• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಕ್ಷಣ ಕ್ಷೇತ್ರದಲ್ಲಿ ವಸೂಲಾಗದ ಸಾಲ: ನರ್ಸಿಂಗ್, ಎಂಜಿನಿಯರಿಂಗ್‌ನಲ್ಲಿ ಅಧಿಕ

|

ಬೆಂಗಳೂರು, ಮಾರ್ಚ್ 22: ಉದ್ಯಮ ವಲಯದಲ್ಲಿ ವಸೂಲಿಯಾಗದ 'ಕೆಟ್ಟ ಸಾಲ'ದ ಬಗ್ಗೆ ಚರ್ಚೆಗಳಾಗುತ್ತಿರುವ ನಡುವೆಯೇ ಶಿಕ್ಷಣ ವಲಯದಲ್ಲಿನ ಬಾಕಿ ಉಳಿದಿರುವ ಸಾಲದ ಮೊತ್ತ ಬಹಿರಂಗವಾಗಿದೆ. 2020ರ ಡಿಸೆಂಬರ್ ಅಂತ್ಯದ ವೇಳೆಗೆ ಭಾರಿ ಪ್ರಮಾಣದಲ್ಲಿ ಶೈಕ್ಷಣಿಕ ಸಾಲ ವಸೂಲಿಯಾಗದೆ ಉಳಿದಿದೆ. ಇದರಲ್ಲಿ ಅತಿ ಹೆಚ್ಚಿನ, ಅಂದರೆ ಶೇ 9.7ರಷ್ಟು ಕೆಟ್ಟ ಸಾಲ ನರ್ಸಿಂಗ್ ಮತ್ತು ಎಂಜಿನಿಯರಿಂಗ್ ಶಿಕ್ಷಣದ ಪಾಲಿದೆ.

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಗಳು (ಎಸ್‌ಎಲ್‌ಬಿಸಿ) ಒಟ್ಟುಗೂಡಿಸಿರುವ ದಾಖಲೆಗಳ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯ ಅಂತ್ಯದಲ್ಲಿ (ಡಿಸೆಂಬರ್) 3.5 ಲಕ್ಷಕ್ಕೂ ಅಧಿಕ ಖಾತೆಗಳಿಗೆ ಸೇರಿದ 8,263 ಕೋಟಿ ರೂಪಾಯಿ ಮೊತ್ತವನ್ನು ವಸೂಲಾಗದ ಸಾಲ (ಎನ್‌ಪಿಎ) ಎಂದು ಗುರುತಿಸಲಾಗಿದೆ. ಒಟ್ಟು 23.3 ಲಕ್ಷಕ್ಕೂ ಅಧಿಕ ಖಾತೆಗಳಿಂದ ಪಡೆದಿರುವ 84,965 ಕೋಟಿ ರೂಪಾಯಿ ಶೈಕ್ಷಣಿಕ ಸಾಲ ಬಾಕಿ ಉಳಿದಿದೆ.

ಟ್ರಾಕ್ಟರ್‌ ಸಾಲ ಪಡೆಯದವನ ಮನೆಗೆ 10 ವರ್ಷಗಳ ನಂತರ ಬಂತು ಬ್ಯಾಂಕ್ ನೋಟಿಸ್

84,965 ಕೋಟಿ ರೂ ಬಾಕಿ ಉಳಿದಿರುವ ಸಾಲದಲ್ಲಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ 10,147 ಕೋಟಿ ರೂ. (11.9%), ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 33,316 ಕೋಟಿ ರೂ. (39.2%), ನರ್ಸಿಂಗ್‌ಗೆ 3,675 ಕೋಟಿ ರೂ. (4.3%), ಎಂಬಿಎಗೆ 9,541 ಕೋಟಿ ರೂ. (11.2%), ಮತ್ತು ಇತರೆ ಎಲ್ಲ ಕೋರ್ಸ್‌ಗಳು ಸೇರಿ 28,286 ಕೋಟಿ ರೂ. (33.2%) ಮೊತ್ತ ಇದೆ ಎಂದು ದಾಖಲೆಗಳು ತಿಳಿಸಿವೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಯಾವ ಕೋರ್ಸ್‌ನಲ್ಲಿ ಎಷ್ಟು ಬಾಕಿ?

ಯಾವ ಕೋರ್ಸ್‌ನಲ್ಲಿ ಎಷ್ಟು ಬಾಕಿ?

ಇನ್ನು ಬಾಕಿ ಉಳಿದಿರುವ ಸಾಲದ ಪ್ರಮಾಣದಲ್ಲಿ ವಸೂಲಾಗದ ಸಾಲದಲ್ಲಿ (ಎನ್‌ಪಿಎ) ನರ್ಸಿಂಗ್ ಶೇ 14ರಷ್ಟು ಬಾಕಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ಎಂಜಿನಿಯರಿಂಗ್‌ನ ಶೇ 12.1, ಎಂಬಿಎ ಕೋರ್ಸ್‌ನ ಶೇ 7.1 ಮತ್ತು ವೈದ್ಯಕೀಯದ ಶೇ 6.2ರಷ್ಟು ಮೊತ್ತವನ್ನು ಕೆಟ್ಟ ಸಾಲ ಎಂದು ಪರಿಗಣಿಸಲಾಗಿದೆ. ಇನ್ನು ಉಳಿದ ಶೈಕ್ಷಣಿಕ ಕೋರ್ಸ್‌ಗಳಿಗಾಗಿ ಪಡೆದ ಸಾಲದಲ್ಲಿ ಒಟ್ಟು ಶೇ 8.4ರಷ್ಟು ಎನ್‌ಪಿಎ ಇದೆ.

ತಮಿಳುನಾಡಲ್ಲಿ ಎನ್‌ಪಿಎ ಅಧಿಕ

ತಮಿಳುನಾಡಲ್ಲಿ ಎನ್‌ಪಿಎ ಅಧಿಕ

ದೇಶದೆಲ್ಲೆಡೆಗಿನ ಶೈಕ್ಷಣಿಕ ಎನ್‌ಪಿಎಯ ದಾಖಲೆಗಳನ್ನು ಪರಿಶೀಲಿಸಿದರೆ, ಪೂರ್ವಭಾಗದಲ್ಲಿನ ಬಿಹಾರ ಮತ್ತು ದಕ್ಷಿಣದ ತಮಿಳುನಾಡು ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ. ಉತ್ತರ ಮತ್ತು ಪಶ್ಚಿಮ ರಾಜ್ಯಗಳು ಶೈಕ್ಷಣಿಕ ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿವೆ.

ಲೋನ್ ಆಪ್‌ಗಳ ಮೀಟರ್ ಬಡ್ಡಿ ಕೇಸಿಗೆ ಪೊಲೀಸರು ಎಳ್ಳುನೀರು ಬಿಟ್ಟರೇ ?

ಪ್ರದೇಶವಾರು ಎನ್‌ಪಿಎ ವಿವರ

ಪ್ರದೇಶವಾರು ಎನ್‌ಪಿಎ ವಿವರ

ಎನ್‌ಪಿಎದ ಶೇ 9.7ರಷ್ಟು ರಾಷ್ಟ್ರೀಯ ಸರಾಸರಿಯಲ್ಲಿ, ಪೂರ್ವ ಪ್ರದೇಶದಲ್ಲಿ ಶೇ 14.2ರಷ್ಟಿದೆ, ದಕ್ಷಿಣದಲ್ಲಿ ಶೇ 11.9ರಷ್ಟು ಎನ್‌ಪಿಎ ಇದೆ. ಉತ್ತರದ ಪ್ರದೇಶದಲ್ಲಿ ಶೇ 3.3 ಮತ್ತು ಪಶ್ಚಿಮದಲ್ಲಿ ಶೇ 3.9ರಷ್ಟು ಮಾತ್ರ ಎನ್‌ಪಿಎ ಇದೆ. ಹಾಗೆಯೇ ಕೇಂದ್ರ ಭಾಗದಲ್ಲಿ ಶೇ 6.1 ಮತ್ತು ಈಶಾನ್ಯ ಪ್ರದೇಶಗಳಲ್ಲಿ ಶೇ 6.8ರಷ್ಟು ಎನ್‌ಪಿಎ ಗುರುತಿಸಲಾಗಿದೆ.

ಉಳಿದ ವಲಯಗಳಲ್ಲಿ ಎನ್‌ಪಿಎ ಎಷ್ಟು?

ಉಳಿದ ವಲಯಗಳಲ್ಲಿ ಎನ್‌ಪಿಎ ಎಷ್ಟು?

ಪ್ರಸಕ್ತ ಹಣಕಾಸು ವರ್ಷದಲ್ಲಿ ಉದ್ಯಮ ಮತ್ತು ಕೃಷಿಯ ಬಳಿಕ ವಸೂಲಾಗದ ಸಾಲದಲ್ಲಿ ಶೈಕ್ಷಣಿಕ ವಲಯ ಮೂರನೇ ಸ್ಥಾನದಲ್ಲಿದೆ. ಕೈಗಾರಿಕಾ ವಲಯದಲ್ಲಿ 2018, 2019 ಮತ್ತು 2020ರಲ್ಲಿ ವಸೂಲಾಗದ ಸಾಲದ ಮೊತ್ತ ಕ್ರಮವಾಗಿ ಶೇ 21, ಶೇ 16.7, ಶೇ 13.6ರಷ್ಟು ವರದಿಯಾಗಿದೆ. ಕೃಷಿ ವಲಯದಲ್ಲಿ ಈ ಮೂರು ವರ್ಷಗಳಲ್ಲಿ ಶೇ 7.8, ಶೇ 8.9, ಶೇ 10.3ರಷ್ಟಿದೆ. ಹಾಗೆಯೇ ಶಿಕ್ಷಣ ಕ್ಷೇತ್ರವು ಕೊನೆಯ ಮೂರು ವರ್ಷಗಳಲ್ಲಿ ಶೇ 8.1, ಶೇ 8.3, ಶೇ 7.6ರಷ್ಟು ವರದಿಯಾಗಿದೆ.

100 ಸಾಲಗಾರರು ಬ್ಯಾಂಕ್‌ಗೆ ಹಿಂತಿರುಗಿಸದ ಮೊತ್ತ 84,632 ಕೋಟಿ ರೂಪಾಯಿ

ಗೃಹ ಸಾಲ ಮತ್ತು ಆಟೊಮೊಬೈಲ್ ವಲಯದ ಮೇಲಿನ ಎನ್‌ಪಿಎ ಶೇ 2ಕ್ಕಿಂತ ಕಡಿಮೆ ಇದೆ. ಚಿಲ್ಲರೆ ವಲಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಇದು ಶೇ 2.1, ಶೇ 2 ಮತ್ತು ಶೇ 1.5ರಷ್ಟು ದಾಖಲಾಗಿವೆ.

English summary
SLBCs data showed Rs 8,263 crore belonging to more than 3.5 lakh accounts of education loans have been classified as NPAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X