ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವೀಣ್ ರಾವ್ ಸಂಬಳ ವಿವಾದ: ಇನ್ಫಿ ಮೂರ್ತಿ ಬೆಂಬಲಕ್ಕೆ ನಿಂತ ಪೈ

ಇನ್ಫೋಸಿಸ್ ನ ಸಿಒಒ ಪ್ರವೀಣ್ ರಾವ್ ಗೆ ಸಿಕ್ಕಿರುವ ಸಂಬಳ ಏರಿಕೆ ಬಗ್ಗೆ ಚರ್ಚೆ ಮುಂದುವರೆದಿದೆ. ಸಹ ಸ್ಥಾಪಕ ಎನ್.ಆರ್ ನಾರಾಯಣಮೂರ್ತಿ ಅವರ ಪ್ರತಿಕ್ರಿಯೆಯನ್ನು ಮಾಜಿ ನಿರ್ದೇಶಕ ಟಿ.ವಿ ಮೋಹನ್ ದಾಸ್ ಪೈ ಸಮರ್ಥಿಸಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 04: ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ನ ಸಿಒಒ ಪ್ರವೀಣ್ ರಾವ್ ಗೆ ಸಿಕ್ಕಿರುವ ಸಂಬಳ ಏರಿಕೆ ಬಗ್ಗೆ ಚರ್ಚೆ ಮುಂದುವರೆದಿದೆ.

ಇನ್ಫೋಸಿಸ್ ಸಹ ಸ್ಥಾಪಕ ಎನ್.ಆರ್ ನಾರಾಯಣಮೂರ್ತಿ ಅವರು ಸಂಬಳ ಏರಿಕೆ ಬಗ್ಗೆ ನೀಡಿರುವ ಪ್ರತಿಕ್ರಿಯೆಯನ್ನು ಮಾಜಿ ನಿರ್ದೇಶಕ ಟಿ.ವಿ ಮೋಹನ್ ದಾಸ್ ಪೈ ಸಮರ್ಥಿಸಿದ್ದಾರೆ. ಯು.ಬಿ ಪ್ರವೀಣ್ ರಾವ್ ಅವರಿಗೆ ಕಾರ್ಯಕ್ಷಮತೆ ಆಧಾರದ ಮೇಲೆ ಇಷ್ಟು ದೊಡ್ಡ ಮೊತ್ತದ ಸಂಬಳ ಏರಿಕೆ ಸಾಧ್ಯವಿಲ್ಲ ಎಂದು ಪೈ ಹೇಳಿದ್ದಾರೆ.

ಇನ್ಫೋಸಿಸ್ ಸ್ಥಾಪಕರಲ್ಲಿ ಒಬ್ಬರಾದ ಎನ್.ಆರ್.ನಾರಾಯಣ ಮೂರ್ತಿ ಮತ್ತೊಮ್ಮೆ ತಮ್ಮ ಆಕ್ರೋಶ ಹೊರಹಾಕಿ, ಚೀಫ್ ಆಪರೇಟಿಂಗ್ ಆಫೀಸರ್ (ಸಿಒಒ) ಯು.ಬಿ.ಪ್ರವೀಣ್ ರಾವ್ ಅವರ ವೇತನ ಹೆಚ್ಚಳಕ್ಕೆ ನಿರ್ದೇಶಕರ ಮಂಡಳಿ ಒಪ್ಪಿಗೆ ಸೂಚಿಸಿರುವುದು 'ಸರಿಯಾಗಿಲ್ಲ' ಎಂದು ಅಭಿಪ್ರಾಯಪಟ್ಟಿದ್ದರು.

ಮೇಲ್ ಸ್ತರದವರಿಗೆ ಸಂಬಳ ಏರಿಕೆ

ಮೇಲ್ ಸ್ತರದವರಿಗೆ ಸಂಬಳ ಏರಿಕೆ

ಇದರಿಂದ ಉದ್ಯೋಗಿಗಳು ಆಡಳಿತ ವ್ಯವಸ್ಥೆ ಮತ್ತು ನಿರ್ದೇಶಕ ಮಂಡಳಿಯ ನಂಬಿಕೆ ಹಾಗೂ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ ಎಂದಿದ್ದರು.

ಆಡಳಿತ ಮಂಡಳಿಯಲ್ಲಿ ಮೇಲ್ ಸ್ತರದವರಿಗೆ ಶೇ 60ರಿಂದ 70ರಷ್ಟು ವೇತನ ಹೆಚ್ಚಳ ಮಾಡಿ, ಕಂಪೆನಿಯ ಇತರ ಉದ್ಯೋಗಿಗಳಿಗೆ ಶೇ 6-8ರಷ್ಟು ವೇತನ ಹೆಚ್ಚಳ ಮಾಡಿರುವುದು ನನ್ನ ಅಭಿಪ್ರಾಯದಲ್ಲಿ ಸರಿಯಲ್ಲ ಎಂದು ಎನ್ .ಆರ್ ನಾರಾಯಣ ಮೂರ್ತಿ ಅಭಿಪ್ರಾಯ ಪಟ್ಟಿದ್ದರು.

ಸಿಒಒ ಸಂಬಳ ಏರಿಕೆ ಏಕೆ?

ಸಿಒಒ ಸಂಬಳ ಏರಿಕೆ ಏಕೆ?

ಎಂಟ್ರಿ ಲೆವೆಲ್ ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಕಳೆದ 7 ವರ್ಷ ಗಳಿಂದ ಸಂಬಳ ಏರಿಕೆಯಾಗಿಲ್ಲ. ಅದರೆ, ಸಿಒಒಗೆ ಮಾತ್ರ ಸಂಬಳ ಏರಿಕೆ ಏಕೆ? ಮೂರ್ನಾಲ್ಕು ವರ್ಷಗಳ ಹಿಂದೆ 3.5 ರಿಂದ 4 ಕೋಟಿ ರು ಸಂಬಳ ಏರಿಕೆಯಾಗುತ್ತಿತ್ತು. ಈಗ ಏಕಾಏಕಿ 12 ಕೋಟಿ ರು ಗೆ ಏರಿಕೆ ಏಕೆ? ಎಂದು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವೀಸ್ ಸಂಸ್ಥೆ ಸ್ಥಾಪಕ ಮೋಹನ್ ದಾಸ್ ಪೈ ಹೇಳಿದ್ದಾರೆ.

ವಿಶಾಲ ಸಿಕ್ಕಾ ಟಾರ್ಗೆಟ್

ವಿಶಾಲ ಸಿಕ್ಕಾ ಟಾರ್ಗೆಟ್

ವಿಶಾಲ ಸಿಕ್ಕಾ ಕಂಪೆನಿಯ ಮೊದಲ ಸಂಸ್ಥಾಪಕೇತರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ. ಅವರು ಸುಮಾರು 6.7 ಕೋಟಿ ರೂಪಾಯಿ ಮೂಲ ವೇತನ ಪಡೆಯುತ್ತಾರೆ. 73.7 ಕೋಟಿಯಲ್ಲಿ ಉಳಿದ ಹಣ ಭತ್ಯೆ, ಲಾಭಾಂಶ ಮುಂತಾದ ರೂಪದಲ್ಲಿ ಅವರಿಗೆ ನೀಡಲಾಗುತ್ತದೆ.

ಪೈ ವಾದ

ಪೈ ವಾದ

ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ 3.5 ಲಕ್ಷ ರು ನೀಡಲಾಗುತ್ತಿದೆ. ಸಿಒಒಗೆ 13 ಕೋಟಿ ರು ಎಂದರೆ 400 ಪಟ್ಟು ಹೆಚ್ಚಳ, 7 ವರ್ಷಗಳಿಂದ ಸಂಬಳ ಏರಿಕೆ ಇಲ್ಲದೆ ಪರದಾಡುತ್ತಿರುವ ಇಂಜಿನಿಯರ್ ಗಳ ಪಾಡೇನು?

English summary
Backing Infosys co-founder N R Narayana Murthy's view that pay hike to COO U B Pravin Rao was "not proper," the company's ex-director T V Mohandas Pai today said the salary in this case is "spectacular" but performance is not.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X