ಪಿಎಫ್ ಚಂದಾದಾರರ ಗಮನಕ್ಕೆ ಆನ್ಲೈನ್ ನಲ್ಲೇ UAN ಪಡೆಯಿರಿ

ನವದೆಹಲಿ, ನವೆಂಬರ್ 02: ಭವಿಷ್ಯ ನಿಧಿ ಚಂದಾದಾರರು ಇನ್ನು ಮುಂದೆ ಯೂನಿವರ್ಸಲ್ ಅಕೌಂಟ್ ನಂಬರ್(ಯುಎಎನ್) ಪಡೆಯಲು ಉದ್ಯೋಗದಾತರನ್ನು ಅವಲಂಬಿಸಬೇಕಾಗಿಲ್ಲ. ಆನ್ ಲೈನ್ ನಲ್ಲಿ ನೇರವಾಗಿ ತಾವೇ ಪಡೆದುಕೊಳ್ಳಬಹುದಾಗಿದೆ.

ಉದ್ಯೋಗ ಬದಲಾಯಿಸುವ ಸಂದರ್ಭದಲ್ಲಿ ಪಿ.ಎಫ್ ಖಾತೆ ವರ್ಗಾಯಿಸಲು ಯುಎಎನ್ ಪಡೆಯಬೇಕಿತ್ತು. ಭವಿಷ್ಯನಿಧಿ(EPFO) ವೆಬ್ ತಾಣದಲ್ಲಿ ನೇರವಾಗಿ ನೋಂದಣಿ ಮಾಡಿಕೊಂಡು ಯು.ಎ.ಎನ್ ಪಡೆದುಕೊಳ್ಳಬಹುದು. ಇದಕ್ಕೂ ಮುನ್ನ ಉದ್ಯೋಗದಾತರ ಮೂಲಕ ಯುಎಎನ್ ಪಡೆಯಲು ಅರ್ಜಿ ಸಲ್ಲಿಸಬೇಕಾಗಿತ್ತು.

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ನಿಯಮಗಳನ್ನು 2018ರ ಡಿಸೆಂಬರ್ ವೇಳೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಇದಾದ ಬಳಿಕ ಈಗ ಮಹತ್ವದ ಬದಲಾವಣೆ ತರಲಾಗಿದೆ. ಇಪಿಎಫ್ಒ ಎಲ್ಲ ನೌಕರರ ಪಿಎಫ್ ನಿಧಿಯನ್ನು ನೋಡಿಕೊಳ್ಳುತ್ತದೆ.

ಇದ್ರಲ್ಲಿ 65 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಉದ್ಯೋಗಿಗಳು ತಮ್ಮ ಖಾತೆಯಲ್ಲಿನ ಬಾಕಿ ಶೇ. 25 ಹಣವನ್ನು ಎರಡು ತಿಂಗಳ ನಿರುದ್ಯೋಗದ ನಂತರ ಪಡೆಯಬಹುದಾಗಿದೆ ಅಥವಾ ಸಂಪೂರ್ಣ ಹಣವನ್ನು ಪಡೆದು ಖಾತೆ ಮುಚ್ಚಲು ಕೂಡ ಅವಕಾಶ ನೀಡಲು ಇಪಿಎಫ್​ಒ ಮುಂದಾಗಿದೆ. ಇದಲ್ಲದೆ, ಪಿಂಚಣಿ ಪಾವತಿ ಆದೇಶ ಸೇರಿದಂತೆ ಇತರ ಪಿಂಚಣಿಗೆ ಸಂಬಂಧಿತ ದಾಖಲೆಗಳನ್ನು ಡೌನ್‌ಲೋಡ್ ಮಾಡುವ ಸೌಲಭ್ಯವನ್ನೂ ನೀಡಿದೆ.

ಇಪಿಎಫ್ ಕಾಯ್ದೆ 1952ಗೆ ಬದಲಾವಣೆ

ಇಪಿಎಫ್ ಕಾಯ್ದೆ 1952ಗೆ ಬದಲಾವಣೆ

ಇಪಿಎಫ್ ಕಾಯ್ದೆ 1952ಗೆ ಬದಲಾವಣೆ ತರಲಾಗಿದ್ದು, ಪ್ರೊವಿಡೆಂಟ್ ಫಂಡ್ ಹೊಸ ನಿಯಮದಡಿ 60 ವರ್ಷಕ್ಕಿಂತ ಮೊದಲು ಶೇಕಡಾ 100ರಷ್ಟು ಪಿಎಫ್ ಹಣವನ್ನು ಡ್ರಾ ಮಾಡುವಂತಿಲ್ಲ. ನಿವೃತ್ತಿಗೂ ಮುನ್ನ ನೀವು ನಿಮ್ಮ ಪಿಎಫ್ ನ ಎಲ್ಲ ಹಣವನ್ನು ಡ್ರಾ ಮಾಡಲು ಸಾಧ್ಯವಿಲ್ಲ. ಯಾವುದೇ ವ್ಯಕ್ತಿ 60 ವರ್ಷಕ್ಕಿಂತ ಮೊದಲೇ ಕೆಲಸ ಬಿಟ್ಟರೂ ಆತ/ಆಕೆ ಶೇಕಡಾ 75ರಷ್ಟು ಪಿಎಫ್ ಹಣವನ್ನು ಮಾತ್ರ ಹಿಂಪಡೆಯಬಹುದಾಗಿದೆ.

ಪಿಎಫ್ ಲೆಕ್ಕಾಚಾರ

ಪಿಎಫ್ ಲೆಕ್ಕಾಚಾರ

ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ. ನೌಕರನ ಸಂಬಳ 15 ಸಾವಿರಕ್ಕಿಂತ ಕಡಿಮೆಯಿದ್ರೆ ಆತನ ಸಂಬಳದಲ್ಲಿ ಪ್ರತಿ ತಿಂಗಳು ಶೇಕಡಾ 12ರಷ್ಟು ಭಾಗ ಪಿಎಫ್ ಖಾತೆ ಸೇರುತ್ತದೆ. ಕಂಪನಿ ಶೇಕಡಾ 8.33ರಷ್ಟು ಪಿಂಚಣಿ ಯೋಜನೆಗೆ ಹಾಗೂ ಶೇಕಡಾ 3.67ರಷ್ಟು ಇಪಿಎಫ್ ಗೆ ಹಣ ನೀಡುತ್ತದೆ.

ಇಪಿಎಫ್ ಒ ನಿಯಮಗಳು ಬದಲಾವಣೆ

ಇಪಿಎಫ್ ಒ ನಿಯಮಗಳು ಬದಲಾವಣೆ

ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್ಒ) ತನ್ನ ನಿಯಮಗಳನ್ನು ಬದಲಾಯಿಸಿದ್ದು, ಇದರಿಂದ ಉದ್ಯೋಗ ಕಳೆದುಕೊಂಡವರಿಗೆ ಕೊಂಚ ನೆಮ್ಮದಿ ತಂದಿದೆ. ಒಂದು ತಿಂಗಳ ನಿರುದ್ಯೋಗದ ಬಳಿಕ ಬೇರೆ ಕಡೆ ಕೆಲಸ ಸಿಕ್ಕಲ್ಲಿ ಸದಸ್ಯರು ತಮ್ಮ ಹಳೆಯ ಪಿಎಫ್ ಖಾತೆಯನ್ನು ಹೊಸ ಕಂಪನಿಗೆ ನೀಡಬಹುದಾಗಿದೆ. ಮಾಸಿಕ ಪಿಎಫ್ ಅದರಲ್ಲಿಯೇ ಜಮೆಯಾಗಲಿದೆ. ಸದ್ಯದ ನಿಯಮದಂತೆ ಎರಡು ತಿಂಗಳ ನಿರುದ್ಯೋಗದ ಬಳಿಕ ಮಾತ್ರ ಸದಸ್ಯರಿಗೆ ತಮ್ಮ ಪಿಎಫ್ ಖಾತೆಯಲ್ಲಿನ ಹಣ ಪಡೆಯಲು ಅವಕಾಶವಿದೆ

ಪಿಂಚಣಿ ಕ್ಲೇಮ್ ಈಗ ಸುಲಭ

ಪಿಂಚಣಿ ಕ್ಲೇಮ್ ಈಗ ಸುಲಭ

ಉದ್ಯೋಗ ಬದಲಾಯಿಸುವವರೂ ಕೂಡಾ ಪಿಎಫ್ ನಂಬರ್ ಬದಲಾವಣೆಯಾದರೆ ಯುಎಎನ್ ನಂಬರ್ ಮೂಲಕ ಇಪಿಎಫ್ ವರ್ಗಾವಣೆ ಆನ್ ಲೈನ್ ನಲ್ಲೇ ಮಾಡಿಕೊಳ್ಳಬಹುದು. ಉದ್ಯೋಗದಾತರ(ಎಂಪ್ಲಾಯರ್) ದೃಢೀಕರಣ ಪಡೆಯದೇ ವಂತಿಗೆದಾರರು( ಎಂಪ್ಲಾಯ್) ತಮ್ಮ ಪಿಂಚಣಿ ಮೊತ್ತವನ್ನು ನಿಗದಿಪಡಿಸಬಹುದಾಗಿದೆ. 1995ರ ಪಿಂಚಣಿ ಯೋಜನೆ ಪ್ರಕಾರ, ವಂತಿಗೆದಾರರು ಪಿಂಚಣಿ ಕ್ಲೇಮ್ ಅರ್ಜಿಯನ್ನು ಉದ್ಯೋಗದಾತರ ದೃಢೀಕರಣ ಪಡೆದು ಸಲ್ಲಿಸಬೇಕಿತ್ತು. ಆದರೆ ಈಗ ಇದು ಮತ್ತಷ್ಟು ಸುಲಭವಾಗಲಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+