ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆ, ಜೆಟ್ ಇಂಧನ ಏರಿಕೆ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 01: ಸಬ್ಸಿಡಿ ರಹಿತ ಅಡುಗೆ ಅನಿಲ (ಎಲ್ಪಿಜಿ) ದರ ಇಳಿಕೆ ಮಾಡಲಾಗಿದೆ. ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ದರ ಶುಕ್ರವಾರದಿಂದ ಏರಿಕೆಯಾಗಲಿದೆ.

ಎಲ್ ಪಿಜಿ(ಸಬ್ಸಿಡಿ ರಹಿತ) ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 4 ರು ಕಡಿಮೆಯಾಗಿದೆ. ಜೆಟ್ ಇಂಧನ ಬೆಲೆಯನ್ನು ಶೇ 8.8ರಷ್ಟು ಏರಿಕೆ ಮಾಡಲಾಗಿದೆ. ದೆಹಲಿಯಲಿ ಎಟಿಎಫ್ ದರ ಶೇ 8.69ರಷ್ಟು ಅಥವಾ 3,371.55 ರು ಪ್ರತಿ ಕಿಲೋ ಲೀಟರ್ ಇತ್ತು. ಈಗ 42,157.01 ರು ಗಳಿಗೆ ಏರಿಕೆಯಾಗಲಿದೆ.[10 ಲಕ್ಷ ರು ವಾರ್ಷಿಕ ಆದಾಯವಿದ್ದರೆ, ಎಲ್ ಪಿಜಿ ಸಬ್ಸಿಡಿ ಖೋತಾ]

ಹೀಗಾಗಿ ವಿಮಾನ ದರ ಹಾಗೂ ವಿಮಾನ ನಿಲ್ದಾಣದಲ್ಲಿ ದರ ಏರಿಕೆ ನಿರೀಕ್ಷಿಸಬಹುದು. ಸ್ಥಳೀಯ ಸೇಲ್ಸ್ ಟ್ಯಾಕ್ಸ್, ವ್ಯಾಲ್ಯೂ ಆಡೆಡ್ ಟ್ಯಾಕ್ಸ್ ಸೇರಿಸಿ ಇನ್ನಷ್ಟು ಬೆಲೆ ಏರಿಕೆಯಾಗಲಿದೆ.

Non-subsidised LPG price cut by Rs 4 per cylinder, jet fuel price hiked 8.7%

ಆದರೆ, ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು(ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ) ಸಬ್ಸಿಡಿ ರಹಿತ ಎಲ್ ಪಿಜಿ ದರವನ್ನು ಇಳಿಕೆ ಮಾಡಿ ಗ್ರಾಹಕರಿಗೆ ಕೊಂಚ ನೆಮ್ಮದಿ ಸುದ್ದಿ ನೀಡಿವೆ. 12 ಸಿಲಿಂಡರ್ ಕೋಟಾ ಮುಗಿದ ಮೇಲೆ 14.2 ಕೆಜಿ ಸಾಮರ್ಥ್ಯದ ಸಿಲಿಂಡರ್ ಮೇಲೆ 4 ರು ಪ್ರತಿ ಸಿಲಿಂಡರ್ ಗೆ ಕಡಿಮೆಯಾಗಲಿದೆ.[ಎಲ್‌ಪಿಜಿ ಬಳಕೆದಾರರು ಆದಾಯ ಲೆಕ್ಕ ನೀಡುವುದು ಕಡ್ಡಾಯ]

ದೆಹಲಿಯಲ್ಲಿ 513.50ರು ಇದ್ದ ಸಿಲಿಂಡರ್ ಈಗ 509.50ರು ಬೆಲೆಗೆ ಇಳಿಕೆಯಾಗಲಿದೆ. ಮಾರ್ಚ್ 1ರಂದು ಬೆಲೆ 61.50ರುಗೆ ಇಳಿಕೆಯಾಗಿತ್ತು. ಇದಕ್ಕೂ ಮುನ್ನ ಫೆಬ್ರವರಿ 01ಕ್ಕೆ 82.5 ರು ಇಳಿಕೆಯಾಗಿತ್ತು. ಸಬ್ಸಿಡಿ ಇರುವ ಸಿಲಿಂಡರ್(14.2 ಕೆಜಿ) ಬೆಲೆ 419.33 ರು ನಷ್ಟಿದೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Aviation Turbine Fuel (ATF), or jet fuel, price was on Friday hiked by 8.7 percent but that of non-subsidised cooking gas LPG was cut by Rs 4 per cylinder on global trends.
Please Wait while comments are loading...