ಹೊಸ ವರ್ಷದಂದು ಬೆಂಗಳೂರಿನಲ್ಲಿ ಮಾರಾಟವಾಗಿದ್ದು ಇಷ್ಟು ಮದ್ಯ!
ಬೆಂಗಳೂರು, ಜನವರಿ 04: ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಬೆಂಗಳೂರಿನಲ್ಲಿ ಈ ವರ್ಷ ಹೊಸ ವರ್ಷದ ಸಂದರ್ಭದಲ್ಲಿ ಮದ್ಯ ಮಾರಾಟವು ಅಧಿಕವಾಗಿದೆ. ಕಳೆದ ವರ್ಷ ಡಿಸೆಂಬರ್ 31 ರಂದು 2.25 ಲಕ್ಷ ಕಾರ್ಟನ್ ಬಾಕ್ಸ್‌ಗಳಲ್ಲಿ ಭಾರತದಲ್ಲಿ ತಯಾರಿ ಮಾಡಿದ ಮದ್ಯವು ಮಾರಾಟವಾಗಿದ್ದರೆ, ಈ ಬಾರಿ 2.39 ಲಕ್ಷ ಕಾರ್ಟನ್ ಬಾಕ್ಸ್‌ಗೆ ಮದ್ಯ ಮಾರಾಟ ಏರಿಕೆ ಕಂಡಿದೆ.
ಇನ್ನು ಸುಮಾರು 1.55 ಲಕ್ಷ ಬಾಕ್ಸ್ ಬಿಯರ್ ಕೂಡಾ ಮಾರಾಟವಾಗಿದೆ. ಈ ಮೂಲಕ ಅಂದಾಜು 170 ಕೋಟಿ ರೂಪಾಯಿ ಮದ್ಯ ಮಾರಾಟ ನಡೆದಿದೆ. ಅಂದರೆ ಒಟ್ಟಾಗಿ ಸುಮಾರು 170 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಇನ್ನು ಕಳೆ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ಬಾರಿ ಹಾಟ್ ಡ್ರಿಂಕ್ಸ್ ಹಾಗೂ ಬಿಯರ್ ಮಾರಾಟದಲ್ಲಿ ಕೊಂಚ ಏರಿಕೆ ಕಂಡಿದೆ.
ಇನ್ನು ಈ ವರ್ಷ ಮದ್ಯ ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿದ್ದರೂ ಕೂಡಾ 2019ರಲ್ಲಿ ಮಾರಾಟವಾದ ಮದ್ಯದ ಪ್ರಮಾಣಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಮದ್ಯದ ಮಾರಾಟ ಪ್ರಮಾಣವು ಕಡಿಮೆ ಆಗಿದೆ. 2019ರಲ್ಲಿ ಸುಮಾರು 3.62 ಲಕ್ಷ ಕಾರ್ಟನ್ ಬಾಕ್ಸ್ ಮದ್ಯವು ಮಾರಾಟವಾಗಿದೆ. ಸರ್ಕಾರವು ನೈಟ್ ಕರ್ಫ್ಯೂ ಹಾಗೂ ನಿರ್ಬಂಧವನ್ನು ಹೇರಿಕೆ ಮಾಡಿದ್ದ ಹಿನ್ನೆಲೆಯಿಂದಾಗಿ ಈ ವರ್ಷ ಹಲವಾರು ಮಂದಿ ಹೊಸ ವರ್ಷದ ಸಂದರ್ಭದಲ್ಲಿ ಯಾವುದೇ ಮದ್ಯ ಕೊರತೆ ಉಂಟಾಗಬಾರದು ಎಂದು ಹೆಚ್ಚಿಗೆ ಮದ್ಯವನ್ನು ಖರೀದಿ ಮಾಡಿದ್ದರು ಎಂದು ವರದಿಯಾಗಿದೆ.

ಕಳೆದ ವರ್ಷ ಎಷ್ಟು ಮದ್ಯ ಮಾರಾಟವಾಗಿತ್ತು?
ಕಳೆದ ವರ್ಷ ಅಂದರೆ 2020ರ ಡಿಸೆಂಬರ್ 31ರಂದು 120.21 ಕೋಟಿ ರೂಪಾಯಿ ಮೌಕ್ಯದ 2.25 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 30.73 ಕೋಟಿ ರೂಪಾಯಿ ಮೌಲ್ಯದ 1.75 ಲಕ್ಷ ಬಾಕ್ಸ್ ಬಿಯರ್ ಸೇರಿ ಒಟ್ಟು 150.94 ಕೋಟಿ ರೂಪಾಯಿ ಮೌಲ್ಯದ ಮದ್ಯವು ಮಾರಾಟವಾಗಿತ್ತು. ಇನ್ನು 2018ರ ಡಿಸೆಂಬರ್ 31ರಂದು 3.83 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 1.48 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಇನ್ನು 2021ರ ಡಿಸೆಂಬರ್ 24ರಿಂದ ಡಿಸೆಂಬರ್ 31ರವರೆಗೆ ಐಎಂಎಲ್ ಹಾಗೂ ಬಿಯರ್ ಸೇರಿ ಒಟ್ಟು 974.58 ಕೋಟಿ ರೂಪಾಯಿ ಮೌಲ್ಯದ ಮದ್ಯವು ಮಾರಾಟವಾಗಿದೆ. ಈ ಹಣದಿಂದ ಸರ್ಕಾರಕ್ಕೆ ಸುಮಾರು 573 ಕೋಟಿ ರೂಪಾಯಿ ಆದಾಯ ಲಭಿಸಿದೆ.
ಕೇರಳ-ಬೆಂಗಳೂರು ತುಲನೆ
ಹೊಸ ವರ್ಷದ ಮುನ್ನಾದಿನದಂದು ಕೇರಳದಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆ. ಬೆವ್ಕೋ ಚಿಲ್ಲರೆ ವ್ಯಾಪಾರಿಗಳು 82.26 ಕೋಟಿ ರೂ. ಮೌಲ್ಯದ ಮದ್ಯವನ್ನು ಖರೀದಿ ಮಾಡಿದ್ದರೆ, ಇದೇ ಸಂದರ್ಭದಲ್ಲಿ ಕನ್ಸೂಮರ್‌ಫೆಡ್ 14.60 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ಖರೀದಿ ಮಾಡಿದ್ದಾರೆ. ಜನವರಿ 1 ರಂದು ಹೊಸ ವರ್ಷ ಆರಂಭದ ಹಿನ್ನೆಲೆಯಾದ ಕಾರಣದಿಂದಾಗಿ ಡಿಸೆಂಬರ್ 31 ರಂದು ಒಟ್ಟು ಮಾರಾಟದಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ. ಈ ನಡುವೆ ಆ ಒಂದು ರಾಜ್ಯದಲ್ಲಿ 14.60 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿರುವಾಗ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೇ ಒಟ್ಟಾಗಿ ಸುಮಾರು 170 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಕೇರಳದಲ್ಲಿ ಹೊಸ ವರ್ಷದ ಮುಂಚಿನ ದಿನದಂದು ಬೆವ್ಕೊದಲ್ಲಿ ಸಂಪೂರ್ಣ ಒಟ್ಟು ಮಾರಾಟವು 70.55 ಕೋಟಿ ರೂ ಆಗಿದೆ. ಈ ಕ್ರಿಸ್‌ಮಸ್ ಮುನ್ನಾದಿನದಂದು ಬೆವ್ಕೊ 65 ಕೋಟಿ ರೂ. ಮತ್ತು ಕನ್‌ಸ್ಯೂಮರ್‌ಫೆಡ್ 11.5 ಕೋಟಿ ರೂಪಾಯಿ ಮದ್ಯವನ್ನು ಖರೀದಿ ಮಾಡಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications