ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖೇಶ್ ಅಂಬಾನಿ ಗಳಿಕೆ=ಎಸ್ಟೋನಿಯಾ ದೇಶದ ಜಿಡಿಪಿ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 21: ಭಾರತದ ಅತ್ಯಂತ ಶ್ರೀಮಂತ ಎಂದು ಸತತ 9 ವರ್ಷಗಳಿಂದ ಫೋರ್ಬ್ಸ್ ಮ್ಯಾಗಜೀನ್ ನಿಂದ ಕರೆಸಿಕೊಳ್ಳುತ್ತಿರುವ ಮುಖೇಶ್ ಅಂಬಾನಿ ಅವರ ಗಳಿಕೆಯು ಒಂದು ದೇಶದ ಜಿಡಿಪಿಗೆ ಸಮಾನವಾಗಿದೆ ಎಂಬ ಮಾಹಿತಿ ಹೊರಬಂದಿದೆ.

ಉತ್ತರ ಯುರೋಪಿನ ರಾಷ್ಟ್ರ ಎಸ್ಟೋನಿಯಾದ ಜಿಡಿಪಿಗೆ ಮುಖೇಶ್ ಅಂಬಾನಿ ಗಳಿಕೆ ಸಮನಾಗಿದೆ. ಮುಖೇಶ್ 22.7 ಮಿಲಿಯನ್ ಯುಎಸ್ ಡಾಲರ್ ನಷ್ಟಿದೆ. ಇದೇ ರೀತಿ ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್ ಜಿ ಅವರು ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, 15 ಮಿಲಿಯನ್ ಯುಎಸ್ ಡಾಲರ್ ಗಳಿಕೆ ಹೊಂದಿದ್ದಾರೆ. ಪ್ರೇಮ್ ಜಿ ಅವರ ಗಳಿಕೆ ಮೋಜಾಂಬಿಕ್ ಜಿಡಿಪಿಗೆ ಸಮನಾಗಿದೆ.

Mukesh Ambani's wealth at $22.7 billion equals Estonia's GDP: Forbes

ಸನ್ ಫಾರ್ಮಾದ ದಿಲೀಪ್ ಶಾಂಘ್ವಿ 16.9 ಮಿಲಿಯನ್ ಯುಎಸ್ ಡಾಲರ್ ನಷ್ಟು ಗಳಿಕೆ ಹೊಂದಿದ್ದರೆ, ಹಿಂದೂಜಾ ಕುಟುಂಬ ಮೂರನೇ ಹಂತಕ್ಕೇರಿದ್ದು 15.2 ಮಿಲಿಯನ್ ಯುಎಸ್ ಡಾಲರ್ ವಾರ್ಷಿಕ ಆದಾಯ ಹೊಂದಿದೆ. ಟಾಪ್ 5ರಲ್ಲಿ ಪಲ್ಲೊಂಜಿ ಮಿಸ್ತ್ರಿ ಹೊಸ ಹೆಸರಾಗಿದ್ದು, 13.9 ಯುಎಸ್ ಡಾಲರ್ ಆದಾಯ ಹೊಂದಿದ್ದಾರೆ.

ಟಾಪ್ 5 ಅತಿ ಶ್ರೀಮಂತರ ಒಟ್ಟು ಆದಾಯ 83.7 ಮಿಲಿಯನ್ ಯುಎಸ್ ಡಾಲರ್ ನಷ್ಟಿದ್ದು ಇದು ಮಂಗಳಯಾನ ಯೋಜನೆ(ಸಾವಿರ ಯೋಜನೆ ಮಾಡಬಹುದು), ರಿಯೋ ಒಲಿಂಪಿಕ್ಸ್ 2016ರ ಆಯೋಜನೆ(18 ಬಾರಿ ಆಯೋಜಿಸಬಹುದು)ಗೂ ಎಷ್ಟೋ ಪಾಲು ಅಧಿಕವಾಗಿದೆ. ಅತಿ ಶ್ರೀಮಂತರ ಪಟ್ಟಿಗೆ ಸೇರಲು ಕಟ್ ಆಫ್ 1.25 ಮಿಲಿಯನ್ ಯುಎಸ್ ಡಾಲರ್ ಗೆ ಏರಿಸಲಾಗಿದೆ.

ಈ ವರ್ಷ ಶ್ರೀಮಂತರ ಪಟ್ಟಿಯಿಂದ ಫ್ಲಿಫ್ ಕಾರ್ಟ್ ನ ಸಚಿನ್ ಹಾಗೂ ಬಿನ್ನಿ ಬನ್ಸಾಲ್ ಹೊರಗುಳಿದರೆ, ಟೆಕ್ ಉದ್ಯಮಿಗಳಾದ ತುರಖಿಯಾ ಬ್ರದರ್ಸ್ ಹಾಗೂ ಆಚಾರ್ಯ ಬಾಲಕೃಷ್ಣ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ. (ಪಿಟಿಐ)

English summary
Industrialist Mukesh Ambani, who has been named India's richest person for the 9th year in a row with a sharp increase in networth to USD 22.7 billion, has fortune that is equal to Estonia's GDP, says Forbes India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X