ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರು ಮಾರುಕಟ್ಟೆ ಪಾತಾಳಕ್ಕೆ, ಹೂಡಿಕೆದಾರರಲ್ಲಿ ನಡುಕ

|
Google Oneindia Kannada News

ಮುಂಬೈ, ಜನವರಿ, 11: ಹೊಸ ವರ್ಷ ಹೂಡಿಕೆದಾರರಿಗೆ ಮಾತ್ರ ಆಶಾದಾಯಕವಾಗಿ ಉಳಿದಿಲ್ಲ. ಭಾರತದ ಷೇರು ಮಾರುಕಟ್ಟೆ ನಿರಂತರ ಕುಸಿತ ಹಾಗೆ ಮುಂದುವರಿದಿದೆ. ಕಳೆದ 13 ತಿಂಗಳಲ್ಲೇ ಅತಿ ಕಡಿಮೆ ಮಟ್ಟಕ್ಕೆ ಷೇರು ಪೇಟೆ ಬಂದು ನಿಂತಿದ್ದು ಸೆನ್ಸೆಕ್ಸ್ 25 ಸಾವಿರಕ್ಕೂ ಕೆಳಗೆ ಬಂದಿದೆ.

ನಿಫ್ಟಿ ಸಹ 7 ಸಾವಿರದ 500 ಅಂಕಗಳಿಗಿಂತ ಕೆಳಗೆ ಕುಸಿದಿದ್ದು ಹೂಡಿಕೆದಾರರ ಚಿಂತೆ ಹೆಚ್ಚು ಮಾಡಿದೆ. ಚೀನಾ ಮಾರುಕಟ್ಟೆ ಕುಸಿತದ ಭಯ, ಏಷ್ಯಾ ಮಾರುಕಟ್ಟೆಯ ಅಸ್ಥಿರತೆ ಹಾಗೂ ಹಣಕಾಸು ಹೂಡಿಕೆಗಳ ಭಾರೀ ಮಾರಾಟ ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿದೆ. ಪ್ರಮುಖ ಲೋಹ, ವಾಣಿಜ್ಯ ಗೂಡ್ಸ್ ಮತ್ತು ಸಾರ್ವಜನಿಕ ವಲಯ ಘಟಕಗಳ ಷೇರುಗಳು ಕುಸಿದಿವೆ ಎಂದು ಅಂಕಿ ಅಂಶಗಳು ದಾಖಲೆ ನೀಡುತ್ತವೆ.[ಮಾರುಕಟ್ಟೆ ಲೈವ್]

business

ಅತ್ತ ಏಷ್ಯಾ ವಲಯ ಸಹ ಕುಸಿತ ಕಂಡಿದೆ. ಹಾಂಕಾಂಗ್ ನ ಹಾಂಗ್ ಸೆಲ್ ಶೇಕಡಾ 2.61 ಅಂಕಗಳಷ್ಟು ಕುಸಿತ ಕಂಡುಬಂದರೆ ಶಾಂಘೈ ಶೇಕಡಾ 2.40ರಷ್ಟು ಕುಸಿತ ಕಂಡಿದೆ. ಅಮೆರಿಕದ ಡೋವ್ ಜೋನ್ಸ್ ಕೈಗಾರಿಕಾ ವಲಯ ಶೇಕಡಾ 1.02ರಷ್ಟು ಕುಸಿತ ಕಂಡುಬಂದಿದೆ.

ಟಾಟಾ ಸ್ಟೀಲ್‌, ಹಿಂಡಾಲ್ಕೋ, ಭಾರತಿ ಏರ್‌ಟೆಲ್‌, ಕೋಲ್‌ ಇಂಡಿಯಾ, ಬಿಎಚ್‌ಇಎಲ್‌ ಶೇರುಗಳು ತೀವ್ರ ಕುಸಿತಕ್ಕೆ ಸಿಕ್ಕಿವೆ. ಎನ್‌ಟಿಪಿಸಿ, ರಿಲಯನ್ಸ್‌, ಎಕ್ಸಿಸ್‌ ಬ್ಯಾಂಕ್‌ ಕೊಂಚ ಚೇತರಿಕೆ ಕಂಡಿವೆ.[ಷೇರು ಮಾರುಕಟ್ಟೆಗೆ ನಾರಾಯಣ ಹೃದಯಾಲಯ]

ಏಷ್ಯಾದ ಮಾರುಕಟ್ಟೆಯಲ್ಲಿ ಸುಧಾರಣೆ ಕಂಡುಬಂದು, ರುಪಾಯಿ ಮೌಲ್ಯ ಸ್ಥಿರತೆ ಕಾಯ್ದುಕೊಂಡಾಗ ಮಾತ್ರ ಮಾರುಕಟ್ಟೆ ಸುಧಾರಿಸಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
Problems in China continued to haunt global markets with Asian indices sharply lower and Indian markets sinking to a new 14-month low. The rupee too fell sharply as investors remained worried that poor Chinese data could spark a currency war.The Sensex was down a huge 300 points, while the Nifty threatened to breach the 7500 points level and was last trading at 7504 points, down 97 points in trade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X