ಪೆಟ್ರೋಲ್, ಡೀಸೆಲ್ ನಂತರ ಎಲ್ ಪಿಜಿ, ಸೀಮೆಎಣ್ಣೆ ದರ ಏರಿಕೆ!

Posted By:
Subscribe to Oneindia Kannada

ನವದೆಹಲಿ, ಮೇ 01: ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೇ ಸಬ್ಸಿಡಿ ರಹಿತ ಅಡುಗೆ ಅನಿಲ, ಪಡಿತರ ಪಟ್ಟಿಗೆ ಒಳಪಡದ ಸೀಮೆಎಣ್ಣೆ, ಜೆಟ್ ಇಂಧನ ದರ ಏರಿಕೆಯಾಗಿದೆ.

ಪೆಟ್ರೋಲ್ ದರ ಪ್ರತಿ ಲೀಟರ್ ಗೆ 1.06 ರು (ದೆಹಲಿಯಲ್ಲಿ 62.19 ರು) ಹಾಗೂ ಡೀಸೆಲ್ ದರ 2.94ರು (50.95 ಪ್ರತಿ ಲೀಟರ್ ದೆಹಲಿಯಲ್ಲಿ) ಗೆ ಏರಿಕೆಯಾಗಿತ್ತು. ನಾನ್ ಪಿಡಿಎಸ್ ಸೀಮೆಎಣ್ಣೆ ಲೀಟರ್ ಗೆ 3 ರು ಏರಿಕೆಯಾಗಿದೆ.

ರೇಷನ್ ಕಾರ್ಡ್ ಇಲ್ಲದೆ, ಪಡಿತರ ವಿತರಣಾ ವ್ಯವಸ್ಥೆ ರಹಿತ ಸೀಮೆಎಣ್ಣೆ ಪಡೆಯುವವರು ದೆಹಲಿಯಲ್ಲಿ ಪ್ರತಿ ಕಿಲೋಗೆ 49.10 ರು ನಂತ್ರೆ ಇದೆ. [10 ಲಕ್ಷ ರು ವಾರ್ಷಿಕ ಆದಾಯವಿದ್ದರೆ, ಎಲ್ ಪಿಜಿ ಸಬ್ಸಿಡಿ ಖೋತಾ]

Non-subsidised LPG, kerosene, ATF prices hiked

ವಾರ್ಷಿಕ 12 ಸಿಲಿಂಡರ್ ಕೋಟಾ ನಂತರ ಪಡೆಯುವ 14.2 ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆ 18 ರು ಪ್ರತಿ ಸಿಲಿಂಡರ್ ಗೆ ಏರಿಕೆಯಾಗಿದೆ. ದೆಹಲಿಯಲ್ಲಿ ಸಬ್ಸಿಡಿರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ 509.50 ರುನಿಂದ 527.50 ರು ಗೇರಿದೆ. ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 419.15 ಪ್ರತಿ ಸಿಲಿಂಡರ್ ಗೆ ತೆರಬೇಕಾಗುತ್ತದೆ. ಜೆಟ್ ಇಂಧನ ದರ ಶೇ 1.5ರಷ್ಟು ಏರಿಕೆಯಾಗಿದೆ.

ಸಬ್ಸಿಡಿ ರಹಿತ ಅಡುಗೆ ಅನಿಲ (ಎಲ್ಪಿಜಿ) ದರ ಏಪ್ರಿಲ್ 1ರಂದು ಇಳಿಕೆ ಮಾಡಲಾಗಿತ್ತು. ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After petrol and diesel, rates of non-subsidised cooking gas, non-PDS kerosene and aviation turbine fuel (ATF) were today raised in line with global trends. Petrol price was late last night hiked by Rs 1.06 a litre to Rs 62.19 per litre in Delhi and diesel by Rs 2.94 to Rs 50.95 a litre.
Please Wait while comments are loading...