ಓಲಾ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ದಿನ 1 ಲಕ್ಷ ಬುಕ್ಕಿಂಗ್
ಬೆಂಗಳೂರು, ಜೂನ್ 18: ಓಲಾದ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 24 ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಬುಕ್ಕಿಂಗ್ ಆಗಿದ್ದು, ವಿಶ್ವದಲ್ಲೇ ಅತಿಹೆಚ್ಚು ಬುಕ್ಕಿಂಗ್ ಆದ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಓಲಾ ಪ್ರಕಟಿಸಿದೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮುಂಗಡ ಕಾಯ್ದಿರಿಸುವಿಕೆಯನ್ನು ಜುಲೈ 15ರಂದು ಸಂಜೆ ಆರಂಭಿಸಲಾಗಿತ್ತು. ಕ್ರಾಂತಿಕಾರಕ ಓಲಾ ಸ್ಕೂಟರನ್ನು ಅಧಿಕೃತ ವೆಬ್ ತಾಣ ಮೂಲಕ ಕೇವಲ ರೂ. 499 ಪಾವತಿಸಿ ಕಾಯ್ದಿರಿಸಬಹುದಾಗಿದೆ. ಕಂಪನಿ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆಯನ್ನು ಕಾಣುತ್ತಿದ್ದು, ದಾಖಲೆ ಸಂಖ್ಯೆಯಲ್ಲಿ ಸ್ಕೂಟರ್ ಕಾಯ್ದಿರಿಸಲು ಗ್ರಾಹಕರು ವೆಬ್‍ಸೈಟ್‍ಗೆ ಭೇಟಿ ನೀಡುತ್ತಿದ್ದಾರೆ.
ಓಲಾ ಸಮೂಹದ ಅಧ್ಯಕ್ಷ ಮತ್ತು ಸಮೂಹ ಸಿಇಒ ಭವಿಷ್ ಅಗರ್‍ವಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, "ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಗಕ್ಕೆ ಭಾರತದಾದ್ಯಂತ ಗ್ರಾಹಕರಿಂದ ಅದ್ಭುತ ಸ್ಪಂದನೆ ಬಂದಿರುವುದು ನನಗೆ ರೋಮಾಂಚನ ತಂದಿದೆ. ಈ ಅಭೂತಪೂರ್ವ ಬೇಡಿಕೆಯು, ಗ್ರಾಹಕರು ಎಲೆಕ್ಟ್ರಿಕ್ ವಾಹನಗಳಿಗೆ ವರ್ಗಾವಣೆಗೊಳ್ಳುತ್ತಿರುವ ಸ್ಪಷ್ಟ ಸೂಚಕವಾಗಿದೆ. ವಿಶ್ವವನ್ನು ಸುಸ್ಥಿರ ಸಂಚಾರಕ್ಕೆ ವರ್ಗಾಯಿಸುವ ನಮ್ಮ ದೂರದೃಷ್ಟಿಯಲ್ಲಿ ಇದು ದೊಡ್ಡ ಹೆಜ್ಜೆಯಾಗಿದೆ. ಓಲಾ ಸ್ಕೂಟರ್ ಕಾಯ್ದಿರಿಸಿ, ಇವಿ ಕ್ರಾಂತಿಯಲ್ಲಿ ಪಾಲ್ಗೊಂಡ ಎಲ್ಲ ಗ್ರಾಹಕರಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಇದು ಕೇವಲ ಆರಂಭ ಮಾತ್ರ!" ಎಂದು ಹೇಳಿದರು.
ಓಲಾ ಸ್ಕೂಟರ್, ಓಲಾ ಎಲೆಕ್ಟ್ರಿಕ್‍ನ ಕ್ರಾಂತಿಕಾರಕ ಉತ್ಪನ್ನವಾಗಿದ್ದು, ಇಡೀ ವರ್ಗದಲ್ಲೇ ಅತ್ಯಧಿಕ ವೇಗ, ಅಭೂತಪೂರ್ವ ಶ್ರೇಣಿ, ದೊಡ್ಡ ಬೂಟ್ ಸ್ಥಳಾವಕಾಶ ಮತ್ತು ಅತ್ಯಾಧುನಿಕ ತಂತ್ರಜ್ಞಾನವನು ಇದು ಹೊಂದಿದೆ.

ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸರಣಿಯಲ್ಲಿ ಮೊದಲನೆಯದಾದ ಓಲಾ ಸ್ಕೂಟರನ್ನು ಭಾರತದ ತಮಿಳುನಾಡಿನ 500 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ವಿಶ್ವದ ಅತಿದೊಡ್ಡ, ಅತ್ಯಾಧುನಿಕ ಮತ್ತು ಸುಸ್ಥಿರ ದ್ವಿಚಕ್ರವಾಹನ ಫ್ಯಾಕ್ಟರಿ ಎನಿಸಿದ ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗುತ್ತದೆ. ಓಲಾ ಸ್ಕೂಟರ್ ಫ್ಯಾಕ್ಟರಿಯ ಮೊದಲ ಹಂತ ವಾರ್ಷಿಕವಾಗಿ 20 ಲಕ್ಷ ವಾಹನಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ ಶೀಘ್ರವೇ ಕಾರ್ಯಾರಂಭ ಮಾಡಲಿದೆ.
ಓಲಾ ಬಗ್ಗೆ: ಓಲಾ ಭಾರತದ ಅತಿದೊಡ್ಡ ಸಂಚಾರ ಪ್ಲಾಟ್‍ಫಾರಂ ಆಗಿದ್ದು, ವಿಶ್ವದ ಅತಿದೊಡ್ಡ ಸವಾರಿ ಸೌಲಭ್ಯ ಕಲ್ಪಿಸುವ ಕಂಪನಿಗಳಲ್ಲೊಂದಾಗಿದೆ. ಮೂರು ಖಂಡಗಳಲ್ಲಿ ನೂರು ಕೋಟಿಗೂ ಅಧಿಕ ಮಂದಿಗೆ ಬೇಡಿಕೆಗೆ ಅನುಸಾರವಾಗಿ ವಾಹನ ಪೂರೈಸುವ ಮೂಲಕ ನಗರ ಸಂಚಾರ ವ್ಯವಸ್ಥೆಯಲ್ಲಿ ಕ್ರಾಂತಿಯನ್ನು ಉಂಟುಮಾಡಿದೆ. ಸವಾರಿ ಸೌಲಭ್ಯ ಕಲ್ಪಿಸುವ ಪ್ಲಾಟ್‍ಫಾರಂ ಹಾಗೂ ವಿಶ್ವದ ಅತಿದೊಡ್ಡ ಹಾಗೂ ಅತ್ಯಾಧುನಿಕ ಮತ್ತು ಸುಸ್ಥಿರ ದ್ವಿಚಕ್ರ ವಾಹನ ಉತ್ಪಾದಿಸುವ ಫ್ಯೂಚರ್ ಫ್ಯಾಕ್ಟರಿ ಮೂಲಕ ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನಗಳ ಮೂಲಕ ಇಂದು ಓಲಾ ವಿಶ್ವವನ್ನು ಸುಸ್ಥಿರ ಸಂಚಾರದತ್ತ ಮುನ್ನಡೆಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದೆ. ವಿಶ್ವವನ್ನು ಸುಸ್ಥಿರ ಸಂಚಾರ ವ್ಯವಸ್ಥೆಗೆ ವರ್ಗಾಯಿಸಲು ಓಲಾ ಬದ್ಧವಾಗಿದ್ದು, ನಾವು ಇಂದು ಕಾಣುವ ವಿಶ್ವವನ್ನು ಮತ್ತಷ್ಟು ಉತ್ತಮಗೊಳಿಸುವ ಪ್ರಯತ್ನ ನಡೆಸುತ್ತದೆ.
-
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಏಪ್ರಿಲ್ 9ರ ದರಪಟ್ಟಿ












Click it and Unblock the Notifications