ಷೇರುಪೇಟೆಯಲ್ಲಿ ಕರಡಿ ಕುಣಿತ: ಸೆನ್ಸೆಕ್ಸ್, ನಿಫ್ಟಿ ಕುಸಿತ

ನವದೆಹಲಿ, ಜನವರಿ 18: ಭಾರತೀಯ ಮಾರುಕಟ್ಟೆಯಲ್ಲಿ ಸೋಮವಾರ ಕರಡಿ ಕುಣಿತ ಜೋರಾಗಿದ್ದು, ಹೂಡಿಕೆದಾರರು ಎಲ್ಲಾ ವಿಭಾಗದಲ್ಲಿ ಲಾಭದ ಬುಕ್ಕಿಂಗ್ ಕಡೆಗೆ ಮೊರೆ ಹೋಗಿದ್ದಾರೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 470 ಪಾಯಿಂಟ್ಸ್‌ ಕುಸಿತ ಕಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 152 ಪಾಯಿಂಟ್ಸ್‌ ಇಳಿಕೆ ಸಾಧಿಸಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 470.40 ಪಾಯಿಂಟ್ಸ್‌ ಅಥವಾ ಶೇಕಡಾ 0.96ರಷ್ಟು ಏರಿಕೆ ಕಂಡಿದ್ದು 48,564.27 ಪಾಯಿಂಟ್ಸ್‌ ಮುಟ್ಟಿದೆ. ಎಸ್‌ಎಸ್‌ಇ ಸೂಚ್ಯಂಕ ನಿಫ್ಟಿ 152.40 ಪಾಯಿಂಟ್ಸ್‌ ಅಥವಾ ಶೇಕಡಾ 1.06ರಷ್ಟು ಏರಿಕೆಗೊಂಡು 14,281.30ಗೆ ತಲುಪಿದೆ. ಇಂದು 900 ಷೇರುಗಳು ಏರಿಕೆಯನ್ನ ಸಾಧಿಸಿದ್ದು, 2,074 ಷೇರುಗಳು ಕುಸಿತ ಕಂಡಿವೆ ಮತ್ತು 144 ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಯುಪಿಎಲ್, ರಿಲಯನ್ಸ್ ಇಂಡಸ್ಟ್ರೀಸ್, ಟೈಟಾನ್ ಕಂಪನಿ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಟಿಸಿ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದರೆ, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಒಎನ್‌ಜಿಸಿ, ಹಿಂಡಾಲ್ಕೊ ಮತ್ತು ಸನ್ ಫಾರ್ಮಾ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.

Nifty Ends Below 14300, Sensex Down 470 Points

ಬಹುತೇಕ ಎಲ್ಲಾ ವಲಯ ಸೂಚ್ಯಂಕಗಳು ಶೇಕಡಾ 4ರಷ್ಟು ಕುಸಿತಗೊಂಡರೆ, ಆಟೋಮೊಬೈಲ್, ಪಿಎಸ್‌ಯು ಬ್ಯಾಂಕ್ ಮತ್ತು ಫಾರ್ಮಾ ಸೂಚ್ಯಂಕಗಳು ಶೇಕಡಾ 2ರಷ್ಟು ಕುಸಿದವು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 2 ರಷ್ಟು ಇಳಿಕೆಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+