Get Updates
Get notified of breaking news, exclusive insights, and must-see stories!

November Gold Price 13: ಚಿನ್ನದ ಬೆಲೆ ಮತ್ತೆ ಏರಿಕೆ, ಬೆಳ್ಳಿಯೂ ಗಗನ ಮುಖಿ, ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ

November Gold Price 13: ಕಳೆದ ಒಂದು ವಾರದಿಂದಲೂ ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಬುಧವಾರವಷ್ಟೇ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿತ್ತು. ಆದರೆ ಗುರುವಾರ ನವೆಂಬರ್‌ 13ರಂದು ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದ್ದು, ಚಿನ್ನ ಪ್ರಿಯರಿಗೆ ಶಾಕ್ ಎದುರಾಗಿದೆ. ಚಿನ್ನದ ಬೆಲೆಯು ನವೆಂಬರ್ 13ರಂದು ಮತ್ತೆ ಹೆಚ್ಚಳವಾಗಿದ್ದು, ಬೆಳ್ಳಿ ಬೆಲೆಯೂ ಸಹ ಏರಿಕೆಯ ಹಾದಿಯಲ್ಲಿದೆ.

ವಿವಿಧ ಕಾರಣಗಳಿಗೆ ಚಿನ್ನದ ಬೆಲೆಯಲ್ಲಿ ಏರಿಳಿತವಾಗುವುದು ಮುಂದುವರಿದಿದೆ. ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟದ ಘಟನೆಯಿಂದಾಗಿ ದೆಹಲಿಯ ಚಾಂದಿನಿ ಚೌಕ್ ಭಾಗದಲ್ಲಿ ಭಾರೀ ನಷ್ಟವಾಗಿದೆ. ಈ ಭಾಗದಲ್ಲಿ ಅಂದಾಜು ಪ್ರತಿ ದಿನ ಸುಮಾರು 500 ಕೋಟಿ ರೂಪಾಯಿಯ ವರೆಗೆ ವ್ಯವಹಾರವಾಗುತ್ತದೆ. ಆದರೆ ಬಾಂಬ್ ಸ್ಫೋಟದ ಬೆನ್ನಲ್ಲೇ ದೆಹಲಿಯ ಚಾಂದಿನಿ ಚೌಕ್‌ ಪ್ರದೇಶದಲ್ಲಿ ಅಂದಾಜು 350ರಿಂದ 400 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಹೇಳಲಾಗಿದೆ. ದೆಹಲಿ ಬಾಂಬ್ ಸ್ಫೋಟವು ಕೇವಲ ದೆಹಲಿಯ ಮೇಲೆ ಮಾತ್ರವಲ್ಲ ಷೇರುಮಾರುಕಟ್ಟೆ, ಚಿನ್ನದ ಬೆಲೆ ಹಾಗೂ ದೇಶದ ವಿವಿಧ ಪ್ರದೇಶಗಳಲ್ಲಿ ವ್ಯಾಪಾರ ಹಾಗೂ ವ್ಯವಹಾರದ ಮೇಲೂ ಅಲ್ಪ ಪ್ರಮಾಣದಲ್ಲಿ ಪರಿಣಾಮ ಬೀರಿದೆ.

November 13 Gold Price Gold Rises Again Silver Skyrockets Check Today s Rates

ಚಿನ್ನ ಮತ್ತು ಬೆಳ್ಳಿ ಬೆಲೆಯು ಇತ್ತೀಚಿನ ದಿನಗಳಲ್ಲಿ ಏರಿಕೆಯ ಹಾದಿಯಲ್ಲಿದೆ. ಆದರೆ ಬುಧವಾರ ಅಚ್ಚರಿಯ ರೀತಿಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿತ್ತು. ಇದೀಗ ಗುರುವಾರ ನವೆಂಬರ್ 13ರಂದು ಏರಿಕೆ ಆಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯ ನಿಖರ ವಿವರ ಇಲ್ಲಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 9,585 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 95,850 ರೂಪಾಯಿ ಆಗಿದೆ. ಬುಧವಾರಕ್ಕೆ ಹೋಲಿಕೆ ಮಾಡಿದರೆ 1 ಗ್ರಾಂ ಚಿನ್ನದ ಬೆಲೆಯು 172 ರೂಪಾಯಿ ಹಾಗೂ 10 ಚಿನ್ನದ ಬೆಲೆಯು 1,720 ರೂಪಾಯಿ ಹೆಚ್ಚಳವಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲೂ ಹೆಚ್ಚಳವಾಗಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 11,715 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,17,150 ರೂಪಾಯಿ ಆಗಿದೆ. ನವೆಂಬರ್ 12ಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಚಿನ್ನದ ಬೆಲೆಯು 210 ರೂಪಾಯಿ ಹಾಗೂ ಹತ್ತು ಗ್ರಾಂ ಚಿನ್ನದ ಬೆಲೆಯು 2,100 ರೂಪಾಯಿ ಆಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 12,780 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,27,800 ರೂಪಾಯಿ ಆಗಿದೆ. ನವೆಂಬರ್‌ 12ಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಚಿನ್ನದ ಬೆಲೆಯು 229 ರೂಪಾಯಿ ಹಾಗೂ ಹತ್ತು ಗ್ರಾಂನ ಮೇಲೆ 2,290 ರೂಪಾಯಿ ಹೆಚ್ಚಳವಾಗಿದೆ.

ಬೆಳ್ಳಿ ಬೆಲೆ: ಚಿನ್ನದೊಂದಿಗೆ ಬೆಳ್ಳಿಯ ಬೆಲೆ ಸಹ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂ 172 ರೂಪಾಯಿ ಆಗಿದೆ. ಅಲ್ಲದೇ 1 ಕೆ.ಜಿ ಬೆಳ್ಳಿ ಬೆಲೆಯು 1,72,000 ಸಾವಿರ ರೂಪಾಯಿ ಆಗಿದೆ. ಒಂದು ಗ್ರಾಂ ಬೆಳ್ಳಿ ಬೆಲೆಯು 10 ರೂಪಾಯಿ ಹಾಗೂ ಒಂದು ಕೆ.ಜಿಗೆ 10,000 ಸಾವಿರ ರೂಪಾಯಿ ಹೆಚ್ಚಳವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+