• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ಕಾಲಿಟ್ಟ ನೋಕಿಯಾ, ಏನಿದೆ ವಿಶೇಷ?

|

ಬೆಂಗಳೂರು, ಡಿಸೆಂಬರ್ 05: ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ಕಾಲಿಟ್ಟ ನೋಕಿಯಾ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ. ಆನ್ ಲೈನ್ ಶಾಪಿಂಗ್ ಸಂಸ್ಥೆ ಫ್ಲಿಪ್ ಕಾರ್ಟ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಫ್ಲಿಪ್ ಕಾರ್ಟ್ ಮೂಲಕ ನೋಕಿಯಾ ಸ್ಮಾರ್ಟ್ ಟಿವಿ ಖರೀದಿಗೆ ಲಭ್ಯವಾಗಲಿದೆ. 55 ಇಂಚಿನ 4ಕೆ ಡಿಸ್ಪ್ಲೇ ಪ್ಯಾನೆಲ್ ಹೊಂದಿರುವ ಎಲ್ ಇಡಿ ಸ್ಮಾರ್ಟ್ ಟಿವಿ ಡಿಸೆಂಬರ್ 10 ರಂದು 12 ಗಂಟೆಯಿಂದ ಮಾರಾಟವಾಗಲಿದೆ.

55 ಇಂಚಿನ ನೋಕಿಯಾ 4ಕೆ ಸ್ಮಾರ್ಟ್ ಟಿವಿ ಬೆಲೆ 41,999 ರು ಇದೆ. ಆಫರ್ ಬೆಲೆಯಾಗಿ ಶೇ10ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇಎಂಐ ಸೌಲಭ್ಯವೂ ಲಭ್ಯವಿದ್ದು, ಇದಕ್ಕೆ ಯಾವುದೇ ವೆಚ್ಚ ನೀಡಬೇಕಾಗಿಲ್ಲ. ಆಂಡ್ರಾಯ್ಡ್ 9 ಪೈ ಆಧಾರಿತ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಇದಲ್ಲದೆ, ಗೂಗಲ್ ಪ್ಲೇ ಸ್ಟೋರ್ ಬಳಸಿ ನಿಮಗೆ ಬೇಕಾದ ಆಪ್ ಡೌನ್ ಲೋಡ್ ಮಾಡಿಕೊಳ್ಳಬಹುದು.

ಬೆಂಗಳೂರಲ್ಲಿ 5ಜಿ ಲ್ಯಾಬ್ ಸ್ಥಾಪನೆ: ನೋಕಿಯಾ

ತಾಂತ್ರಿಕವಾಗಿ ನೋಕಿಯಾ ಟಿವಿ ಪ್ಯೂರ್ ಎಕ್ಸ್ ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿದ್ದು, 2.25 ಜಿಬಿ RAM ಇರಲಿದೆ. ಡಾಲ್ಬಿ ವಿಷನ್, ಎಚ್ ಡಿಆರ್ 10, ಇರಲಿದ್ದು ಗೂಗಲ್ ವಾಯ್ಸ್ ಅಸಿಸ್ಟಂಟ್, ನೆಟ್ ಫ್ಲಿಕ್ಸ್, ಯೂಟ್ಯೂಬ್ ಗೆ ಹಾಟ್ ಕೀಗಳನ್ನು ಹೊಂದಿದೆ.

ಈಗಾಗಲೇ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿರುವ ಶಿಓಮಿ, ಮೋಟೊರೋಲಾ, ವಿಯು, ಐಫಾಲ್ಕನ್, ಥಾಮ್ಸನ್ ಮುಂತಾದ ಬ್ರ್ಯಾಂಡ್ ಜೊತೆಗೆ ನೋಕಿಯಾ ಸ್ಪರ್ಧಿಸಬೇಕಾಗಿದೆ.

English summary
Nokia Smart TV has been launched in India. Nokia has partnered with Flipkart to enter the Smart TV market in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X