• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಎಸ್ಟಿ: ಜನ ಸಾಮಾನ್ಯರ 5 ಈಡೇರದ ನಿರೀಕ್ಷೆಗಳು

By Mahesh
|

ಬೆಂಗಳೂರು, ಜುಲೈ 03: ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಜಾರಿಗೊಂಡು ವರ್ಷ ಕಳೆದರೂ ಗೊಂದಲ, ನಿರೀಕ್ಷೆಗಳು ಇನ್ನೂ ಬದಲಾವಣೆಯಾಗಿಲ್ಲ. ಜನ ಸಾಮಾನ್ಯರ ಮೇಲಿನ ತೆರಿಗೆ ಹೊರೆ ತಗ್ಗಿಸಲು ಕಾನೂನಿನಲ್ಲಿ ಅನೇಕ ಬದಲಾವಣೆ ತಂದರೂ ಶೇ 28ರಷ್ಟು ತೆರಿಗೆ ಹೊರೆ ಬಗ್ಗೆ ಈಗಲೂ ಚರ್ಚೆ ಮುಂದುವರೆದಿದೆ.

ಜಿಎಸ್ಟಿ ಜಾರಿಗೊಳ್ಳುವುದಕ್ಕೂ ಮುನ್ನ ಭಾರತದಲ್ಲಿ ವಿವಿಧ ರೀತಿಯ ತೆರಿಗೆ ವಿಧಾನಗಳು ಚಾಲ್ತಿಯಲ್ಲಿತ್ತು. ಕೇಂದ್ರ ಮತ್ತು ಅಬಕಾರಿ ಸುಂಕ , ಸೇವಾ ತೆರಿಗೆ ಮತ್ತು ಕಸ್ಟಮ್ಸ್ ತೆರಿಗೆಗಳನ್ನು ಕೇಂದ್ರ ಸರ್ಕಾರ ಹಾಕುವುದಿದ್ದರೆ, ಮೌಲ್ಯವರ್ಧಿತ ತೆರಿಗೆ (ವ್ಯಾಟ್ ), ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ ಅಥವಾ ಲಾಟರಿ ತೆರಿಗೆಗಳನ್ನು ಆಯಾ ರಾಜ್ಯ ಸರಕಾರಗಳು ವಿಭಿನ್ನವಾಗಿ ನಿಭಾಯಿಸುತ್ತವೆ.

ಜಿಎಸ್ಟಿ ವ್ಯಾಪ್ತಿಗೆ ಬಂದರೂ ಇಂಧನ ಬೆಲೆ ತಗ್ಗಲ್ಲ?

ಈ ಎಲ್ಲಾ ತೆರಿಗೆಗಳನ್ನು ಒಂದೇ ತೆರಿಗೆ ವಿಧಾನದಡಿ ತರಲು ಜಿಎಸ್ ಟಿ ಜಾರಿಗೊಳಿಸಲಾಯಿತು. ವಿವಿಧ ಸ್ಲ್ಯಾಬ್ ಗಳಡಿಯಲ್ಲಿ ಜಿಎಸ್ಟಿ ವಿಂಗಡಿಸಲಾಗಿದ್ದು, ಪಾರದರ್ಶಕವಾಗಿ ವ್ಯವಹಾರಕ್ಕೆ ಅನುವು ಮಾಡಿಕೊಡಲಾಗಿದೆ. ಯಾವ ಕ್ಷೇತ್ರಗಳಲ್ಲಿ ಜಿಎಸ್ಟಿ ಬದಲಾವಣೆಯನ್ನು ಜನ ಸಾಮಾನ್ಯರು ಬಯಸಿದ್ದಾರೆ? ಎಂದು ತಿಳಿಯಲು ಮುಂದೆ ಓದಿ...

ಈ ವಸ್ತುಗಳ ಮೇಲೆ ಯಾವುದೇ ತೆರಿಗೆ ಇಲ್ಲ

ಈ ವಸ್ತುಗಳ ಮೇಲೆ ಯಾವುದೇ ತೆರಿಗೆ ಇಲ್ಲ

ಲಕೋಟೆಯಲ್ಲಿ ಪ್ಯಾಕ್ ಮಾಡದ ಆಹಾರ ಧಾನ್ಯಗಳು, ಹಾಲು, ಮೊಟ್ಟೆ, ಮೊಸರು, ಲಸ್ಸಿ, ಪನ್ನೀರ್, ಬ್ರಾಂಡ್ ಅಲ್ಲದ ನೈಸರ್ಗಿಕ ಜೇನು ತುಪ್ಪ, ತರಕಾರಿ, ಪ್ಯಾಕ್ ಮಾಡದ ಗೋಧಿ, ಮೈದಾ, ಕಡಲೆ ಹಿಟ್ಟು, ಉಪ್ಪು, ಗರ್ಭನಿರೋಧಕಗಳು, ಕಚ್ಛಾ ಸೆಣಬು, ಕಚ್ಛಾ ರೇಷ್ಮೆ ಜಿಎಸ್ಟಿಯಿಂದ ಮುಕ್ತವಾಗಿವೆ. ಇನ್ನು ಶಿಕ್ಷಣ ಮತ್ತು ಆರೋಗ್ಯ ವಲಯವನ್ನು ಜಿಎಸ್ಟಿಯಿಂದ ಹೊರಗಿಡಲಾಗಿದೆ. ಎರಡೂ ಸೇವೆಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ

ಜಿಎಸ್ ಟಿ ಪೆಟ್ರೋಲಿಯಂ ಮತ್ತು ಆಲ್ಕೋಹಾಲ್ ಉತ್ಪನ್ನಗಳಿಗೆ ಅನ್ವಯವಾಗಲ್ಲ. ಇದರಿಂದ ಸರ್ಕಾದರ ಬೊಕ್ಕಸಕ್ಕೆ ಭಾರೀ ನಷ್ಟವಾಗುವ ಸಾಧ್ಯತೆ ಇದೆ. ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವುದರಿಂದ ಪೆಟ್ರೋಲ್ ಮೇಲಿನ ಬೆಲೆ ನಿಯಂತ್ರಣ ಸಾಧ್ಯವಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 38ರು ಆಗಲಿದೆ ಎಂಬ ಎಣಿಕೆಯಿದೆ. ಆದರೆ, ಪೆಟ್ರೋಲ್-ಡಿಸೇಲ್ ಮೇಲೆ ಸಂಪೂರ್ಣ ಜಿಎಸ್ಟಿ ಪ್ರಪಂಚದಲ್ಲಿ ಎಲ್ಲೂ ಜಾರಿಗೆ ಬಂದಿಲ್ಲ. ಭಾರತದಲ್ಲೂ ಜಿಎಸ್ಟಿ ಜೊತೆ ಆಯಾ ರಾಜ್ಯಗಳ ಸೆಸ್ ಹಾಗೂ ಇನ್ನಿತರ ತೆರಿಗೆಗಳ ಸಮ್ಮಿಶ್ರದೊಂದಿಗೆ ಜಾರಿಗೊಳಿಸಬೇಕಾಗುತ್ತದೆ.

ರಿಯಲ್ ಎಸ್ಟೇಟ್ ಮೇಲೆ ಜಿಎಸ್ಟಿ

ರಿಯಲ್ ಎಸ್ಟೇಟ್ ಮೇಲೆ ಜಿಎಸ್ಟಿ

ಶೇ12ರಷ್ಟು ತೆರಿಗೆ ಅಲ್ಲದೆ, ಮನೆ ಕಟ್ಟಲು ಬಳಸುವ ಸಾಮಾಗ್ರಿಗಳಾದ ಉಕ್ಕು(ಶೇ18), ಸಿಮೆಂಟ್ (28%), ಮಾರ್ಬಲ್ ಹಾಗೂ ಗ್ರಾನೈಟ್ (28%), ಮಾರ್ಬಲ್ ಬ್ಲಾಕ್ (12%), ಹಾರುವ ಬೂದಿ ಇಟ್ಟಿಗೆ (12%), ಮರಳು, ಕಲ್ಲು, ಜಲ್ಲಿ (ಶೇ5), ಲಿಫ್ಟ್ ಹಾಗೂ ಇನ್ನಿತರ ಪರಿಕರ (ಶೇ28) ಹೀಗೆ ಶೇ 18 ರಿಂದ 28ರ ಸರಾಸರಿಯಲ್ಲಿ ತೆರಿಗೆ ಇದ್ದು, ಕಟ್ಟಡ ನಿರ್ಮಾಣ ವೆಚ್ಚ ಏರಿಕೆಗೆ ಕಾರಣವಾಗಿದೆ.

ಬಾಡಿಗೆ ಕಟ್ಟಡ, ಗೃಹ ಸಾಲ ಸೇರಿದಂತೆ ಅನೇಕ ಕಡೆಗಳಲ್ಲಿ ತೆರಿಗೆ ಎದುರಿಸಬೇಕಾಗಿದೆ. ಒಟ್ಟಾರೆಯಾಗಿ, 1 ಕೋಟಿ ರುಗೂ ಕಡಿಮೆ ದರ ಮನೆ(2,000 ಚದರ ಅಡಿ)ಗೆ ಶೇ 3.75ರಷ್ಟು ತೆರಿಗೆ ಎದುರಿಸಬೇಕಾಯಿತು. ಇದಲ್ಲದೆ, ಆಯಾ ರಾಜ್ಯಗಳ ಸೆಸ್ ಸೇರಿ ರಿಯಲ್ ಎಸ್ಟೇಟ್ ಉದ್ಯಮ, ಗ್ರಾಹಕ ಇಬ್ಬರಿಗೂ ತೆರಿಗೆ ಹೊರೆಯಾಗಲಿದೆ.

ವಿದ್ಯುಚ್ಛಕ್ತಿ ಮೇಲೆ ಏಕರೂಪ ತೆರಿಗೆ

ವಿದ್ಯುಚ್ಛಕ್ತಿ ಮೇಲೆ ಏಕರೂಪ ತೆರಿಗೆ

ವಿದ್ಯುಚ್ಛಕ್ತಿ ಮೇಲೆ ಏಕರೂಪ ತೆರಿಗೆ ತರಬೇಕು ಎಂಬ ಬೇಡಿಕೆ ಇದ್ದರೂ, ಕಷ್ಟಸಾಧ್ಯ. ಎಲ್ಲಾ ರಾಜ್ಯಗಳ ಆದಾಯ ಸೇರಿ 31,000 ಕೋಟಿ ರು ವಾರ್ಷಿಕ ಆದಾಯದ ಈ ಕ್ಷೇತ್ರದಲ್ಲಿ ಜಿಎಸ್ಟಿ ಜಾರಿಯಾದರೆ ವಿದ್ಯುತ್ ಆಧಾರಿತ ಉತ್ಪನ್ನಗಳ ಮೇಲಿನ ತೆರಿಗೆ ಕೂಡಾ ಪರಿಷ್ಕರಣೆಗೊಳ್ಳಬೇಕಾಗುತ್ತದೆ. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡಕ್ಕೂ ಆದಾಯ ಖೋತಾ ಹಾಗೂ ನಷ್ಟ ಎದುರಾಗಲಿದೆ. ಒಂದು ವೇಳೆ ಶೇ 5ರಷ್ಟು ತೆರಿಗೆ ಜಾರಿಗೆ ಬಂದರೆ, ರಾಜ್ಯ ಸರ್ಕಾರ ತನ್ನ ನಷ್ಟ ಸರಿದೂಗಿಸಲು ಜಿಎಸ್ಟಿಯೇತರ ಸೆಸ್ ಹಾಕಬಹುದು. ಒಟ್ಟಾರೆ, ಗ್ರಾಹಕನ ಮೇಲೆ ಹೊರೆ ತಪ್ಪಿದ್ದಲ್ಲ

ಶೇ28ರ ಸ್ಲ್ಯಾಬ್ ನಲ್ಲಿ ಭಾರಿ ಬದಲಾವಣೆ ಅಗತ್ಯ

ಶೇ28ರ ಸ್ಲ್ಯಾಬ್ ನಲ್ಲಿ ಭಾರಿ ಬದಲಾವಣೆ ಅಗತ್ಯ

* ಶೇ28ರ ಸ್ಲ್ಯಾಬ್ ನಲ್ಲಿ ಭಾರಿ ಬದಲಾವಣೆ ಅಗತ್ಯಸಿಮೆಂಟ್, ಚ್ಯೂಯಿಂಗ್ ಗಂ, ಸುಗಂಧ ದ್ರವ್ಯಗಳು, ಶ್ಯಾಂಪೂ, ಸೌಂದರ್ಯ ವರ್ಧಕಗಳು, ಪಟಾಕಿ ಮತ್ತು ಬೈಕ್ ಗಳು ಶೇಕಡಾ 28 ತೆರಿಗೆಗೆ ಒಳಪಟ್ಟಿವೆ.

* ತೆರಿಗೆ ದರದಲ್ಲಿ ಭಾರಿ ಕಡಿತ, ಸಬ್ಸಿಡಿ ನಿರೀಕ್ಷೆ ಇದೆ
* ಸಂಪೂರ್ಣ ಡಿಜಿಟಲ್ ವಹಿವಾಟು ಕಡ್ಡಾಯ, ಈ ಮೂಲಕ ತೆರಿಗೆ ಕಳ್ಳತನಕ್ಕೆ ಬ್ರೇಕ್ ಹಾಕಬೇಕು ಎಂಬ ಬೇಡಿಕೆ ಇದ್ದೇ ಇದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Even as India completes one full year after the implementation of the new indirect tax regime GST, a few changes to the law will have long-lasting benefits for the common man, say experts.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more