• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೂಗಲ್ ಕ್ಲೌಡ್ ಗೆ ಬೆಂಗಳೂರು ಮೂಲದ ಕುರಿಯನ್ ಮುಖ್ಯಸ್ಥ

|

ಸ್ಯಾನ್‌ಫ್ರಾನ್ಸಿಸ್ಕೊ, ನವೆಂಬರ್ 18: ಬೆಂಗಳೂರು ಮೂಲದ ಟೆಕ್ಕಿ ಥಾಮಸ್ ಕುರಿಯನ್ ಅವರು ಗೂಗಲ್‌ ನ ಕ್ಲೌಡ್ ವ್ಯವಹಾರದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಈ ಮುಂಚೆ ಆರೇಕಲ್ ಕಾರ್ಪ್ ಉತ್ಪನ್ನ ಮುಖ್ಯಸ್ಥರಾಗಿದ್ದರು. ಮುಂದಿನ ಆರ್ಥಿಕ ವರ್ಷದ ಆರಂಭದಲ್ಲಿ ಕುರಿಯನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಗೂಗಲ್‌ನ ಕ್ಲೌಡ್ ವಿಭಾಗದ ಮುಖ್ಯಸ್ಥರಾಗಿದ್ದ ಡಿಯಾನ್ ಗ್ರೀನ್ ಅವರ ಸ್ಥಾನಕ್ಕೆ ಕುರಿಯನ್ ಆಯ್ಕೆಯಾಗಿದ್ದಾರೆ. ಗೂಗಲ್ ಕ್ಲೌಡ್ ವ್ಯವಹಾರ ಅಮೆಜಾನ್ ಮತ್ತು ಮೈಕ್ರೊ ಸಾಫ್ಟ್‌ಗಿಂತ ಗೂಗಲ್ ಕ್ಲೌಡ್ ಹಿಂದೆ ಬಿದ್ದಿದೆ. ಹೀಗಾಗಿ, ಕುರಿಯನ್ ಗೆ ದೊಡ್ಡ ಸವಾಲಾಗಿದೆ.

ಲೈಂಗಿಕ ಆರೋಪ ಹೊತ್ತ ಅಧಿಕಾರಿಗೆ ಬೋನಸ್ ಕೊಟ್ಟು ರಕ್ಷಿಸಿದ್ದ ಗೂಗಲ್!

22 ವರ್ಷ ಸೇವೆ ಸಲ್ಲಿಸಿದ ಕುರಿಯನ್, ಸಂಸ್ಥೆಯ ಸಂಸ್ಥಾಪಕ ಲಾರ್ರಿ ಎಲ್ಲಿಸನ್ ಅವರ ಆಪ್ತ ವಲಯದಲ್ಲಿದ್ದರು. ಕ್ಲೌಡ್ ವ್ಯವಹಾರವನ್ನು ವಿಸ್ತರಿಸುವಲ್ಲಿ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು.

ಗೂಗಲ್ ಕ್ಲೌಡ್‌ನ ಸಿಇಒ ಆಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗ್ರೀನ್, ಗೂಗಲ್‌ನ ಮಾತೃ ಸಂಸ್ಥೆಯಾದ ಆಲ್ಫಬಿಟ್ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ. ಆರೇಕಲ್ ಕಾರ್ಯನಿರ್ವಾಹಕ ಅಧ್ಯಕ್ಷ ಲಾರ್ರಿ ಎಲ್ಲಿಸರ್ ಜತೆಗಿನ ವೈಮನಸ್ಸಿಂದ ಕುರಿಯನ್ ರಾಜೀನಾಮೆ ನೀಡಿದ್ದರು. ನವೆಂಬರ್ 26ರಂದು ಕುರಿಯನ್ ಗೂಗಲ್ ಕ್ಲೌಡ್ ಸೇರಲಿದ್ದು, 2019ರ ಆರಂಭದಿಂದ ಕ್ಲೌಡ್ ಮುಖ್ಯಸ್ಥರಾಗುವರು ಎಂದು ಗ್ರೀನ್ ಹೇಳಿದ್ದಾರೆ.

English summary
Oracle's ex-product chief Thomas Kurian will head Google's cloud division, replacing Diane Greene. In a blog post Friday, Greene said Kurian will join Google Cloud on November 26 and transition into the leadership role in early 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X