ಖಾಲಿ ಕೈಯ ಕುಬೇರ ಮಲ್ಯ, ಈಗಲೂ ಯುಬಿ ಅಧಿಪತಿ
ಬೆಂಗಳೂರು, ಜುಲೈ 09: ಯುನೈಟೆಡ್ ಬ್ರೆವರೀಸ್ (ಯುಬಿ) ಮೇಲಿನ ಹಿಡಿತ ತಪ್ಪಿದರೂ ಕಿಂಗ್ ಫಿಷರ್ ನೆಲಕಚ್ಚಿ ನಿಂತರೂ ಜಗ್ಗದೆ ಬೆಚ್ಚದ, ಬೆದರದ ವಿಜಯ್ ಮಲ್ಯ ಅವರನ್ನೇ ಯುಬಿ ಸಮೂಹ ಸಂಸ್ಥೆಯ ಪಾಲುದಾರಿಕೆ ಲೀಡರ್ ಎಂದು ಡಚ್ ಮೂಲದ ಹೆನ್ ಕೆನ್ ಸಂಸ್ಥೆ ಪ್ರಕಟಿಸಿದೆ.
ಈ ಮೂಲಕ ಯುಬಿ ಸಮೂಹದಲ್ಲಿ ತನ್ನ ಪಾಲುದಾರಿಕೆಯ ಪ್ರಮಾಣ ಕಳೆದುಕೊಂಡಿರುವ ಮಲ್ಯ ಅವರು ಬೋರ್ಡ್ ನಿಂದ ಹೊರ ನಡೆಯಲಿದ್ದಾರೆ ಎಂಬ ಸುದ್ದಿ ಸುಳ್ಳಲಾಗಿದೆ. ಹಾಲೆಂಡ್ನ ಬಿಯರ್ ಉತ್ಪಾದಕ ಕಂಪನಿ ಹೆನ್ಕೆನ್, ಯುಬಿಯಲ್ಲಿನ ಪಾಲುದಾರಿಕೆ ಹೆಚ್ಚಿಸಿಕೊಂಡಿದೆ. ಈಗ ಯುಬಿಯಲ್ಲಿನ ಹೆನ್ ಕೆನ್(Heineken) ಪಾಲುದಾರಿಕೆ ಶೇ. 42ಕ್ಕೆ ಏರಿದೆ. ವಿಜಯ್ ಮಲ್ಯ ಬಳಿಯ ಷೇರು ಪ್ರಮಾಣ ಶೇ. 32ಕ್ಕೆ ಇಳಿದಿದೆ.

ಬ್ರಿಟಿಷ್ ಕಂಪನಿ ಡಿಯಾಜಿಯೊ ಒಡೆತನದಲ್ಲಿರುವ ಯುನೈಟೆಡ್ ಸ್ಪಿರಿಟ್ಸ್ ಹೊಂದಿದ್ದ ಯುಬಿಯ 85 ಲಕ್ಷ ಷೇರುಗಳು ಹೆನ್ಕೆನ್ಗೆ ಪಾಲಾಗಿದೆ. ಸುಮಾರು 872 ಕೋಟಿ ರೂ. ನೀಡಿ ಯುಬಿ ಷೇರುಗಳನ್ನು ಹೆನ್ಕೆನ್ ಖರೀದಿಸಿದೆ. ಹೀಗಾಗಿ ಶೇ. 39ರಷ್ಟಿದ್ದ ಹೆನ್ಕೆನ್ ಪಾಲುದಾರಿಕೆ ಶೇ. 42.1ಕ್ಕೆ ಏರಿಕೆಯಾಗಿದೆ.
ವಿಜಯ್ ಮಲ್ಯ ಹಾಗೂ ಹೆನ್ಕೆನ್ ಕಂಪನಿ ನಡುವೆ 2008ರಲ್ಲಿ ನಡೆದಿದ್ದ ಸ್ಕಾಟಿಷ್ ಅಂಡ್ ನ್ಯೂಕ್ಯಸಲ್ ಜೊತೆಗಿನ ಒಪ್ಪಂದ ಅಂತ್ಯಗೊಂಡಿದೆ. ಒಪ್ಪಂದದಂತೆ ಯುಬಿಯಲ್ಲಿ ಮಲ್ಯ ಹಾಗೂ ಹೆನ್ಕೆನ್ ಸಮಾನ ಪಾಲುದಾರರಾಗಿದ್ದರು. ಇಬ್ಬರ ಬಳಿಯೂ ಕಂಪನಿಯ ತಲಾ ಶೇ. 37.5ರಷ್ಟು ಷೇರುಗಳಿದ್ದವು. ಯುಬಿ ಆಡಳಿತ ಮಂಡಳಿಯಲ್ಲೂ ಇಬ್ಬರಿಗೆ ಸಮಾನ ಸ್ಥಾನವಿತ್ತು. ಆದರೆ, ಕಿಂಗ್ ಫಿಷರ್ ವಿಮಾನವನ್ನು ಮೇಲಕ್ಕೆತ್ತಲು ಮಲ್ಯ ಅವರು ಯುಬಿ ಷೇರುಗಳನ್ನು ಮಾರಾಟ ಮಾಡತೊಡಗಿದರು.
ಯುನೈಟೆಡ್ ಸ್ಪಿರಿಟ್ಸ್ನ ಸಂಪೂರ್ಣ ಹಿಡಿತ ಡಿಯಾಜಿಯೋ ಕಂಪನಿ ಪಾಲಾಗಿದೆ. ಯುನೈಟೆಡ್ ಸ್ಪಿರಿಟ್ಸ್ನ ಅಧ್ಯಕ್ಷ ಹುದ್ದೆಯಿಂದ ಕೆಳಕ್ಕಿಳಿಯುವಂತೆ ಮಲ್ಯರನ್ನು ಕೇಳಿಕೊಳ್ಳಲಾಗಿದೆ. ಭಾರತೀಯ ಬಿಯರ್ ಮಾರುಕಟ್ಟೆಯಲ್ಲಿ ಶೇ. 50ರಷ್ಟು ಪಾಲು ಹೊಂದಿರುವ ಕಿಂಗ್ ಫಿಷರ್ ಸ್ಥಾನಕ್ಕೆ ಹಾಲೆಂಡಿನ ಹೆನ್ ಕೆನ್ ತನ್ನ ಬಿಯರ್ ಉತ್ಪನ್ನಗಳನ್ನು ಪ್ರಚಾರ ಮಾಡುವ ದಿನಗಳು ದೂರವಿಲ್ಲ. (ಪಿಟಿಐ)
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications