ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲಿನಲ್ಲಿ 'ಫುಡ್ ಕ್ರಾಂತಿ' ಟೆಕ್ಕಿಗಳಿಂದ ನಾಂದಿ

By Mahesh
|
Google Oneindia Kannada News

ಬೆಂಗಳೂರು, ಅ.15: ಭಾರತದ ಸಾರಿಗೆ ಸಂಪರ್ಕ ವ್ಯವಸ್ಥೆಯ ಜೀವನಾಡಿ ರೈಲು ಪ್ರಯಾಣ. ಆದರೆ, ಬಹುತೇಕ ಪ್ರಯಾಣಿಕರು ರೈಲು ಪ್ರಯಾಣ ಇಷ್ಟಪಟ್ಟರು ಪ್ರಯಾಣದ ಸಮಯದಲ್ಲಿ ಸಿಗುವ ಆಹಾರದಿಂದ ದೂರವುಳಿಯುತ್ತಾರೆ. ಇದಕ್ಕೆ ಒಂದು ಪರಿಹಾರ ಸಿಕ್ಕಿದೆ.

ರೈಲು ಪ್ರಯಾಣದ ವೇಳೆ ಎಷ್ಟೋ ಮಂದಿ ಚಿಪ್ಸ್, ಬಿಸ್ಕೆಟ್, ಕುರುಕುಲು ತಿಂಡಿ ತಿಂದು ನೀರು ಕುಡಿಯುತ್ತಾರೆ. ರೈಲಿನಲ್ಲಿ ಸಿಗುವ ಆಹಾರದ ಪ್ರಮಾಣ ಹಾಗೂ ಗುಣಮಟ್ಟದ ಬಗ್ಗೆ ಪ್ರಯಾಣಿಕರಿಂದ ಅನೇಕ ದೂರುಗಳಿದೆ. ಈ ಸಮಸ್ಯೆ ಸಿಕ್ಕ ಪರಿಹಾರ ಆನ್ ಲೈನ್ ಫುಡ್ ಬುಕ್ಕಿಂಗ್

ಹೌದು 150 ರು ವ್ಯಯಿಸಿ ಇಷ್ಟವಾದ ಆಹಾರವನ್ನು ನಿಮ್ಮ ಬರ್ಥ್(berth)ನಲ್ಲೇ ಪಡೆದು ತಿಂದು ತೇಗಬಹುದು. ಹೀಗೊಂದು ವ್ಯವಸ್ಥೆ ನಿಧಾನಗತಿಯಲ್ಲಿ ಜನಪ್ರಿಯತೆ ಪಡೆಯುತ್ತಿದೆ.

ಸುಮಾರು 4000 ಕೋಟಿ ಮೌಲ್ಯದ ರೈಲ್ವೆ ಕೇಟರಿಂಗ್ ಸೆಕ್ಟರ್ ನಿಂದ ಆಗದಿರುವ ಕಾರ್ಯಕ್ಕೆ ನಾಲ್ಕಾರು ವೆಬ್ ಸೈಟ್ ಸಂಸ್ಥೆಗಳು ಆನ್ ಲೈನ್ ಫುಡ್ ಬುಕ್ಕಿಂಗ್ ಮೂಲಕ ಕ್ರಾಂತಿ ಮಾಡತೊಡಗಿವೆ.

Now, book online for your railway food

ಟ್ರಾವೆಲ್ ಖಾನಾ.ಕಾಂ ಹಾಗೂ ಮೇರಾ ಫುಡ್ ಚಾಯ್ಸ್.ಕಾಂ ಇಲ್ಲಿ ಹೆಸರಿಸಬಹುದಾದ ಪ್ರಮುಖ ತಾಣಗಳಾಗಿದೆ. ಎರಡು ವೆಬ್ ತಾಣ ಸಂಸ್ಥೆಗಳು ಸುಮಾರು 100ಕ್ಕೂ ಅಧಿಕ ನಗರಗಳ 200ಕ್ಕೂ ಅಧಿಕ ರೆಸ್ಟೋರೆಂಟ್ ಗಳ ಜತೆ ಒಪ್ಪಂದ ಮಾಡಿಕೊಂಡಿವೆ. ಆರಂಭಿಕ ಬೆಲೆ 130 ರು ನಿಂದ ನಿಮ್ಮ ನೆಚ್ಚಿನ ಊಟ ತಿಂಡಿ ನಿಮ್ಮ ಕೈಸೇರಲಿದೆ.

ನಿಮ್ಮ ರೈಲು ಟಿಕೆಟ್ ಮೇಲಿರುವ PNR ಸಂಖ್ಯೆ ಜತೆ ಎಲ್ಲಿಂದ ಎಲ್ಲಿಗೆ ಪ್ರಯಾಣ ಯಾವತ್ತು ಪ್ರಯಾಣ ಎಂಬುದರ ಮಾಹಿತಿ ವೆಬ್ ತಾಣಗಳಲ್ಲಿ ನಮೂದಿಸಬೇಕಾಗುತ್ತದೆ.

ನಿಮ್ಮ ನೆಚ್ಚಿನ ಆಹಾರಗಳನ್ನು ಆಯ್ಕೆ ಮಾಡಿಕೊಂಡು ಬುಕ್ ಮಾಡಿದರೆ ಸಾಕು. ಡೆಲಿವರಿ ನಿಮ್ಮ ರೈಲು ಡಬ್ಬಿಗೆ ಲಂಚ್ ಬಾಕ್ಸ್ ತಂದಿಡುತ್ತಾನೆ. ಎರಡು ಕಂಪನಿಗಳು ಕೋಟಿಗಟ್ಟಲೇ ಬಂಡವಾಳ ಹೂಡಿಕೆ ಮಾಡಿದ್ದಾರೆ ಆದರೆ, ರೈಲ್ವೇ ಬೋರ್ಡ್ ನಿಂದ ಅಧಿಕೃತ ಕೆಟರಿಂಗ್ ಮಾನ್ಯತೆ ಇನ್ನೂ ಸಿಗಬೇಕಿದೆ

ನಾವು ಸುಮಾರು ದಿನನಿತ್ಯ 500 ಊಟಗಳನ್ನು ಪ್ಯಾಕ್ ಮಾಡಿ 158 ನಗರಗಳಿಗೆ ತಲುಪಿಸುತ್ತೇವೆ. ಜನರಿಂದ ಉತ್ತಮಪ್ರತಿಕ್ರಿಯೆ ಬಂದಿದೆ ಎಂದು ಮೇರಾ ಫುಡ್ ಚಾಯ್ಸ್.ಕಾಂ ಆರಂಭಿಸಿದ ಟೆಕ್ಕಿ ಪಿಯೂಷ್ ಕಾಸ್ಲಿವಾಲ್ ಹೇಳಿದ್ದಾರೆ.

ರೈಲ್ವೆ ಬೋರ್ಡ್ ಕೆಟರರ್ ಗಳಿಗೆ ನೀಡಿರುವ ನಿರ್ದೇಶನದ ಪ್ರಕಾರ ಶಾಖಾಹಾರಿ ಆಹಾರ 50 ರು ಹಾಗೂ ಮಾಂಸಾಹಾರಿ ಆಹಾರ 55 ರು ಗಳಿಗೆ ನೀಡಬೇಕಾಗುತ್ತದೆ. ಈ ಹಿಂದೆ comesum ಎಂಬ ಸಂಸ್ಥೆ 20 ಕ್ಕೂ ಅಧಿಕ ಔಟ್ ಲೆಟ್ ಗಳನ್ನು ರೈಲ್ವೆ ನಿಲ್ದಾಣಗಳಲ್ಲಿ ತೆರೆದು ಪ್ರಯಾಣಿಕರ ಹಸಿವನ್ನು ನೀಗಿಸಲು ಯತ್ನಿಸಿತ್ತು, ಆದರೆ, ಈಗ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಜನಪ್ರಿಯಗೊಳ್ಳುತ್ತಿದೆ ಎಂದು ಬಿಸಿನೆಸ್ ಸ್ಟ್ಯಾಡರ್ಡ್ ತಾಣ ವರದಿ ಮಾಡಿದೆ.

English summary
Now, book online for your railway food : Travelkhana.com and Merafoodchoice.com have a tie-up with over 200 restaurants spread across 100 cities, where they can serve meals for individuals or groups.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X