
ಆದಾಯ ತೆರಿಗೆ ಪಾವತಿಗೆ ಹೊಸ ವೆಬ್‌ತಾಣ, ಏನಿದೆ ವಿಶೇಷ?
ಕೋವಿಡ್ 19 ಸಾಂಕ್ರಾಮಿಕದ ದೆಸೆಯಿಂದ ವೈಯಕ್ತಿಕ ಆದಾಯ ತೆರಿಗೆ ಹಾಗೂ ಸಂಸ್ಥೆಗಳ ಐಟಿ ರಿಟರ್ನ್ಸ್ ಸಲ್ಲಿಸುವ ಕೊನೆಯ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಜೊತೆಗೆ ಆದಾಯ ತೆರಿಗೆ ಪಾವತಿಗೆ ಹೊಸ ವೆಬ್‌ತಾಣವನ್ನು ಇಂದಿನಿಂದ ಪರಿಚಯಿಸಲಾಗುತ್ತಿದೆ.
ಜುಲೈ 31,2021ರ ಬದಲಿಗೆ ಸೆಪ್ಟೆಂಬರ್ 30, 2021 ರ ತನಕ ಐಟಿ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಜೂನ್ 7 ರಂದು ಆದಾಯ ತೆರಿಗೆ ಕಟ್ಟಲು ಹೊಸ ವೆಬ್ ತಾಣ(http://incometax.gov.in) ವನ್ನು ಇಲಾಖೆ ಪರಿಚಯಿಸಲಾಗಿದೆ. ಇದರ ಜೊತೆಗೆ ಯಾವುದೇ ತೆರಿಗೆದಾರರಿಗಾಗುವ ಅನಾನುಕೂಲತೆಯನ್ನು ತಪ್ಪಿಸಲು ಮುಂಗಡ ತೆರಿಗೆ ಕಂತು ಪಾವತಿ ದಿನಾಂಕದ ನಂತರ ಹೊಸ ಆದಾಯ ತೆರಿಗೆ ಪಾವತಿ ವಿಧಾನವನ್ನು 2021ರ ಜೂನ್ 18 ರಂದು ಹೊಸ ತೆರಿಗೆ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದುಎಂದು ಸಿಬಿಡಿಟಿ ಹೇಳಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಕೊನೆ ದಿನಾಂಕ ವಿಸ್ತರಣೆ
ಹೊಸ ಬದಲಾವಣೆಗಳು:
* ತೆರಿಗೆದಾರರಿಗೆ ತ್ವರಿತ ಮರುಪಾವತಿ ನೀಡಲು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ತಕ್ಷಣದ ಪ್ರಕ್ರಿಯೆಯೊಂದಿಗೆ ಸಂಯೋಜಿಸಲ್ಪಟ್ಟ ಹೊಸ ತೆರಿಗೆದಾರ ಸ್ನೇಹಿ ಪೋರ್ಟಲ್
* ವೆಬ್ ತಾಣದ ಜೊತೆಗೆ ಹೊಸ ಮೊಬೈಲ್ ಅಪ್ಲಿಕೇಷನ್ ಕೂಡಾ ಹೊರತರಲಾಗುತ್ತಿದ್ದು, ಎಲ್ಲಾ ಸೌಲಭ್ಯಗಳು ಲಭ್ಯವಾಗಲಿದೆ.
* ಐಟಿಆರ್ ಗೊಂದಲಗಳಿಗೆ ತಕ್ಷಣವೇ ಪರಿಹಾರ, ರೀಫಂಡ್, ತೆರಿಗೆದಾರರ ಎಲ್ಲಾ ಸಂವಹನಗಳು ಮತ್ತು ಅಪ್ಲೋಡ್‌ಗಳು ಅಥವಾ ಬಾಕಿ ಇರುವ ಕ್ರಿಯೆಗಳನ್ನು ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ಪ್ರದರ್ಶಿಸಲಾಗುತ್ತದೆ.
*ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು (FAQs), ಬೋಧನೆಗಳು, ವೀಡಿಯೊಗಳು ಮತ್ತು ಚಾಟ್ ಬಾಟ್/ ಲೈವ್ ಏಜೆಂಟರೊಂದಿಗಿನ ತೆರಿಗೆದಾರರ ಪ್ರಶ್ನೆಗಳಿಗೆ ತಕ್ಷಣದ ಉತ್ತರಗಳಿಗಾಗಿ ತೆರಿಗೆದಾರರ ಸಹಾಯಕ್ಕಾಗಿ ಹೊಸ ಕಾಲ್ ಸೆಂಟರ್ ಇರಲಿದೆ.
* ಡೆಸ್ಕ್‌ಟಾಪ್‌ನಲ್ಲಿನ ಎಲ್ಲಾ ಪ್ರಮುಖ ಪೋರ್ಟಲ್ ಕಾರ್ಯಗಳು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ, ಅದು ಮೊಬೈಲ್ ನೆಟ್ವರ್ಕ್‌ನಲ್ಲಿ ಯಾವುದೇ ಸಮಯದಲ್ಲಿ ಪೂರ್ಣವಾಗಿ ಲಭ್ಯವಾಗಿರಲು ಸಕ್ರಿಯಗೊಳ್ಳುತ್ತದೆ.
* ಹೊಸ ಪೋರ್ಟಲ್‌ನಲ್ಲಿ ಹೊಸ ಆನ್ಲೈನ್ ತೆರಿಗೆ ಪಾವತಿ ವ್ಯವಸ್ಥೆಯನ್ನು ತರುವಾಯ ನೆಟ್‌ಬ್ಯಾಂಕಿಂಗ್, ಯುಪಿಐ, ಕ್ರೆಡಿಟ್ ಕಾರ್ಡ್ ಮತ್ತು ಆರ್‌ಟಿಜಿಎಸ್ / ಎನ್ಇಎಫ್‌ಬಿ ಬಳಸಿ ಯಾವುದೇ ಬ್ಯಾಂಕಿನಲ್ಲಿ ತೆರಿಗೆ ಪಾವತಿದಾರರ ಯಾವುದೇ ಖಾತೆಯಿಂದ ತೆರಿಗೆಗಳನ್ನು ಸುಲಭವಾಗಿ ಪಾವತಿಸಲು ಸಕ್ರಿಯಗೊಳಿಸಲಾಗುತ್ತದೆ.
* ತೆರಿಗೆದಾರರಿಂದ ಅನುಸರಣಾ ಕ್ರಮಕ್ಕಾಗಿ ಎಲ್ಲಾ ಸಂವಹನ ಮತ್ತು ಅಪ್ ಲೋಡ್ ಗಳು ಅಥವಾ ಬಾಕಿ ಇರುವ ಕ್ರಮಗಳನ್ನು ಒಂದೇ ಡ್ಯಾಶ್ ಬೋರ್ಡ್ ನಲ್ಲಿ ಪ್ರದರ್ಶಿಸಲಾಗುತ್ತದೆ;
ಐಟಿಆರ್ 1, 4 (ಆನ್ ಲೈನ್ ಮತ್ತು ಆಫ್ ಲೈನ್) ಮತ್ತು ಐಟಿಆರ್ 2 (ಆಫ್ ಲೈನ್) ಗಾಗಿ ತೆರಿಗೆ ಪಾವತಿದಾರರಿಗೆ ಪ್ರಾರಂಭಿಸಲು ಸಹಾಯ ಮಾಡಲು ಸಂವಾದಾತ್ಮಕ ಪ್ರಶ್ನೆಗಳೊಂದಿಗೆ ಐಟಿಆರ್ ತಯಾರಿಕೆ ತಂತ್ರಾಂಶ ಲಭ್ಯವಿದೆ; ಐಟಿಆರ್ 3, 5, 6, 7 ತಯಾರಿಸಲು ಸೌಲಭ್ಯ ಶೀಘ್ರದಲ್ಲೇ ಲಭ್ಯವಾಗಲಿದೆ;
* ತೆರಿಗೆದಾರರು ತಮ್ಮ ಐಟಿಆರ್ ಸಲ್ಲಿಕೆ ಪೂರ್ವದಲ್ಲಿ ಭರ್ತಿ ಮಾಡಲು ಬಳಸಲಾಗುವ ಐಟಿಆರ್ ನಲ್ಲಿ ವೇತನ, ,ಗೃಹ ಆಸ್ತಿ, ವ್ಯವಹಾರ / ವೃತ್ತಿ ಸೇರಿದಂತೆ ಆದಾಯದ ಕೆಲವು ವಿವರಗಳನ್ನು ಒದಗಿಸಲು ತಮ್ಮ ಪ್ರೊಫೈಲ್ ಅನ್ನು ಪೂರ್ವಭಾವಿಯಾಗಿ ನವೀಕರಿಸಲು ಸಾಧ್ಯವಾಗುತ್ತದೆ. ಟಿಡಿಎಸ್ ಮತ್ತು ಎಸ್.ಎಫ್.ಟಿ ಲೆಕ್ಕಾಚಾರದ ದಾಖಲೆಗಳನ್ನು ಅಪ್ ಲೋಡ್ (ಕೊನೆಯ ದಿನಾಂಕ ಜೂನ್ 30, 2021) ಮಾಡಿದ ನಂತರ ವೇತನ ಆದಾಯ, ಬಡ್ಡಿ, ಲಾಭಾಂಶ ಮತ್ತು ಬಂಡವಾಳ ಆದಾಯ (ಕ್ಯಾಪಿಟಲ್ ಗೈನ್)ಗಳೊಂದಿಗೆ ಪೂರ್ವ -ಭರ್ತಿಯ ವಿವರವಾದ ಸಕ್ರಿಯಗೊಳಿಸುವಿಕೆ ಲಭ್ಯವಿರುತ್ತದೆ;
* ಆದಾಯ ತೆರಿಗೆ ನಮೂನೆಗಳನ್ನು ಭರ್ತಿ ಮಾಡುವ ಕಾರ್ಯಗಳು, ತೆರಿಗೆ ವೃತ್ತಿಪರರ ಸೇರ್ಪಡೆ, ನೋಟಿಸ್ ಗಳಿಗೆ ಸ್ಪಂದನೆಯ ಸಲ್ಲಿಕೆಯಲ್ಲಿ ಮುಖಾಮುಖಿರಹಿತ ಪರಿಶೀಲನೆ ಅಥವಾ ಮೇಲ್ಮನವಿ ಲಭ್ಯವಿರುತ್ತದೆ..