ಡಿಸೆಂಬರ್‌ನಲ್ಲಿ ಪ್ರತಿಯೊಬ್ಬ ಭಾರತೀಯರಿಗೆ ನೆಟ್‌ಫ್ಲಿಕ್ಸ್ ಉಚಿತ ಪ್ರವೇಶ
ನವದೆಹಲಿ, ನವೆಂಬರ್ 20: ವೀಡಿಯೋ ಸ್ಟ್ರೀಮಿಂಗ್ ವೇದಿಕೆಯಾದ ನೆಟ್‌ಫ್ಲಿಕ್ಸ್ ಡಿಸೆಂಬರ್‌ನಲ್ಲಿ ಆಫರ್ ಒಂದನ್ನು ನೀಡುತ್ತಿದ್ದು, ಪ್ರತಿಯೊಬ್ಬ ಭಾರತೀಯರಿಗೂ ಡಿಸೆಂಬರ್‌ನಲ್ಲಿ ಉಚಿತ ಪ್ರವೇಶ ನೀಡಲು ಮುಂದಾಗಿದೆ.
ಸ್ಟ್ರೀಮಿಂಗ್ ವೇದಿಕೆಯಾದ ನೆಟ್‌ಫ್ಲಿಕ್ಸ್ ಉಚಿತ ವಾರಾಂತ್ಯದ ಸ್ಟ್ರೀಮ್‌ಫೆಸ್ಟ್ ಅನ್ನು ಆಯೋಜಿಸುತ್ತಿದೆ. ಡಿಸೆಂಬರ್ 5 ಮತ್ತು 6 ರಂದು ಎರಡು ದಿನಗಳ ಕಾಲ ಯಾರು ಬೇಕಾದರೂ ನೆಟ್‌ಫ್ಲಿಕ್ಸ್‌ಗೆ ಉಚಿತ ಪ್ರವೇಶವನ್ನು ಪಡೆಯಬಹುದು. ಇದರಿಂದಾಗಿ ಉಚಿತವಾಗಿ ಚಲನಚಿತ್ರಗಳು, ಸೀರೀಸ್ ಮತ್ತು ಡಾಕ್ಯುಮೆಂಟ್ರಿಗಳನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದಾಗಿದೆ.
ಆದಾಗ್ಯೂ, ಒಂದು ನೆಟ್‌ಫ್ಲಿಕ್ಸ್ ID ಯನ್ನು ಅನೇಕ ಜನರು ಬಳಸಬಹುದಾದರೂ, ಸ್ಟ್ರೀಮ್‌ಫೆಸ್ಟ್‌ಗಾಗಿ ಸೈನ್ ಅಪ್ ಮಾಡುವವರು ಕೇವಲ ಒಂದು ಮೊಬೈಲ್‌ನಲ್ಲಿ ಮಾತ್ರ ಸೌಲಭ್ಯ ಪಡೆಯುತ್ತಾರೆ. ಆದ್ದರಿಂದಾಗಿ ಒಬ್ಬರ ಐಡಿಯನ್ನು ಬೇರೆಯವರು ಲಾಗಿನ್ ಆಗಿ ಬಳಸಲಾಗುವುದಿಲ್ಲ ಎಂದು ನೆಟ್‌ಫ್ಲಿಕ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಸೈನ್ ಅಪ್ ಮಾಡಿದ ನಂತರ, ಆಂಡ್ರಾಯ್ಡ್ ಮೊಬೈಲ್‌ಗಳಿಂದ ವೀಕ್ಷಿಸಲು, ಸ್ಮಾರ್ಟ್ ಟಿವಿಗಳು ಮತ್ತು ಇನ್ನಿತರ ಸಾಧನಗಳಿಂದ ವೀಕ್ಷಿಸಲು ಬಳಕೆದಾರರು ಆ ಲಾಗಿನ್ ಅನ್ನು ಬಳಸಬಹುದು ಎಂದು ನೆಟ್‌ಫ್ಲಿಕ್ಸ್ ಹೇಳಿದೆ.
ಇನ್ನು ನೆಟ್‌ಫ್ಲಿಕ್ಸ್ ಸ್ಟ್ರೀಮ್‌ಫೆಸ್ಟ್ ಪ್ರವೇಶಿಸಲು ಬಳಕೆದಾರರು ತಮ್ಮ ಹೆಸರು, ಇಮೇಲ್ ಅಥವಾ ಫೋನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಸೈನ್ ಅಪ್ ಮಾಡಬೇಕಾಗುತ್ತದೆ. ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿ ಅಗತ್ಯವಿಲ್ಲ.
ಸ್ಟ್ರೀಮ್‌ಫೆಸ್ಟ್ ಮೂಲಕ ನೆಟ್‌ಫ್ಲಿಕ್ಸ್ ಹೊಸ ಗ್ರಾಹಕರನ್ನು ಆಕರ್ಷಿಸಲು ಈ ಯೋಜನೆ ಹಮ್ಮಿಕೊಂಡಿದೆ ಎನ್ನಲಾಗಿದೆ.












Click it and Unblock the Notifications