ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯುಧ ಪೂಜೆ ದಿನದಂದು ಶುಭ ಸುದ್ದಿ: ಇಂಧನ ಬೆಲೆ ಇಳಿಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 18: ಆಯುಧ ಪೂಜೆ ದಿನದಂದು ವಾಹನ ಸವಾರರಿಗೆ ಶುಭ ಸುದ್ದಿ ಸಿಕ್ಕಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಗುರುವಾರ ಇಳಿಕೆಯಾಗಿದೆ.

ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆಯಲ್ಲಿ ಪ್ರತಿ ಲೀಟರ್ ಮೇಲೆ 21 ಪೈಸೆ, ಹಾಗೂ ಡೀಸೆಲ್ ಬೆಲೆ ಮೇಲೆ 11 ಪೈಸೆ ಇಳಿಕೆಯಾಗಿದೆ.

ಮೋದಿ ನಿಜಕ್ಕೂ ಅಚ್ಛೇ ದಿನ್ ನೀಡುತ್ತಿದ್ದಾರೆ ಎಂದ ಸೌದಿ ಅರೇಬಿಯಾಮೋದಿ ನಿಜಕ್ಕೂ ಅಚ್ಛೇ ದಿನ್ ನೀಡುತ್ತಿದ್ದಾರೆ ಎಂದ ಸೌದಿ ಅರೇಬಿಯಾ

ಅಕ್ಟೋಬರ್ 05ರಂದು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಅಬಕಾರಿ ಸುಂಕ 1.50 ರು ಪ್ರತಿ ಲೀಟರ್ ನಷ್ಟು ಕೇಂದ್ರ ಸರ್ಕಾರ ಇಳಿಕೆ ಮಾಡಿತ್ತು. ತೈಲ ಕಂಪನಿಗಳು 1 ರು ಸಬ್ಸಿಡಿಯನ್ನು ತಗ್ಗಿಸಿದ್ದವು, ಹೀಗಾಗಿ, 2.50ರು ಪ್ರತಿ ಲೀಟರ್ ಇಳಿಕೆಯಾಗಿತ್ತು.

Oil companies cut petrol, diesel prices

ದರ ಇಳಿಕೆ ನಂತರ ಪರಿಷ್ಕೃತ ಇಂಧನ ದರಗಳು ಹೀಗಿವೆ:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀ. 82.62 ರೂ.ಗಳಷ್ಟಾಗಿದೆ. ಡೀಸೆಲ್ ದರ 75.58 ರು ಪ್ರತಿ ಲೀಟರ್ ನಷ್ಟಿದೆ. ಮುಂಬೈನಲ್ಲಿ 21 ಪೈಸೆಗಳ ಇಳಿಕೆ ಕಂಡುಬಂದಿದ್ದು, ಪ್ರತಿ ಲೀ. 88.62 ರೂ. ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ 79.24 ರೂ.ಗಳಷ್ಟಿದೆ.

ಏರುತ್ತಲೇ ಇದೆ ತೈಲಬೆಲೆ: ಮೋದಿ ಸಭೆಯಿಂದ ಮೋಡಿಯಾಗುತ್ತಾ ಕಾದು ನೋಡಿ! ಏರುತ್ತಲೇ ಇದೆ ತೈಲಬೆಲೆ: ಮೋದಿ ಸಭೆಯಿಂದ ಮೋಡಿಯಾಗುತ್ತಾ ಕಾದು ನೋಡಿ!

ಕೋಲ್ಕತಾದಲ್ಲಿ ಲೀ. ಪೆಟ್ರೋಲ್‌ 84.44 ರೂ. ಮತ್ತು ಡೀಸೆಲ್‌ 77.43 ರೂ. ನಷ್ಟಿದೆ. ಚೆನ್ನೈನಲ್ಲಿ ಪೆಟ್ರೋಲ್‌ ಪ್ರತಿ ಲೀ.ಗೆ 85.88 ರೂ. ಮತ್ತು ಡೀಸೆಲ್‌ 79.93 ರೂ. ಇದೆ.

ಬೆಂಗಳೂರಿನಲ್ಲಿ ಪ್ರತಿ ಲೀ. ಪೆಟ್ರೋಲ್‌ 22 ಪೈಸೆ ಇಳಿಕೆಯೊಂದಿಗೆ 83.27 ರೂ. ಇದ್ದು, 11 ಪೈಸೆ ಇಳಿಕೆ ಕಂಡಿರುವ ಡೀಸೆಲ್‌ 75.97 ರೂ ಆಗಿದೆ.

English summary
Petrol and diesel prices Thursday were reduced for the first time in over two months because of a drop in the cost of production, according to state-owned oil firms.Petrol price was cut by 21 paise per litre and diesel by 11 paise, a price notification issued by state retailers said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X