ಟಾಟಾ ಡೊಕೊಮೊ ಗ್ರಾಹಕರಿಗೆ ಕಹಿಸುದ್ದಿ

ಟಾಟಾ ಟೆಲಿಸರ್ವಿಸಸ್‌ನಲ್ಲಿ ಎನ್‌ಟಿಟಿ ಡೊಕೊಮೊ ಎರಡನೇ ಅತಿ ಹೆಚ್ಚಿನ ಪಾಲನ್ನು ಹೊಂದಿದ್ದು ಇದೀಗ ಷೇರು ಮಾರಾಟ ಮಾಡಿದ್ದಲ್ಲಿ ಟಾಟಾಗೆ ಮಾರುಕಟ್ಟೆಯಲ್ಲಿ ಭಾರೀ ಹೊಡೆತ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಟಾಟಾ ಟೆಲಿಸರ್ವಿಸಸ್ ಪ್ರಸ್ತುತ 26 ಸಾವಿರ ಕೋಟಿ ಸಾಲದಲ್ಲಿದೆ. ಈಗ ಎನ್‌ಟಿಟಿ ಡೊಕೊಮೊ ಪಾಲನ್ನು ಮಾರಿದ್ದಲ್ಲಿ 25,947 ಕೋಟಿ ರೂ. ಹೊರೆ ಟಾಟಾ ಟೆಲಿ ಸರ್ವಿಸಸ್ ಮೇಲೆ ಬೀಳಲಿದೆ. ಎನ್‌ಟಿಟಿ ಡೊಕೊಮೊ ಮಾರಾಟ ಮಾಡಲಿರುವ ಷೇರನ್ನು ಯಾವ ಕಂಪೆನಿ ಖರೀದಿಸಲಿದೆ ಎನ್ನುವುದು ಇನ್ನೂ ಎರಡು ಕಂಪೆನಿಗಳು ಬಹಿರಂಗಪಡಿಸಿಲ್ಲ.
ಟಾಟಾ ಟೆಲಿ ಸರ್ವಿಸಸ್‌ನಲ್ಲಿ ಪ್ರಸ್ತುತ ಶೇ.36.17 ಪಾಲನ್ನು ಟಾಟಾ ಸನ್ಸ್, ಎನ್‌ಟಿಟಿ ಡೊಕೊಮೊ ಶೇ.26, ಟಾಟಾ ಕಮ್ಯೂನಿಕೇಶನ್ ಶೇ.9.33, ಟೀಮ್ ಸೆಕ್ ಶೇ.6.45, ಟಾಟಾ ಪವರ್ ಶೇ.6.97, ಟಾಟಾ ಇಂಡಸ್ಟ್ರೀಸ್ ಶೇ.5.46 ಹೊಂದಿದ್ದರೆ, ಶೇ.9.62ರಷ್ಟು ಪಾಲು ಉಳಿದ ಷೇರುದಾರರ ಕೈಯಲ್ಲಿದೆ.
ಜಪಾನ್ ಕಂಪೆನಿ 2009 ಮಾರ್ಚ್‌ನಲ್ಲಿ 2.7 ಬಿಲಿಯನ್ ಡಾಲರ್(ಅಂದಿನ ದರ ಅಂದಾಜು 13,070 ಕೋಟಿ ರೂ) ನೀಡಿ ಟಾಟಾ ಟೆಲಿ ಸರ್ವಿಸಸ್‌ನಲ್ಲಿ ಶೇ.26.5 ಪಾಲನ್ನು ಖರೀದಿಸಿತ್ತು. ಖರೀದಿ ವೇಳೆ ಟಾಟಾ ಜೊತೆಗೆ ಕೆಲವೊಂದು ಒಪ್ಪಂದಗಳನ್ನುಎನ್‌ಟಿಟಿ ಡೊಕೊಮೊ ಮಾಡಿಕೊಂಡಿತ್ತು.ಆದರೆ ಒಪ್ಪಂದ ಪ್ರಕಾರ ಟಾಟಾ ಕಂಪೆನಿ ಗುರಿಯನ್ನು ತಲುಪಲು ವಿಫಲವಾದ ಹಿನ್ನಲೆಯಲ್ಲಿ ಈ ಕಂಪೆನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಎನ್‌ಟಿಟಿ ಡೊಕೊಮೊ ಹೇಳಿದೆ.[ಟಿವಿ ಜಾಹೀರಾತಿಗೂ ಸೆನ್ಸಾರ್ ಅಗತ್ಯ]
ಇತ್ತೀಚೆಗೆ ಮುಕ್ತಾಯಗೊಂಡ ಸ್ಪೆಕ್ಟ್ರಂ ಹಂಚಿಕೆಯ ಪ್ರಕ್ರಿಯೆಯಲ್ಲೂ ಟಾಟಾ ಟೆಲಿ ಸರ್ವಿಸಸ್ ಸ್ಪೆಕ್ಟ್ರಂ ಖರೀದಿಸಲು ಅಷ್ಟೇನೂ ಆಸಕ್ತಿ ತೋರಿಸಿರಲಿಲ್ಲ. ಸಿಡಿಎಂಎ ಮತ್ತು ಜಿಎಸ್‌ಎಂ ಸೇವೆಗಳನ್ನು ಟಾಟಾ ಟೆಲಿಸರ್ವಿಸ್ ದೇಶದಲ್ಲಿ ನೀಡುತ್ತಿದ್ದು,ಪ್ರಸ್ತುತ 6.3 ಕೋಟಿ ಬಳಕೆದಾರರನ್ನು ಹೊಂದಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications