ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಟೆಂಟ್ ಪ್ರಾಬ್ಲಂ ಚೀನಾ ಮೊಬೈಲ್ ಸೇಲ್ ಬಂದ್!

By Mahesh
|
Google Oneindia Kannada News

ನವದೆಹಲಿ, ಡಿ.10: ಭಾರತೀಯ ವಾಯು ಸೇನೆ ತನ್ನ ಸಿಬ್ಬಂದಿಗಳಿಗೆ ಚೀನಾ ಮೂಲದ ಹ್ಯಾಂಡ್ ಸೆಟ್ ಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ್ದು ನೆನಪಿರಬಹುದು. ಈಗ ಪೇಟೆಂಟ್ ಸಮಸ್ಯೆಯಿಂದ ಬಳಲುತ್ತಿರುವ ಚೀನಾ ಮೊಬೈಲ್ ಮಾರಾಟ ನಿಲ್ಲಿಸುವಂತೆ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ಹೀಗಾಗಿ ಸದ್ಯಕ್ಕೆ ಚೀನಾದ ಶಿಯೋಮಿ ರೆಡ್ಮಿ ಮೊಬೈಲ್ ಫೋನ್ ಗಳು ಭಾರತದಲ್ಲಿ ಮಾರಾಟ ಮಾಡುವಂತಿಲ್ಲ. ಆನ್ ಲೈನ್ ಮೂಲಕ ಫ್ಲಿಪ್ ಕಾರ್ಟ್ ಸಂಸ್ಥೆ ರೆಡ್ಮಿ ಮೊಬೈಲ್ ಗಳನ್ನು ಮಾರುತ್ತಿದೆ.

ಅದರೆ, ಎರಿಕ್ಸನ್ ಸಂಸ್ಥೆ ತಂತ್ರಜ್ಞಾನ ಬಳಸುತ್ತಿರುವ ಈ ಮೊಬೈಲ್ ಗಳು ಪೇಟೆಂಟ್ ಕಾಯ್ದೆ ಉಲ್ಲಂಘಿಸಿದ ಆರೋಪ ಎದುರಿಸುತ್ತಿದೆ. ಈ ಪ್ರಕರಣ ಇತ್ಯರ್ಥವಾಗುವ ತನಕ ಶಿಯೋಮಿ ಮೊಬೈಲ್ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. [ಭದ್ರತಾ ವೈಫಲ್ಯ, ಚೀನಾ ಮೊಬೈಲ್ ಸಂಸ್ಥೆ ಹೇಳಿದ್ದೇನು? ]

ಚೀನಾದ ಕ್ಸಿಯೋಮಿ ರೆಡ್ಮಿ 1ಎಸ್ ಮೊಬೈಲ್ ಫೋನ್ ಬಳಸುವುದರಿಂದ ದೇಶದ ಭದ್ರತಾ ವ್ಯವಸ್ಥೆಯ ಗೌಪ್ಯತಾ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ವಾಯುಸೇನೆ ಸಂಶಯ ವ್ಯಕ್ತಪಡಿಸಿತ್ತು. ಈ ಬಗ್ಗೆ ಕೊನೆಗೂ ಎಚ್ಚೆತ್ತುಕೊಂಡ ಚೀನಾ ಕಂಪನಿ ಸುರಕ್ಷತಾ ನಿಯಮಗಳನ್ನು ಬದಲಾಯಿಸಿ ಗ್ರಾಹಕರ ಮಾಹಿತಿ ರಕ್ಷಣೆಗೆ ಮುಂದಾಗಿತ್ತು. ಈಗ ಪೇಟೆಂಟ್, ಲೈಸನ್ಸ್ ಸಮಸ್ಯೆಯ ಸುಳಿಯಲ್ಲಿ ಚೀನಾ ಸಂಸ್ಥೆ ಸಿಲುಕಿದೆ.

Xiomi Patent issue, Delhi HC stops sale of Xiaomi phones

ಜಸ್ಟೀಸ್ ಜಿಪಿ ಮಿತ್ತಲ್ ಅವರು ಕಸ್ಟಮ್ಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಶಿಯೋಮಿ ಫೋನ್ ಗಳು ಆಮದು ತಡೆಯುವಂತೆ ಸೂಚಿಸಿದ್ದಾರೆ. ಎರಿಕ್ಸನ್ ಸಂಸ್ಥೆ ತಂತ್ರಜ್ಞಾನ ದುರ್ಬಳಕೆ ಬಗ್ಗೆ ಉತ್ತರ ನೀಡಿ ಅಫಡವಿಟ್ ಸಲ್ಲಿಸುವಂತೆ ಶಿಯೋಮಿ ಹಾಗೂ ಫ್ಲಿಪ್ ಕಾರ್ಟ್ ಸಂಸ್ಥೆಗಳಿಗೆ ಕೋರ್ಟ್ ಸೂಚಿಸಿದೆ.

ಲೈಸನ್ಸ್ ಪಡೆಯದೆ ಮಾರಾಟ: ಎರಿಕ್ಸನ್ ಸಂಸ್ಥೆ ತಂತ್ರಜ್ಞಾನ ಬಳಸಲು ಅಗತ್ಯವಾಗಿದ್ದ ಲೈಸನ್ಸ್ ಪಡೆಯದೆ ಶಿಯೋಮಿ ಸಂಸ್ಥೆ ಮೊಬೈಲ್ ಗಳನ್ನು ಮಾರಾಟ ಮಾಡಿರುವ ಅರೋಪ ಹೊತ್ತುಕೊಂಡಿದೆ.

ಈಗ ಶಿಯೋಮಿ ಹಾಗೂ ಫ್ಲಿಫ್ ಕಾರ್ಟ್ ಇಲ್ಲಿತನಕ ಮಾರಾಟವಾದ ಎಎಂಆರ್, ಎಡ್ಜ್, 3ಜಿ ಸಾಧನಗಳು ಎಷ್ಟು? ಇದರಿಂದ ಗಳಿಸಿದ್ದೆಷ್ಟು ಎಂಬ ವಿವರಗಳನ್ನು ತನಿಖೆ ನಡೆಸುವ ಮೂವರು ಆಯುಕ್ತರಿಗೆ ನೀಡಬೇಕು. ಆಯುಕ್ತರ ಖರ್ಚು ವೆಚ್ಚ(ಸುಮಾರು 3.5ಲಕ್ಷ ರು)ವನ್ನು ಎರಿಕ್ಸನ್ ಸಂಸ್ಥೆ ಭರಿಸಲಿದೆ. ಈ ತನಿಖಾ ತಂಡ ನಾಲ್ಕು ವಾರಗಳಲ್ಲಿ ವರದಿಯನ್ನು ಕೋರ್ಟಿಗೆ ಸಲ್ಲಿಸಲಿದೆ.

ಫ್ಲಿಪ್ ಕಾರ್ಟ್ ಮೂಲಕ ಭಾರತೀಯ ಗ್ರಾಹಕರಿಗೆ ಪರಿಚಯವಾದ ರೆಡ್ಮಿ 1 ಎಸ್ ಮೊಬೈಲ್ ಗಳು ಇ ಕಾಮರ್ಸ್ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. 7ನೇ ಫ್ಲಾಶ್ ಸೇಲ್ ನಲ್ಲಿ ಸುಮಾರು 90,000 ಹ್ಯಾಂಡ್ ಸೆಟ್ ಗಳನ್ನು ಕ್ಷಣಾರ್ಧದಲ್ಲಿ ಮಾರಾಟ ಮಾಡಿತ್ತು. 4.2 ಸೆಕೆಂಡುಗಳಲ್ಲಿ 40,000ಕ್ಕೂ ಅಧಿಕ ಹ್ಯಾಂಡ್ ಸೆಟ್ ಮಾರಾಟವಾಗಿ ಹೊಸ ದಾಖಲೆ ಬರೆದಿತ್ತು. (ಪಿಟಿಐ)

English summary
The Delhi High Court in an interim order has restrained Xiaomi as well as online e-commerce site Flipkart from selling in India handsets of the Chinese mobile maker that run on the technology patented by Ericsson.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X