ಟ್ರಸ್ಟ್ ಗಳಿಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ರತನ್ ಟಾಟಾ

Posted By:
Subscribe to Oneindia Kannada

ಮುಂಬೈ,ಡಿಸೆಂಬರ್ 17: ಟಾಟಾ ಸಮೂಹ ಸಂಸ್ಥೆಯ ಅಡಿಯಲ್ಲಿ ಬರುವ ಟಾಟಾ ಟ್ರಸ್ಟ್ ಗಳ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ ಎಂದು ಟಾಟಾ ಸಮೂಹ ಸಂಸ್ಥೆಗಳ ಮಧ್ಯಂತರ ಅಧ್ಯಕ್ಷ ರತನ್ ಟಾಟಾ ಸ್ಪಷ್ಟಪಡಿಸಿದ್ದಾರೆ.

'ಟ್ರಸ್ಟ್ ಗಳ ಅಧ್ಯಕ್ಷ ಸ್ಥಾನಕ್ಕೆ ರತನ್ ಟಾಟಾ ರಾಜೀನಾಮೆ ನೀಡುತ್ತಾರೆ' ಎಂಬ ಮಾಧ್ಯಮಗಳ ವರದಿಯನ್ನು ತಳ್ಳಿ ಹಾಕಿರುವ ಅವರು, ರಾಜೀನಾಮೆ ನೀಡುವ ಯಾವ ಆಲೋಚನೆಯೂ ಈ ಸಂದರ್ಭದಲ್ಲಿ ತಮಗಿಲ್ಲ ಎಂದು ತಿಳಿಸಿದ್ದಾರೆ.[ಟಾಟಾ ಸಂಸ್ಥೆ - ನೀರಾ ರಾಡಿಯಾ ಸಂಬಂಧ ಕೆದಕಿದ ಮಿಸ್ತ್ರಿ]

No plans to step down as chairman: Ratan Tata

ಇದಲ್ಲದೇ, ಕೆಲವು ಟ್ರಸ್ಟಿಗಳು ಟಾಟಾ ಅವರ ನಂತರ ಯಾರು ನಾಯಕತ್ವ ವಹಿಸಿಕೊಳ್ಳಬೇಕೆಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದೂ ಮಾಧ್ಯಮಗಳಲ್ಲಿ ವರದಿಯಾಗಿತ್ತು.[ಟಾಟಾ ಬಂದ್ರು, ಮಿಸ್ತ್ರಿ ಹೋದ್ರು ಏನಿದರ ಗುಟ್ಟು?]

ಇಂತಹ ವರದಿಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ರತನ್ ಟಾಟಾ ಅವರು, ತಾವು ಅಧ್ಯಕ್ಷರಾಗಿರುವ ಈ ಟ್ರಸ್ಟ್ ಗಳು ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿವೆ. ಇವೆಲ್ಲಾ ರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರುವಂತಹ ಸಂಸ್ಥೆಗಳಾಗಿವೆ. ಟಾಟಾ ಸಂಸ್ಥೆ ನೀಡಿರುವ ಪತ್ರಿಕಾ ಪ್ರಕಟಣೆ ಇಲ್ಲಿದೆ:


ಈ ಹಿನ್ನೆಲೆಯಲ್ಲಿ ಈ ಟ್ರಸ್ಟ್ ಗಳ ಜತೆ ನಾನು ಸಕ್ರಿಯನಾಗಿರುತ್ತೇನೆ. ಆದಾಗ್ಯೂ, ತಮ್ಮ ಉತ್ತರಾಧಿಕಾರಿಯನ್ನು ಸೂಕ್ತ ಸಮಯದಲ್ಲಿ ಸುಗಮವಾಗಿ ಆಯ್ಕೆ ಮಾಡಲಾಗುವುದು ಎಂದೂ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Ratan Tata, chairman of Tata Trusts and interim chairman of Tata Sons clarified that there are no plans for his stepping down from the chairmanship of the Tata Trusts at this point in time.
Please Wait while comments are loading...