• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓಲಾಗೆ 4,898 ಕೋಟಿ ರೂಪಾಯಿ ನಷ್ಟ

By Sachhidananda Acharya
|

ಬೆಂಗಳೂರು, ಜೂನ್ 15: ಬೆಂಗಳೂರು ಮೂಲದ ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಬೃಹತ್ ಕಂಪನಿ ಓಲಾ ಸತತ ನಷ್ಟದಲ್ಲೇ ಮುಂದುವರಿದಿದೆ. ಅದೂ ಬರೋಬ್ಬರಿ 4,898 ಕೋಟಿ ರೂಪಾಯಿ.

2016-17 ನೇ ಅವಧಿಯಲ್ಲಿ ಕಂಪನಿ 4,898 ಕೋಟಿ ರೂಪಾಯಿ ನಷ್ಟ ತೋರಿಸಿದೆ. ಈ ಹಿಂದೆ 2015-16ರಲ್ಲಿ ಕಂಪನಿ 3,148 ಕೋಟಿ ರೂಪಾಯಿ ನಷ್ಟ ತೋರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಓಲಾ ಆ್ಯಪ್ ನಲ್ಲಿ ಪೊಲೀಸರಿಗೆ ತುರ್ತು ಸಂದೇಶ ರವಾನೆಗೆ ಅವಕಾಶ

ರಿಜಿಸ್ಟ್ರಾರ್ ಆಫ್ ಕಂಪನೀಸ್ ಗೆ ಓಲಾ ಸಂಸ್ಥೆಯನ್ನು ನಡೆಸುವ ಎಎನ್ಐ ಟೆಕ್ನಾಲಜೀಸ್ ವರದಿ ಸಲ್ಲಿಸಿದ್ದು ನಷ್ಟ ತೋರಿಸಿದೆ. 2016-17ನೇ ವರ್ಷದಲ್ಲಿ ಕಂಪನಿ ಆದಾಯ ಬರೋಬ್ಬರಿ ಶೇಕಡಾ 70ರಷ್ಟು ವೃದ್ಧಿಯಾಗಿದೆ. ಆದರೆ ನಷ್ಟ ಸರಿದೂಗಿಸಲು ಈ ಬೆಳವಣಿಗೆ ಸಾಕಾಗಿಲ್ಲ. 2015-16ರಲ್ಲಿ 810 ಕೋಟಿ ರೂಪಾಯಿ ಆದಾಯ ದಾಖಲಿಸಿದ್ದ ಕಂಪನಿ, 2016-17ರಲ್ಲಿ 1,380 ಕೋಟಿ ರೂಪಾಯಿ ಆದಾಯ ಗಳಿಸಿದೆ.

ಇನ್ನು ವರ್ಷದ ಅವಧಿಯಲ್ಲಿ ಓಲಾದ ಸಿಬ್ಬಂದಿ ವೆಚ್ಚದಲ್ಲೂ ಶೇಕಡಾ 24ರಷ್ಟು ಏರಿಕೆಯಾಗಿದೆ. ಹಣಕಾಸು ವೆಚ್ಚದಲ್ಲೂ ಹೆಚ್ಚಳವಾಗಿದೆ. ಇದು ನಷ್ಟದ ಪ್ರಮಾಣದ ಮೇಲೆ ಪರಿಣಾಮ ಬೀರಿದೆ.

2011ರಲ್ಲಿ ಬೆಂಗಳೂರಿನಲ್ಲಿ ಭವಿಷ್ ಅಗರ್ವಾಲ್ ಮತ್ತು ಅಂಕಿತ್ ಭಾಟಿ ಓಲಾ ಕಂಪನಿ ಸ್ಥಾಪಿಸಿದ್ದರು. ಇಂದು 110 ನಗರಗಳಲ್ಲಿ ಓಲಾ ಸೇವೆ ಲಭ್ಯವಿದ್ದು 10 ಲಕ್ಷಕ್ಕೂ ಅಧಿಕ ಕಾರು ಮತ್ತು ಆಟೋಗಳ ಬೃಹತ್ ಜಾಲವಿದೆ. ಇತರ ಎರಡು ಕಂಪನಿಗಳನ್ನೂ ಇಂದು ಓಲಾ ಹೊಂದಿದೆ.

ಓಲಾಗೆ ಅಮೆರಿಕಾ ಮೂಲದ ದೈತ್ಯ ಸಂಸ್ಥೆ ಉಬರ್ ಭಾರೀ ಪೈಪೋಟಿ ನೀಡುತ್ತಿದ್ದು, ಇದರಿಂದ ದರ ಸಮರದ ಹಿನ್ನೆಲೆಯಲ್ಲಿ ಕಂಪನಿ ನಷ್ಟ ಅನುಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ola ಸುದ್ದಿಗಳುView All

English summary
App based taxi service company Ola saw its losses widening to Rs 4,897.8 crore, even though its total income grew 70 per cent during financial year 2016-17 as compared to the previous fiscal.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more