ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗಾಗಿ ಕಾದಿರುವ ಯುಎಸ್ ನ ಟಾಪ್ ಸಿಇಒಗಳು

By Mahesh
|
Google Oneindia Kannada News

ನವದೆಹಲಿ, ಸೆ.25: ಇಡೀ ವಿಶ್ವವೇ ಎದುರು ನೋಡುತ್ತಿರುವ ಮೋದಿ ಅವರ ಅಮೆರಿಕ ಪ್ರವಾಸಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬೆಳಗ್ಗೆ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದಲ್ಲಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಅಮೆರಿಕ ಸಜ್ಜಾಗಿದೆ.

ಮೋದಿ ಅವರು ತಮ್ಮ ಐದು ದಿನಗಳ ಪ್ರವಾಸದ ವೇಳೆ ನ್ಯೂಯಾರ್ಕ್, ವಾಷಿಂಗ್ಟನ್ ಸೇರಿ ಅಮೆರಿಕ ಪ್ರಮುಖ ನಗರಗಳಲ್ಲಿ ಸಂಚರಿಸಲಿದ್ದಾರೆ. ಈ ಅವಧಿಯಲ್ಲಿ 50ಕ್ಕೂ ಹೆಚ್ಚು ಕಾರ್ಯಕ್ರಮ, ಸಂದರ್ಶನ, ಸಭೆ ನಡೆಸಲಿದ್ದಾರೆ.ಮೋದಿ ಭೇಟಿಗಾಗಿ ಗೂಗಲ್, ಬೋಯಿಂಗ್, ಜನರಲ್ ಎಲೆಕ್ಟ್ರಿಕ್ ಸೇರಿದಂತೆ 15ಕ್ಕೂ ಅಧಿಕ ಟಾಪ್ ಕಾರ್ಪೊರೇಟ್ ದಿಗ್ಗಜರು ಕಾದಿದ್ದಾರೆ. [ಯುಎಸ್ ಪ್ರವಾಸದ ವೇಳಾಪಟ್ಟಿ]

ಅಮೆರಿಕ ಪ್ರವಾಸದ ವೇಳೆ ಉಭಯ ನಾಯಕರು ಆರ್ಥಿಕ ಪ್ರಗತಿ, ರಕ್ಷಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಸಿರಿಯಾ, ಅಫ್ಘಾನಿಸ್ತಾನ, ಇರಾಕ್‌ನಲ್ಲಿನ ಪ್ರಸ್ತುತ ಬೆಳವಣಿಗೆಗಳ ಕುರಿತು ಅವರು ಮೋದಿ ಮತ್ತು ಒಬಾಮಾ ಮಾತುಕತೆ ನಡೆಸುವ ಸಾಧ್ಯತೆ ಇದೆ. ಸೆ.29ರಂದು ಸುಮಾರು 11 ಟಾಪ್ ಕಾರ್ಪೊರೇಟ್ ದಿಗ್ಗಜರನ್ನು ಮೋದಿ ಉಪಹಾರ ಸಮಯದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ನಂತರ ನ್ಯೂಯಾರ್ಕ್ ನಲ್ಲಿ ಐದಾರು ಪ್ರಮುಖ ಕಂಪನಿಗಳ ಪ್ರತಿನಿಧಿಗಳ ಜೊತೆ ಮುಖಾ ಮುಖಿ ಚರ್ಚೆ ನಡೆಸಲಿದ್ದಾರೆ.

Modi to hold talks with over 15 top US corporate honchos

ಮೋದಿ ಭೇಟಿಗಾಗಿ ಕಾದಿರುವವರ ಪಟ್ಟಿಯಲ್ಲಿ ಗೂಗಲ್ ಕಾರ್ಯಕಾರಿ ಚೇರ್ಮನ್ ಎರಿಕ್ ಇ ಸ್ಕ್ಮಿಟ್, Carlyle ಗ್ರೂಪ್ ಸಹ ಸ್ಥಾಪಕ ಡೇವಿಡ್ ರುಬೆನ್ ಸ್ಟೈನ್, ಕಾರ್ಗಿಲ್ ಅಧ್ಯಕ್ಷ ಸಿಇಒ ಡೇವಿಡ್ ಮೆಕ್ ಲೆನ್ನನ್, ಮೆರ್ಕ್ ಅಂಡ್ ಕೋ ಸಿಇಒ ಕೆನ್ನತ್ ಸಿ ಫ್ರಾಜರ್ ಹೊಸ್ಪಿರಾ ಚೇರ್ಮನ್ ಜಾನ್ ಸಿ ಸ್ಟ್ಯಾಲೆ, ಸಿಟಿ ಗ್ರೂಪ್ ಸಿಇಒ ಮೈಕಲ್ ಎಲ್ ಕೊರ್ಬಾಟ್, ಕ್ಯಾಟರ್ ಪಿಲ್ಲರ್ ಚೇರ್ಮರ್ ಡಾಫ್ ಓಬೆರ್ ಹೆಲ್ಮನ್, ಮಾಸ್ಟರ್ ಕಾರ್ಡ್ ಅಧ್ಯಕ್ಷ ಅಜಯ್ ಬಂಗಾ(ಭಾರತೀಯ ಮೂಲದವರು) ಹಾಗೂ ಪೆಪ್ಸಿ ಕೋ ಸಿಇಒ ಇಂದ್ರಾ ನೂಯಿ(ಭಾರತೀಯ ಮೂಲದವರು) ಇದ್ದಾರೆ.

ಇವರಲ್ಲದೆ ಗೋಲ್ಡ್ ಮನ್ ಸಾಚ್ಸ್ ಚೇರ್ಮನ್, ಸಿಇಒ ಲಾಯ್ಡ್ ಸಿ ಬ್ಲಾಕ್ ಫೈನ್, ಬೋಯಿಂಗ್ ಚೇರ್ಮನ್ ಡಬ್ಲ್ಯೂ ಜೇಮ್ಸ್ ಮೆಕ್ ನೆರ್ನೆ ಜ್ಯೂ, ಬ್ಲಾಕ್ ರಾಕ್ ಚೇರ್ಮನ್, ಸಿಇಒ ಡಿ ಫಿಂಕ್, ಐಬಿಎಂ ಚೇರ್ಮನ್, ಸಿಇಒ ಗಿನ್ನಿ ರೋಮೆಟ್ಟಿ, ಜನರಲ್ ಎಲೆಕ್ಟ್ರಿಕ್ ಚೇಮನ್ ಜೆಫ್ ಇಮ್ಮೆಲ್ಟ್ ಮುಂತಾದವರಿದ್ದಾರೆ.

ಸೆ.25ರಂದು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿ ವಿಶ್ವದ 500 ಕಂಪನಿಗಳನ್ನು ಸೆಳೆದಿರುವ ಪ್ರಧಾನಿ ಮೋದಿ ಅವರು ತಮ್ಮ ಅಮೆರಿಕ ಪ್ರವಾಸದ ವೇಳೆ ಭಾರತಕ್ಕೆ ಇನ್ನಷ್ಟು ಕಂಪನಿಗಳನ್ನು ಕರೆ ತರುವ ಇರಾದೆ ಹೊಂದಿದ್ದಾರೆ. ಮೋದಿ ಎಂಬ ಮಹಾನ್ ವ್ಯವಹಾರಸ್ಥನ ಮಾತು ಕೇಳಲು ಅಮೆರಿಕದ ಉದ್ಯಮಿಗಳು ಕಾದು ಕುಳಿತಿರುವುದಂತೂ ನಿಜ. (ಪಿಟಿಐ)

English summary
In a power-packed business meeting schedule in the US, Prime Minister Narendra Modi will hold talks with over 15 top American corporate honchos during his visit to the US, , including top executives of Google, Boeing and General Electric as India looks to attract more overseas investments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X