ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೊಟ್ಟಿ, ಚಪಾತಿಗೆ ಶೇ.5 ಜಿಎಸ್‌ಟಿ, ಪರಾಠ ಮೇಲೆ ಶೇ.18: ಏನಿದರ ವ್ಯತ್ಯಾಸ?

|
Google Oneindia Kannada News

ಗುಜರಾತ್‌ನ ಮೇಲ್ಮನವಿ ಪ್ರಾಧಿಕಾರದ ಅಡ್ವಾನ್ಸ್ ರೂಲಿಂಗ್ (ಎಎಆರ್) ವಿವಿಧ ಬಗೆಗೆ ಪರಾಠ ರೊಟ್ಟಿಗಳಿಗೆ ಸಾಮಾನ್ಯ ರೊಟ್ಟಿ ಅಥವಾ ಚಪಾತಿಯ ನಡುವೆ ದೊಡ್ಡ ವ್ಯತ್ಯಾಸವಿದೆ ಎಂದು ಹೇಳಿದೆ. ಈ ಹೇಳಿಕೆಯ ನಂತರ ಈಗ ಪರಾಠಗೆ 5% ಜಿಎಸ್‌ಟಿ ತರಿಗೆ ಬದಲಿಗೆ 18% ಜಿಎಸ್‌ಟಿ ವಿಧಿಸಲಾಗುತ್ತದೆ. ಇನ್ನು ರೊಟ್ಟಿಗೆ ಅಥವಾ ಚಪಾತಿಗೆ ಕೇವಲ 5% ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ನೀವು ಪರಾಠ ತಿನ್ನಲು ಇಷ್ಟಪಡುತ್ತಿದ್ದರೆ, ನೀವು ಜಿಎಸ್‌ಟಿ ಕಟ್ಟಲೇಬೇಕು. ಹೌದು, ಈಗ ನೀವು ಪರಾಠ ಬದಲಿಗೆ ರೊಟ್ಟಿ ತಿನ್ನಲು ಅಗ್ಗವಾಗಿದೆ ಇನ್ನು ನೀವು ಪರಾಠ ರುಚಿ ಆನಂದಿಸಲು ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅಹಮದಾಬಾದ್‌ನ ವಡಿಲಾಲ್ ಇಂಡಸ್ಟ್ರೀಸ್ ಸಾಮಾನ್ಯ ತಡೆಗಟ್ಟುವಿಕೆ ವಿರೋಧಿ ನಿಯಮಗಳು ಈ GAARನಲ್ಲಿ ಮಲಬಾರ್, ಮಿಕ್ಸ್ ವೆಜ್ ಸೇರಿದಂತೆ 8 ವಿಧದ ಬಗೆಯ ಪರಾಠಗಳನ್ನು ತಯಾರಿಸುತ್ತದೆ ಎಂದು ಅರ್ಜಿ ಸಲ್ಲಿಸಿತ್ತು.

ಇದರೊಂದಿಗೆ ವಿವಿಧ ರೀತಿಯ ಪರಾಠಗಳನ್ನು ತಯಾರಿಸಲು ತರಕಾರಿಗಳು, ಮೆಂತ್ಯ ಮತ್ತು ಇತರೆ ಪದಾರ್ಥಗಳನ್ನು ಸೇರಿಸಲಾಗುತ್ತದೆ ಹಾಗಾಗಿ ಪರಾಠ ಮತ್ತು ರೊಟ್ಟಿಗೆ ತುಂಬಾ ವ್ಯತ್ಯಾಸವಿದೆ ಎಂದು ಕಂಪನಿ ತಿಳಿಸಿದೆ. ಈ ಪದಾರ್ಥಗಳನ್ನು ಸೇರಿಸದಿದ್ದರೆ ಎಲ್ಲಾ ಪರಾಠ ಮತ್ತು ರೊಟ್ಟಿ ಒಂದೇ ರುಚಿಗೆ ತಿರುಗುತ್ತವೆ ಎಂದಿವೆ. ಆದರೆ, ಎಲ್ಲವನ್ನೂ ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ ಎಂದು ವಡಿಲಾಲ್ ಇಂಡಸ್ಟ್ರೀಸ್ ಹೇಳಿದೆ. ಆದ್ದರಿಂದ, ಅವರಿಗೆ ರೋಟಿಯಂತೆಯೇ ತೆರಿಗೆ ವಿಧಿಸಬೇಕು, ಆದರೆ ಮೇಲ್ಮನವಿ ಪ್ರಾಧಿಕಾರವಾದ ಗುಜರಾತ್‌ನ ಮೇಲ್ಮನವಿ ಪ್ರಾಧಿಕಾರದ (GAAR) ಮುಂಗಡ ತೀರ್ಪು (AAR) ಜೂನ್ 2021ರ ಆದೇಶವನ್ನು ಎತ್ತಿಹಿಡಿದಿದೆ.

 ರೊಟ್ಟಿ ಮೇಲೆ 5% ಮಾತ್ರ ಜಿಎಸ್‌ಟಿ, ಪರಾಠ ಮೇಲೆ 18% ಜಿಎಸ್‌ಟಿ

ರೊಟ್ಟಿ ಮೇಲೆ 5% ಮಾತ್ರ ಜಿಎಸ್‌ಟಿ, ಪರಾಠ ಮೇಲೆ 18% ಜಿಎಸ್‌ಟಿ

ರೊಟ್ಟಿ, ಚಪಾತಿ ಮತ್ತು ನಾನ್ ಮೇಲೆ 5% ಜಿಎಸ್‌ಟಿ ಮತ್ತು ಪರಾಠ ಮೇಲೆ 18% ಜಿಎಸ್‌ಟಿ ವಿಧಿಸಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜಿಎಸ್‌ಟಿ ತೆರಿಗೆಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳುವ ಎಎಆರ್‌ನಲ್ಲಿ ಹಲವು ಪಕ್ಷಗಳು ಸಹ ಮೇಲ್ಮನವಿ ಸಲ್ಲಿಸಿವೆ.

ಪ್ಯಾಕ್ ಮಾಡಲಾದ ಹೆಪ್ಪುಗಟ್ಟಿದ ಪರೋಟಗಳು 'ರೋಟಿ ಅಥವಾ ಚಪಾತಿ' ಅಲ್ಲ, ಏಕೆಂದರೆ ಬಳಕೆಗೆ ಮೊದಲು ಮತ್ತಷ್ಟು ಅಡುಗೆ ಅಗತ್ಯವಿರುತ್ತದೆ ಮತ್ತು ಗೋಧಿ ಹಿಟ್ಟು ಸಾಮಾನ್ಯ ವಾಗಿದ್ದರೂ ಸಹ ಪರಾಠ ತಯಾರಿಸಲು ಇತರ ಪದಾರ್ಥಗಳನ್ನು ಬಳಸಲಾಗುತ್ತದೆ ಎಂದು ಗುಜರಾತ್ ಮೇಲ್ಮನವಿ ಪ್ರಾಧಿಕಾರದ ಅಡ್ವಾನ್ಸ್ ರೂಲಿಂಗ್‌ನ ಆದೇಶ ತಿಳಿಸಿದೆ.

 ಚಪಾತಿ- ಪರಾಠ ನಡುವಿನ ದೊಡ್ಡ ವ್ಯತ್ಯಾಸವಿದೆ

ಚಪಾತಿ- ಪರಾಠ ನಡುವಿನ ದೊಡ್ಡ ವ್ಯತ್ಯಾಸವಿದೆ

ಮೇಲ್ಮನವಿದಾರರು ಸರಬರಾಜು ಮಾಡುವ ಪರೋಟ ರೊಟ್ಟಿ ಮತ್ತು ಸರಳವಾದವುಗಳು ಚಪಾತಿ ಅಥವಾ ರೊಟ್ಟಿಗಿಂತ ಭಿನ್ನವಾಗಿರುತ್ತವೆ ಎಂದು ಗುಜರಾತ್‌ನ ಮೇಲ್ಮನವಿ ಪ್ರಾಧಿಕಾರದ ಅಡ್ವಾನ್ಸ್ ರೂಲಿಂಗ್ ಹೇಳಿದೆ. ಇದನ್ನು ಸರಳ ಚಪಾತಿ ಅಥವಾ ರೊಟ್ಟಿಯ ವರ್ಗದ ಅಡಿಯಲ್ಲಿ ಪರಿಗಣಿಸಲಾಗುವುದಿಲ್ಲ, ಪರಾಠ ಸಾಮಾನ್ಯ ತಡೆಗಟ್ಟುವಿಕೆ-ವಿರೋಧಿ ನಿಯಮಗಳು(GAAR)ಸಹ ಎತ್ತಿಹಿಡಿಯಲಾಗಿದೆ.

 ಚಪಾತಿ, ರೊಟ್ಟಿಗಳಗೆ- ಪರಾಠ ತುಂಬಾ ವ್ಯತ್ಯಾಸ

ಚಪಾತಿ, ರೊಟ್ಟಿಗಳಗೆ- ಪರಾಠ ತುಂಬಾ ವ್ಯತ್ಯಾಸ

ಗುಜರಾತ್‌ನ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್‌ನ ಜೂನ್ 2021ರ ಆದೇಶವನ್ನು ಪರಿಣಾಮಕಾರಿಯಾಗಿ ಎತ್ತಿಹಿಡಿದಿದೆ. ಇಂತಹ ಪ್ಯಾಕ್ ಮಾಡಿದ ಪರಾಠಗಳನ್ನು ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ 3-4 ನಿಮಿಷಗಳ ಕಾಲ ಬೇಯಿಸಬೇಕು ಮತ್ತು ರೊಟ್ಟಿ ಮತ್ತು ಬ್ರೆಡ್ ತುಂಡುಗಳು ಇರಬೇಕು ಎಂದು ಹೇಳಿದ್ದಾರೆ. 3ರಿಂದ 4ನಿಮಿಷ ಬೇಯಿಸಲಾಗುತ್ತದೆ ಹಾಗಾಗಿ ಚಪಾತಿ, ರೊಟ್ಟಿಗಳಗೆ ಪರೋಟ ತುಂಬಾ ವ್ಯತ್ಯಾಸವಿದೆ ಎಂದಿದೆ.

 ಕರ್ನಾಟಕದಲ್ಲಿ ರವಾ ಇಡ್ಲಿ ದೋಸೆ ಮೇಲೆ 18% ಜಿಎಸ್‌ಟಿ

ಕರ್ನಾಟಕದಲ್ಲಿ ರವಾ ಇಡ್ಲಿ ದೋಸೆ ಮೇಲೆ 18% ಜಿಎಸ್‌ಟಿ

ಕಳೆದ ವರ್ಷ ಆಗಸ್ಟ್‌ನಲ್ಲಿ ತಮಿಳುನಾಡಿನ ಎಎಆರ್, ರೆಡಿ-ಟು-ಕುಕ್ ದೋಸೆ, ಇಡ್ಲಿ, ಗಂಜಿ ಮಿಶ್ರಣ ಇತ್ಯಾದಿಗಳನ್ನು ಪುಡಿ ರೂಪದಲ್ಲಿ ಮಾರಾಟ ಮಾಡುವುದರಿಂದ 18% ಜಿಎಸ್‌ಟಿ ತೆರಿಗೆ ವಿಧಿಸಲಾಗುತ್ತದೆ ಎಂದು ತೀರ್ಪು ನೀಡಿತ್ತು. ಗುಜರಾತ್ ಎಎಆರ್ ಕೂಡ ಪೂರಿ ಪಾಪಡ್ ಮತ್ತು ಅನ್ ಫ್ರೈಡ್ ಪಾಪಡ್ ಮೇಲೆ 5 ಪ್ರತಿಶತ ಜಿಎಸ್ಟಿ ಪಾವತಿಸಬೇಕು ಎಂದು ತೀರ್ಪು ನೀಡಿತ್ತು. ಇನ್ನು ಕರ್ನಾಟಕ ರಾಜ್ಯದಲ್ಲಿ ಡಿಸೆಂಬರ್ 2021ರಲ್ಲಿ ಕರ್ನಾಟಕ ಎಎಆರ್ ರವಾ ಇಡ್ಲಿ ದೋಸೆ ಮೇಲೆ 18 ಪ್ರತಿಶತ ಜಿಎಸ್‌ಟಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ತೀರ್ಪು ನೀಡಿತ್ತು.

English summary
Paratha not similar to roti, chapati or khakra, will attract 18% GST: Gujarat AAR Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X