ಸಾಫ್ಟ್ ವೇರ್ ಡೆವಲಪರ್ ಗಳಿಗೆ ಸಂಚಲನ ಮೂಡಿಸಿದ ಮೈಕ್ರೋಸಾಫ್ಟ್
ಬೆಂಗಳೂರು, ಜೂನ್ 04: ಸಾಫ್ಟ್ ವೇರ್ ಡೆವಲಪರ್ ಗಳಿಗೆ ಸಂಚಲನ ಮೂಡುವಂಥ ಸುದ್ದಿಯೊಂದು ಸಾಫ್ಟ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ ಕಡೆಯಿಂದ ಬಂದಿದೆ. ಸಾಫ್ಟ್ ವೇರ್ ಡೆವಲಪರ್ ಗಳಿಗೆ ಮುಕ್ತ ವೇದಿಕೆ ಒದಗಿಸುತ್ತಿದ್ದ ಗಿಟ್ ಹಬ್ ಖರೀದಿಸಲು ಮೈಕ್ರೋಸಾಫ್ಟ್ ಮುಂದಾಗಿದೆ.
2015ರ ಮಾರುಕಟ್ಟೆ ಮೌಲ್ಯದಂತೆ ಗಿಟ್ ಹಬ್ 2 ಬಿಲಿಯನ್ ಡಾಲರ್ ನಷ್ಟಿತ್ತು. ಈಗ ಗಿಟ್ ಹಬ್ ಅನ್ನು 7.5 ಬಿಲಿಯನ್ ಡಾಲರ್ ಡೀಲ್ ಮೌಲ್ಯಕ್ಕೆ ಮಾರಾಟವಾಗುವ ನಿರೀಕ್ಷೆಯಿದೆ.
ಸಾಫ್ಟ್ ವೇರ್ ಡೆವಲಪರ್ ಗಳ ಸ್ವತಂತ್ರ, ಮುಕ್ತ, ಸೃಜನಶೀಲತನಕ್ಕೆ ಭಂಗ ಬರದಂತೆ ಗಿಟ್ ಹಬ್ ಉಳಿಸಿ ಬೆಳೆಸಲು ಮೈಕ್ರೋಸಾಫ್ಟ್ ಬದ್ಧವಾಗಿದೆ ಎಂದು ಸಿಇಒ ಸತ್ಯ ನಾದೆಲ್ಲಾ ಹೇಳಿದ್ದಾರೆ.

ಮೈಕ್ರೋಸಾಫ್ಟ್ ಜತೆ ಕೈಜೋಡಿಸುತ್ತಿರುವುದರಿಂದ ಡೆವಲಪರ್ ಗಳಿಗೆ ಉತ್ತಮ ಅವಕಾಶ ಸಿಗಲಿದೆ ಎಂದು ಗಿಟ್ ಹಬ್ ಸ್ಥಾಪಕ ಕ್ರಿಸ್ ವಾನ್ಸ್ ಟ್ರಾಥ್ ಹೇಳಿದ್ದಾರೆ.
ಗಿಟ್ ಹಬ್ ನಲ್ಲಿ ಕೋಡ್, ಅಪ್ಡೇಟ್, ಡೆವಲಪಿಂಗ್ ಸಮಸ್ಯೆ ಬಗ್ಗೆ ಮುಕ್ತವಾಗಿ ಚರ್ಚೆಯಾಗುತ್ತಿತ್ತು. 23 ಮಿಲಿಯನ್ ಗೂ ಅಧಿಕ ಬಳಕೆದಾರರು ಇದರಲ್ಲಿದ್ದಾರೆ. ಈಗ ಗಿಟ್ ಹಬ್ ನ ಆರ್ಥಿಕ ಅವ್ಯವಹಾರಗಳು ಮೈಕ್ರೋಸಾಫ್ಟ್ ನ ಇಂಟಲಿಜೆಂಟ್ ಕ್ಲೌಂಡ್ ವಿಭಾಗಕ್ಕೆ ಒಳಪಡಲಿದೆ.












Click it and Unblock the Notifications