ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕ ವಲಯದ 2 ಬ್ಯಾಂಕ್, ಸರಕಾರೀ ಸ್ವಾಮ್ಯದ 1 ವಿಮಾ ಸಂಸ್ಥೆ ಖಾಸಗಿ ತೆಕ್ಕೆಗೆ

|
Google Oneindia Kannada News

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕ ವಲಯದ ಎಷ್ಟೋ ಬ್ಯಾಂಕುಗಳು ಇತರ ಬ್ಯಾಂಕ್ ಜೊತೆ ವಿಲೀನಗೊಂಡವು. ಅದರಲ್ಲಿ, ಕರ್ನಾಟಕ ಮೂಲದ ಬ್ಯಾಂಕುಗಳೂ ಸೇರಿದ್ದವು.

ಮೊದಲು, ಕರ್ನಾಟಕದ ಹೆಮ್ಮೆಯ ಮೈಸೂರು ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ವಿಲೀನಗೊಂಡಿತು. ಇದಾದ ನಂತರ, ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಜೊತೆ, ಇದಾದ ನಂತರ, ಕಾರ್ಪೋರೇಶನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಜೊತೆ ವಿಲೀನಗೊಂಡಿತು.

43ನೇ GST ಮಂಡಳಿ ಸಭೆ: ಕೊರೊನಾ ಉಪಕರಣಗಳ ಮೇಲೆ ವಿಶೇಷ ವಿನಾಯತಿ43ನೇ GST ಮಂಡಳಿ ಸಭೆ: ಕೊರೊನಾ ಉಪಕರಣಗಳ ಮೇಲೆ ವಿಶೇಷ ವಿನಾಯತಿ

ಇಷ್ಟಕ್ಕೂ ಮುಗಿಯದ ಬ್ಯಾಂಕ್ ವಿಲೀನ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಜೊತೆ ವಿಲೀನಗೊಂಡಿತು. ಅಲ್ಲಿಗೆ, ಒಂದು ಕಾಲದಲ್ಲಿ ಹಲವು ಬ್ಯಾಂಕುಗಳ ತವರೂರಾಗಿದ್ದ ಕರ್ನಾಟಕದ್ದು ಎಂದು ಉಳಿದದ್ದು ಕೆನರಾ ಬ್ಯಾಂಕ್ ಒಂದೇ.

 GST Meet: 11,000 ಕೋಟಿ ಹಣ ಬಿಡುಗಡೆಗೆ ಕರ್ನಾಟಕದ ಮನವಿ GST Meet: 11,000 ಕೋಟಿ ಹಣ ಬಿಡುಗಡೆಗೆ ಕರ್ನಾಟಕದ ಮನವಿ

ಕರ್ನಾಟಕ ಮೂಲದ ಬ್ಯಾಂಕುಗಳು ಮಾತ್ರವಲ್ಲದೇ, ಇತರ ರಾಜ್ಯಗಳಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬ್ಯಾಂಕುಗಳೂ ವಿಲೀನಗೊಂಡಿವೆ. ಈಗ, ಮತ್ತೆರಡು ಬ್ಯಾಂಕು ಮತ್ತು ಒಂದು ವಿಮಾ ಕಂಪೆನಿಯನ್ನು ಸರಕಾರ, ಖಾಸಗಿ ತೆಕ್ಕೆಗೆ ನೀಡಲು ಕೇಂದ್ರ ಸರಕಾರ ಸಿದ್ದತೆಗಳನ್ನು ಮಾಡಿಕೊಂಡಿವೆ.

 ನೀತಿ ಆಯೋಗ, ಕೇಂದ್ರ ಹಣಕಾಸು ಸಚಿವಾಲಯಕ್ಕೆ ಶಿಫಾರಸನ್ನು ಮಾಡಿದೆ

ನೀತಿ ಆಯೋಗ, ಕೇಂದ್ರ ಹಣಕಾಸು ಸಚಿವಾಲಯಕ್ಕೆ ಶಿಫಾರಸನ್ನು ಮಾಡಿದೆ

ಕಳೆದ ಗುರುವಾರದಂದು (ಜೂನ್ 3) ನೀತಿ ಆಯೋಗ, ಪ್ರಸಕ್ತ ಹಣಕಾಸು ವರ್ಷದಲ್ಲಿ (2021-22) ಎರಡು ಸಾರ್ವಜನಿಕ ವಲಯದ ಬ್ಯಾಂಕು ಮತ್ತು ಒಂದು ಸರಕಾರೀ ಸ್ವಾಮ್ಯದ ವಿಮಾ ಕಂಪೆನಿಯನ್ನು ಖಾಸಗಿ ಒಡೆತನಕ್ಕೆ ನೀಡಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಶಿಫಾರಸನ್ನು ಮಾಡಿದೆ. ಪ್ರಧಾನಿ ನೇತೃತ್ವದಲ್ಲಿ ಇದಕ್ಕೆ ಕ್ಯಾಬಿನೆಟ್ ಅನುಮೋದನೆ ಸಿಗುವ ಸಾಧ್ಯತೆಯಿದೆ.

 ಜನರಲ್ ಇನ್ಸೂರೆನ್ಸ್ ಸಂಸ್ಥೆಯಾಗಿರುವ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್

ಜನರಲ್ ಇನ್ಸೂರೆನ್ಸ್ ಸಂಸ್ಥೆಯಾಗಿರುವ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್

ಸರಕಾರೀ ಸ್ವಾಮ್ಯದ ಜನರಲ್ ಇನ್ಸೂರೆನ್ಸ್ ಸಂಸ್ಥೆಯಾಗಿರುವ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಸಂಸ್ಥೆ, ಆಯೋಗ ಶಿಫಾರಸು ಮಾಡಿರುವ ಪಟ್ಟಿಯಲ್ಲಿದೆ. 1938ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಸಂಸ್ಥೆಯಲ್ಲಿ ಸುಮಾರು 15ಸಾವಿರ ನೌಕರರು ಕೆಲಸ ಮಾಡಿಕೊಂಡಿದ್ದಾರೆ ಮತ್ತು ಇದರ ಕೇಂದ್ರ ಕಚೇರಿ ಚೆನ್ನೈನಲ್ಲಿದೆ.

 ಬ್ಯಾಂಕ್ ಆಫ್ ಮಹಾರಾಷ್ಟ್ರ ಕೂಡಾ ಖಾಸಗಿ ತೆಕ್ಕೆಗೆ ಹೋಗುವ ಬ್ಯಾಂಕ್

ಬ್ಯಾಂಕ್ ಆಫ್ ಮಹಾರಾಷ್ಟ್ರ ಕೂಡಾ ಖಾಸಗಿ ತೆಕ್ಕೆಗೆ ಹೋಗುವ ಬ್ಯಾಂಕ್

ಇನ್ನು, ಬ್ಯಾಂಕ್ ಆಫ್ ಮಹಾರಾಷ್ಟ್ರ ಕೂಡಾ ಖಾಸಗಿ ತೆಕ್ಕೆಗೆ ಹೋಗುವ ಬ್ಯಾಂಕುಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಬ್ಯಾಂಕ್, 1935ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಈ ಬ್ಯಾಂಕಿನಲ್ಲಿ 13,048 ಉದ್ಯೋಗಿಗಳಿದ್ದಾರೆ.

 ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

ನೀತಿ ಆಯೋಗ ಶಿಫಾರಸು ಮಾಡಿರುವ ಇನ್ನೊಂದು ಬ್ಯಾಂಕ್ ಎಂದರೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ. 110 ವರ್ಷಗಳ ಇತಿಹಾಸವಿರುವ ಈ ಬ್ಯಾಂಕ್, 1911ರಲ್ಲಿ ಸ್ಥಾಪನೆಗೊಂಡಿತ್ತು. ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಈ ಹೊಂದಿರುವ ಈ ಬ್ಯಾಂಕ್ ನಲ್ಲಿ 33,481 ಉದ್ಯೋಗಿಗಳಿದ್ದಾರೆ.

English summary
Niti Ayog Finalize Names Of Public Sector Bank And Insurance Company For Privatisation. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X