರಾಹಕರು ಆಯ್ಕೆ ಮಾಡಿಕೊಳ್ಳುವ ಪ್ಯಾಕೇಜ್‌ಗೆ ಅನುಗುಣವಾಗಿ ದರ ನಿಗದಿಯಾಗಲಿದೆ. ಈ ಬಗ್ಗೆ ಕೇಬಲ್‌ನಲ್ಲೇ ವಿವರಗಳನ್ನು ಪ್ರಸಾರ ಮಾಡಿ, ಕರಪತ್ರಗಳ ಮೂಲಕ ಜನರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಹೇಗಿದೆ ಪ್ಯಾಕೇಜ್ : ಗ್ರಾಹಕರಿಗೆ ಮೊದಲ ಹಂತದ ಬೇಸಿಕ್ ಪ್ಯಾಕೇಜ್‌ನಲ್ಲಿ 203 ಚಾನೆಲ್‌ಗಳನ್ನು ನೀಡಲಾಗುತ್ತದೆ. ಅದಕ್ಕೆ ರೂ. 118 ದರವಿರುತ್ತದೆ. ಸರ್ಕಾರದ ತೆರಿಗೆ ಹಾಗೂ ಚಾನೆಲ್ ಸಂಸ್ಥೆಗಳು ನಿಗದಿಪಡಿಸಿರುವ ಶುಲ್ಕಕ್ಕೆ ಅನುಗುಣವಾಗಿ ಪ್ಯಾಕೇಜ್‌ಗಳ ದರಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಪ್ಯಾಟ್ರಿಕ್ ರಾಜು ತಿಳಿಸಿದರು.
ಬೆಂಗಳೂರಿನಲ್ಲಿ 22 ಲಕ್ಷ ಮತ್ತು ಮೈಸೂರಿನಲ್ಲಿ 1.50 ಲಕ್ಷ ಸೆಟ್‌ಟಾಪ್ ಬಾಕ್ಸ್ ಕೇಬಲ್ ಸಂಪರ್ಕದಾರರಿದ್ದಾರೆ. ಜನವರಿಯಿಂದ ಈ ಗ್ರಾಹಕರಿಗೆ ಇಷ್ಟದ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿ ಮಾಡುವ ಸೇವೆ ಲಭ್ಯವಾಗಲಿದೆ.












Click it and Unblock the Notifications