ಆನ್ಲೈನ್ ನಲ್ಲಿ ಆಧಾರ್ ಮೂಲಕ ಇ-ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?
ನವದೆಹಲಿ, ಫೆಬ್ರವರಿ 06: ವಿವಿಧ ಬ್ಯಾಂಕ್ ಆಧಾರಿತ ವ್ಯವಹಾರಗಳಿಗೆ ಬಳಕೆ ಮಾಡುವ ಶಾಶ್ವತ ಖಾತೆ (PAN) ಕಾರ್ಡನ್ನು ಆನ್ಲೈನ್ ಮೂಲಕ ವಿತರಿಸುವ ಯೋಜನೆಯನ್ನು ಆರಂಭಿಸಿದೆ.
ಆಧಾರ್ ಕಾರ್ಡ್ ದಾಖಲೆ ಮೇಲೆ ತಕ್ಷಣ ಇ-ಪ್ಯಾನ್ ಕಾರ್ಡನ್ನು ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು ಎಂದು ಕಂದಾಯ ಸಚಿವಾಲಯದ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
ಇ-ಪ್ಯಾನ್ ಕಾರ್ಡ್ ಪಡೆಯುವ ಯೋಜನೆಯನ್ನು 2020-21ರ ಬಜೆಟ್ನಲ್ಲಿ ಘೋಷಿಸಲಾಗಿದೆ. ಇ ಪ್ಯಾನ್ ಪಡೆಯಲು ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಅಗತ್ಯ ಇಲ್ಲ. ಆಧಾರ್ ಕಾರ್ಡ್ ಮಾಹಿತಿಯನ್ನು ಒದಗಿಸಿ ಇ-ಪ್ಯಾನ್ ಕಾರ್ಡ್ ಪಡೆಯುವ ಯೋಜನೆ ಫೆಬ್ರವರಿ ತಿಂಗಳಿನಿಂದ ಆರಂಭವಾಗಿದೆ.

ಇ ಪ್ಯಾನ್ ಗಳಿಸುವುದು ಹೇಗೆ?
* ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿಆಧಾರ್ ಸಂಖ್ಯೆ ನಮೂದಿಸಿ.
* ಆಧಾರ್ಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಒಮ್ಮೆ ಬಳಸುವ ಪಾಸ್ವರ್ಡ್ (ಒಟಿಪಿ) ಬರುತ್ತದೆ.
* ಆಧಾರ್ ದಾಖಲೆ ಪರಿಶೀಲನೆ ಮಾಡಲು ಒಟಿಪಿ ಬಳಸಲಾಗುತ್ತದೆ. ಆಧಾರ್ ಪರಿಶೀಲನೆ ನಂತರ ಇ-ಪ್ಯಾನ್ ತಕ್ಷಣವೇ ಸಿಗಲಿದೆ.
* ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆದಾಯ ತೆರಿಗೆ ಇಲಾಖೆಯು ಕಾರ್ಡ್ ಗಳನ್ನು ಮನೆ ವಿಳಾಸಕ್ಕೆ ಕಳಿಸುವ ಅಗತ್ಯವಿಲ್ಲ.
ಸುಮಾರು 30.75 ಕೋಟಿ ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡಲಾಗಿದೆ. ಜನವರಿ 27, 2020ರ ಎಣಿಕೆಯಂತೆ 17.58 ಕೋಟಿ ಪ್ಯಾನ್ ಇನ್ನೂ ಆಧಾರ್ ಜೊತೆ ಲಿಂಕ್ ಆಗಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ. ಆಧಾರ್ ಹಾಗೂ ಪ್ಯಾನ್ ಲಿಂಕ್ ಮಾಡಲು ಅಮರ್ಚ್ 31, 2020 ಕೊನೆ ದಿನಾಂಕವಾಗಿದೆ.












Click it and Unblock the Notifications