• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏನಿದು ಮರ್ಸಿಡಿಸ್-ಬೆಂಜ್ ಇಂಡಿಯಾ‘ಡ್ರೀಮ್‍ಫೆಸ್ಟ್' ಅಭಿಯಾನ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ಭಾರತದ ಅತಿದೊಡ್ಡ ಐಷಾರಾಮಿ ಕಾರು ತಯಾರಕಾ ಸಂಸ್ಥೆಯು ಅದೃಷ್ಟಶಾಲಿ ವಿಜೇತನಿಗೆ ಎಫ್ 1 ರೇಸ್ ಚಾಂಪಿಯನ್ ಲೆವಿಸ್ ಹ್ಯಾಮಿಲ್ಟನ್ ಅವರನ್ನು ಭೇಟಿ ಮಾಡುವ ಅವಕಾಶ ಮತ್ತು ಹಣಕಾಸಿನ ಪ್ರಯೋಜನಗಳನ್ನು ಒಳಗೊಂಡ ಅತ್ಯಾಕರ್ಷಕ ಕೊಡುಗೆಗಳನ್ನು ಪರಿಚಯಿಸಿದೆ.

ಐಷಾರಾಮಿ ಕಾರು ತಯಾರಿಸುವ ಭಾರತದ ಅತಿದೊಡ್ಡ ಕಂಪನಿಯಾಗಿರುವ ಮರ್ಸಿಡಿಸ್ ಬೆಂಜ್, ವಿಲಾಸಿ ಕಾರ್ ಖರೀದಿಸುವ, ಮರ್ಸಿಡಿಸ್ ಬೆಂಜ್‍ನ ಮಾಲೀಕರಾಗಲು ಇಚ್ಛಿಸುವವರ ಹಬ್ಬದ ಸಂಭ್ರಮ ಹೆಚ್ಚಿಸಲು ಆಕರ್ಷಕ ಕೊಡುಗೆಗಳ ಹಣಕಾಸು ಪ್ರಯೋಜನಗಳನ್ನು ಒಳಗೊಂಡಿರುವ 'ಡ್ರೀಮ್‍ಫೆಸ್ಟ್' ಅಭಿಯಾನಕ್ಕೆ ಇಂದು ಚಾಲನೆ ನೀಡಿದೆ.

ಈ ಉಪಕ್ರಮವು ಮರ್ಸಿಡಿಸ್ ಬೆಂಜ್ ಫೈನಾನ್ಶಿಯಲ್‍ನಿಂದ ಹಣಕಾಸು ಆಯ್ಕೆಗಳ ಒಂದು ದೊಡ್ಡ ಅನುಕೂಲತೆಗಳನ್ನು ಒಳಗೊಂಡಿದೆ. ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ, ವಿಶೇಷವಾದ 10 ವರ್ಷಗಳ ಅವಧಿಯ ಕಡಿಮೆ ಮೊತ್ತದ ಸಮಾನ ಮಾಸಿಕ ಕಂತು (ಇಎಂಐ) ಹಾಗೂ ಮರ್ಸಿಡಿಸ್ ಬೆಂಜ್ ಮಾಲೀಕರಿಗೆ ರಿಯಾಯಿತಿ ಇಎಂಐಗಳೊಂದಿಗೆ ಹೊಸ ಮಾದರಿಗಳಿಗಾಗಿ ಹಳೆಯ ಕಾರುಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುವವರಿಗೆ ಮರು ಖರೀದಿಯ ಭರವಸೆಯನ್ನು ಈ ಕೊಡುಗೆಯು ಒಳಗೊಂಡಿದೆ.

‘ಡ್ರೀಮ್‍ಫೆಸ್ಟ್' 2021ರ ಅಕ್ಟೋಬರ್ 31ರವರೆಗೆ ಅನ್ವಯ

‘ಡ್ರೀಮ್‍ಫೆಸ್ಟ್' 2021ರ ಅಕ್ಟೋಬರ್ 31ರವರೆಗೆ ಅನ್ವಯ

ಎ-ಕ್ಲಾಸ್ ಲಿಮೋಸಿನ್, ಜಿಎಲ್‍ಎ, ಜಿಎಲ್‍ಸಿ ಮತ್ತು ಇ-ಕ್ಲಾಸ್ ಸೇರಿದಂತೆ ಮರ್ಸಿಡಿಸ್ ಬೆಂಜ್‍ನ ಆಯ್ದ ಮಾದರಿಗಳ ಖರೀದಿಗೆ ‘ಡ್ರೀಮ್‍ಫೆಸ್ಟ್' 2021ರ ಅಕ್ಟೋಬರ್ 31ರವರೆಗೆ ಅನ್ವಯವಾಗಲಿದೆ. ಇದರ ಜೊತೆಯಲ್ಲಿ, ಮರ್ಸಿಡಿಸ್ ಅದೃಷ್ಟಶಾಲಿ ಡ್ರಾ ವಿಜೇತರಿಗೆ, ಏಳು ಬಾರಿ ಫಾರ್ಮುಲಾ 1 ವಿಶ್ವ ಚಾಂಪಿಯನ್ ಆಗಿರುವ ಲೆವಿಸ್ ಹ್ಯಾಮಿಲ್ಟನ್ ಅವರನ್ನು ಭೇಟಿಯಾಗುವ ಅವಕಾಶವನ್ನು ಒದಗಿಸುತ್ತದೆ. ಜೊತೆಗೆ ಅಬುಧಾಬಿಯಲ್ಲಿ ನಡೆಯುವ ಫಾರ್ಮುಲಾ1ರ ಈ ಋತುವಿನ ಅಂತಿಮ ಸ್ಪರ್ಧೆ ವೀಕ್ಷಿಸಲು ಪ್ರಯಾಣ ವೆಚ್ಚವನ್ನೆಲ್ಲವನ್ನು ಭರಿಸಲಾಗುವುದು. ಈ ಕೊಡುಗೆಯ ಅಂಗವಾಗಿ ಎಫ್1 ಪ್ಯಾಡಾಕ್ ಕ್ಲಬ್ ಸೇರ್ಪಡೆಯ ಅವಕಾಶ ನೀಡಲಾಗುವುದು. ಪರೀಕ್ಷಾರ್ಥ ಚಾಲನೆಯ ಬುಕಿಂಗ್ ಮಾಡಿದವರು ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡುವ ಲಕ್ಕಿ ಡ್ರಾಗೆ ಅರ್ಹತೆ ಪಡೆಯಲಿದ್ದಾರೆ.

 ಸಿಇಒ ಮಾರ್ಟಿನ್ ಶ್ವೆಂಕ್ ಪ್ರತಿಕ್ರಿಯಿಸಿ

ಸಿಇಒ ಮಾರ್ಟಿನ್ ಶ್ವೆಂಕ್ ಪ್ರತಿಕ್ರಿಯಿಸಿ

ಮರ್ಸಿಡಿಸ್-ಬೆಂಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್ ಶ್ವೆಂಕ್ ಪ್ರತಿಕ್ರಿಯಿಸಿ, ‘ಆರ್ಥಿಕ ಚಟುವಟಿಕೆಗಳಲ್ಲಿನ ಕ್ರಮೇಣ ಚೇತರಿಕೆಯೊಂದಿಗೆ, ಪುಟಿದೇಳಲಿರುವ ಗ್ರಾಹಕರ ಖರೀದಿ ಉತ್ಸಾಹ ಹೆಚ್ಚಿಸಲು ಮುಂಬರುವ ಹಬ್ಬದ ಋತುವು ಪ್ರಮುಖ ಪಾತ್ರವಹಿಸಲಿದೆ. ಮರ್ಸಿಡಿಸ್ ಬೆಂಜ್‍ನ ‘ಡ್ರೀಮ್‍ಫೆಸ್ಟ್' ಹಬ್ಬದ ಅಭಿಯಾನವು, ಹಬ್ಬಗಳ ಶುಭ ಸಂದರ್ಭದಲ್ಲಿ ಮರ್ಸಿಡಿಸ್ ಬೆಂಜ್ ಕಾರ್‍ಗಳನ್ನು ಖರೀದಿಸಲು ಇಚ್ಛಿಸುವ ಅರ್ಹ ಗ್ರಾಹಕರಿಗೆ ಅತ್ಯಾಕರ್ಷಕ ಆಯ್ಕೆಗಳನ್ನು ನೀಡುತ್ತದೆ. ಈ ಆಕರ್ಷಕ ಕೊಡುಗೆಗಳು ನಮ್ಮ ಗ್ರಾಹಕರಿಗೆ ಅವರ ಖರೀದಿ ನಿರ್ಧಾರಕ್ಕೆ ಸಹಾಯ ಮಾಡಲಿವೆ. ಜೊತೆಗೆ ಅವರಿಗೆ ಅಪಾರ ಮೌಲ್ಯವನ್ನು ನೀಡುತ್ತವೆ ಎನ್ನುವುದರ ಬಗ್ಗೆ ನಮಗೆ ದೃಢ ವಿಶ್ವಾಸವಿದೆ' ಎಂದು ಹೇಳಿದ್ದಾರೆ.

ಎರಡು ಅಂಕಿಯ ಮಾರಾಟ ಬೆಳವಣಿಗೆ

ಎರಡು ಅಂಕಿಯ ಮಾರಾಟ ಬೆಳವಣಿಗೆ

‘ಜನವರಿಯಿಂದ ಆಗಸ್ಟ್ ಅವಧಿಯಲ್ಲಿ ಮರ್ಸಿಡಿಸ್ ಬೆಂಜ್ ಪ್ರಬಲವಾದ ಎರಡು ಅಂಕಿಯ ಮಾರಾಟ ಬೆಳವಣಿಗೆಯೊಂದಿಗೆ ವಿ-ಆಕಾರದ ಚೇತರಿಕೆಗೆ ಸಾಕ್ಷಿಯಾಗಿದೆ. ಈ ವರ್ಷ ಬಿಡುಗಡೆಯಾಗಿರುವ 11 ಹೊಸ ಉತ್ಪನ್ನಗಳನ್ನು ಒಳಗೊಂಡ ಅತ್ಯಾಕರ್ಷಕ ಮಾದರಿಗಳು ಮತ್ತು ಇನ್ನೂ ಹೊಸದಾಗಿ ಪರಿಚಯಿಸಲಿರುವ ಹೊಸ ಮಾದರಿಗಳು ನಮ್ಮ ಗ್ರಾಹಕರಲ್ಲಿ ಖರೀದಿ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲಿವೆ. ನಮ್ಮ ಕಾರುಗಳಿಗೆ ಹೆಚ್ಚಿದ ಬೇಡಿಕೆಯು ಕಾಯುವ ಅವಧಿಗೆ ಕಾರಣವಾಗಿದೆ. ಇದನ್ನು ಈಗ ಕೆಲವು ಕಾರ್‌ಗಳಿಗೆ 8 ರಿಂದ 16 ವಾರಗಳವರೆಗೆ ವಿಸ್ತರಿಸಲಾಗಿದೆ' ಎಂದೂ ಶ್ವೆಂಕ್ ಹೇಳಿದ್ದಾರೆ.

ಪ್ರಚಾರ ಅಭಿಯಾನದ ಅಡಿಯಲ್ಲಿ ಪ್ರಮುಖ ಕೊಡುಗೆ

ಪ್ರಚಾರ ಅಭಿಯಾನದ ಅಡಿಯಲ್ಲಿ ಪ್ರಮುಖ ಕೊಡುಗೆ

‘ಡ್ರೀಮ್‍ಫೆಸ್ಟ್' ಪ್ರಚಾರ ಅಭಿಯಾನದ ಅಡಿಯಲ್ಲಿ ಪ್ರಮುಖ ಕೊಡುಗೆಗಳು
• ರೇಸಿಂಗ್ ದಂತಕಥೆ ಲೆವಿಸ್ ಹ್ಯಾಮಿಲ್ಟನ್ ಅವರನ್ನು ಭೇಟಿ ಮಾಡುವ ಅವಕಾಶ ದೊರೆಯಲಿದೆ ಮತ್ತು ಅಬುಧಾಬಿಯ ಫಾರ್ಮುಲಾ 1 ರೇಸ್‍ಗೆ ಎಲ್ಲಾ-ವೆಚ್ಚಗಳನ್ನು ಭರಿಸುವ ಪ್ರವಾಸ ಸೌಲಭ್ಯ
• ಕಾರ್ ಬುಕ್ ಮಾಡಲು ವಿಶೇಷ ಲಕ್ಕಿ ಡ್ರಾ ಸ್ಪರ್ಧೆ
• ಅದೃಷ್ಟಶಾಲಿ ವಿಜೇತರು, ಅಬುಧಾಬಿ ಫಾರ್ಮುಲಾ 1 ರೇಸ್ ವೀಕ್ಷಿಸಲು ಎಲ್ಲಾ ವೆಚ್ಚಗಳನ್ನು ಭರಿಸುವ ಪ್ರವಾಸ ಸೌಲಭ್ಯಕ್ಕೆ ಅರ್ಹರಾಗುವರು
• ವಿಜೇತರು ಪ್ಯಾಡಾಕ್ ಕ್ಲಬ್‍ಗೆ ವಿಶೇಷ ಪ್ರವೇಶ ಪಡೆಯುತ್ತಾರೆ. ಇದು ಲೆವಿಸ್ ಹ್ಯಾಮಿಲ್ಟನ್ ಅವರನ್ನು ಭೇಟಿ ಮಾಡಲು ಅವಕಾಶ ನೀಡುತ್ತದೆ
• ಯಾವುದೇ ಅನಿರೀಕ್ಷಿತ ಪ್ರಯಾಣ ನಿರ್ಬಂಧಗಳಿದ್ದಲ್ಲಿ ವಿಜೇತರಿಗೆ ತೃಪ್ತಿದಾಯಕವಾದ ರೂ 10 ಲಕ್ಷ ನೀಡಲಾಗುವುದು

ಮರ್ಸಿಡಿಸ್ ಬೆಂಜ್ ಫೈನಾನ್ಶಿಯಲ್‍ನಿಂದ ಅನುಕೂಲಕರ ಹಣಕಾಸು ಆಯ್ಕೆ ಸೌಲಭ್ಯ ಹೀಗಿವೆ
1. ಶೇ 6.99ರಷ್ಟು ಕಡಿಮೆ ಬಡ್ಡಿ ದರ
2. ಈಸಿ10: ವಿಶೇಷ 10 ವರ್ಷಗಳ ಅವಧಿಯ ಕಡಿಮೆ ಸಮಾನ ಮಾಸಿಕ ಕಂತುಗಳು (ಇಎಂಐ) ಇಎಂಐಗಳು
3. ಸ್ಟಾರ್ ಎಜಿಲಿಟಿ: ಶೇ 40ಕ್ಕಿಂತ ಕಡಿಮೆ ಇಎಂಐಗಳೊಂದಿಗೆ ಖಾತರಿಪಡಿಸಿದ ಮರುಪಾವತಿ

ಮರ್ಸಿಡಿಸ್ ಬೆಂಜ್ ಸ್ಟುಡಿಯೊ

ಮರ್ಸಿಡಿಸ್ ಬೆಂಜ್ ಸ್ಟುಡಿಯೊ

ಮರ್ಸಿಡಿಸ್ ಬೆಂಜ್ ಇಂಡಿಯಾ, ತನ್ನದೇ ಆದ ವಿಶಿಷ್ಟ ಬಗೆಯ ‘ಮರ್ಸಿಡಿಸ್ ಬೆಂಜ್ ಸ್ಟುಡಿಯೊ' ಆರಂಭಿಸಿದೆ. ಇದು ಗ್ರಾಹಕರ ಕೋರಿಕೆಯಂತೆ ಅವರು ಇಷ್ಟಪಡುವ ಬಣ್ಣಗಳ ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಿದೆ. ಜೊತೆಗೆ ಇತರ ಸೇವಾ ಕೊಡುಗೆಗಳೂ ಇಲ್ಲಿ ಲಭ್ಯ ಇರಲಿವೆ.

ಗ್ರಾಹಕರ ವ್ಯಕ್ತಿಗತ ಅಗತ್ಯಗಳನ್ನು ಪೂರೈಸುವ ಸೌಲಭ್ಯಗಳನ್ನು ಈ ಮರ್ಸಿಡಿಸ್ ಬೆಂಜ್ ಸ್ಟುಡಿಯೊ ಒಳಗೊಂಡಿದೆ:
• ಕಸ್ಟಮೈಸ್ ಕಲರಿಂಗ್ | ಅದೇ ಬಣ್ಣದ ಮರು ಬಣ್ಣ | ಎರಡು ಟೋನ್ ಬಣ್ಣದ, ಕಪ್ಪು ಆವೃತ್ತಿ ಇತ್ಯಾದಿ
• ಸಾಲಿಡ್ ಪೇಂಟ್, ಮೆಟ್ಯಾಲಿಕ್ ಪೇಂಟ್, ಪರ್ಲ್ ಫಿನಿಷ್, ಡೆಸಿಂಗೊ ಮ್ಯಾಟ್ ಫಿನಿಷ್ ಮುಂತಾದವು
• ಸ್ವಂತದ ಮರ್ಸಿಡಿಸ್ ಬೆಂಜ್ ಕಾರುಗಳ ನವೀಕರಣ ಮತ್ತು ಮರುಸ್ಥಾಪನೆ
• ಬಾಗಿಲು ಪ್ಯಾಡ್, ಆಸನ ಇತ್ಯಾದಿಗಳನ್ನು ಒಳಗೊಂಡ ಒಳ ಆವರಣದ ವಿಶೇಷ ಬಣ್ಣದ ಸೇವೆ
• ಮರ್ಸಿಡಿಸ್ ನೋನಾ ಪಾಲಿಷ್, ಪೇಂಟ್ ನಿರ್ವಹಣೆ ಪರಿಹಾರಗಳು ಮತ್ತು ಮರ್ಸಿಡಿಸ್ ಬೆಂಜ್ ಕಾರ್ ಕೇರ್ ಉತ್ಪನ್ನಗಳು
• ವ್ಯಾಪಕ ಶ್ರೇಣಿಯ ಕಾರ್ ಕೇರ್ ಉತ್ಪನ್ನಗಳನ್ನು ಒದಗಿಸಲಿದೆ. ಗ್ರಾಹಕರು ತಮ್ಮ ಕಾರಿನ ಸೇವೆಯ ಸಮಯದಲ್ಲಿ ಉತ್ಕøಷ್ಟಗೊಳಿಸುವ ಕೊಡುಗೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಒದಗಿಸಲಿದೆ
• ಡಿಐವೈ ಕಾರ್ ಕೇರ್ ಉತ್ಪನ್ನಗಳ ಪ್ರಾತ್ಯಕ್ಷಿಕೆ (ಒಳಾಂಗಣ ಮತ್ತು ಬಾಹ್ಯ ಕಿಟ್‍ಗಳು)
• ಬಿಡಿಭಾಗಗಳ ಆಯ್ಕೆಯ ಪ್ರದರ್ಶನ

ಸುಂದರಂ ಮೋಟರ್ಸ್ ಜೊತೆಗಿನ ಬೆಂಜ್ ಪಾಲುದಾರಿಕೆ

ಸುಂದರಂ ಮೋಟರ್ಸ್ ಜೊತೆಗಿನ ಬೆಂಜ್ ಪಾಲುದಾರಿಕೆ

ಸುಂದರಂ ಮೋಟರ್ಸ್ ಜೊತೆಗಿನ ಮರ್ಸಿಡಿಸ್ ಬೆಂಜ್ ಇಂಡಿಯಾದ 20 ವರ್ಷಗಳ ಪಾಲುದಾರಿಕೆ : ಈ ಪಾಲುದಾರಿಕೆ ಬಗ್ಗೆ ಮಾರ್ಟಿನ್ ಶ್ವೆಂಕ್ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ- ‘ಸುಂದರಂ ಮೋಟರ್ಸ್ ಜೊತೆಗಿನ ಪಾಲುದಾರಿಕೆಯು ಒಂದು ಮಹತ್ವದ ಮೈಲುಗಲ್ಲಾಗಿದೆ. ಗ್ರಾಹಕ ಕೇಂದ್ರಿತ ಸಮಾನ ದೃಷ್ಟಿಕೋನದ ಇಂತಹ ದೀರ್ಘಕಾಲದ ಪಾಲುದಾರರನ್ನು ಹೊಂದಲು ನಮಗೆ ಅತೀವ ಸಂತೋಷವಾಗುತ್ತದೆ. ಮರ್ಸಿಡಿಸ್ ಬೆಂಜ್ ಬ್ರ್ಯಾಂಡ್‍ನ ಬೆಳವಣಿಗೆಯಲ್ಲಿ ಸುಂದರಂ ಮೋಟರ್ಸ್ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ಅವರ ನಿಷ್ಕಳಂಕವಾದ ಗ್ರಾಹಕ ಅನುಭವದೊಂದಿಗೆ ನಿಷ್ಠಾವಂತ ಗ್ರಾಹಕರ ದೊಡ್ಡ ಪಡೆಯನ್ನೇ ಸೃಷ್ಟಿಸಿದೆ' ಎಂದು ಹೇಳಿದ್ದಾರೆ.

ಟಿವಿಎಸ್ ಸುಂದರಂ ಮೋಟರ್ಸ್‍ನ ಕಾರ್ಯನಿರ್ವಾಹಕ ನಿರ್ದೇಶಕ ಶರತ್ ವಿಜಯರಾಘವನ್ ಅವರು ಮಾತನಾಡಿ, ‘ಜಾಗತಿಕ ವಾಹನ ಉದ್ದಿಮೆಯಲ್ಲಿ ಅತ್ಯಂತ ಅಪ್ರತಿಮ ಮತ್ತು ಅಪೇಕ್ಷಣೀಯ ಬ್ರ್ಯಾಂಡ್ ಆಗಿರುವ ಮರ್ಸಿಡಿಸ್ ಬೆಂಜ್ ಜೊತೆಗಿನ ನಮ್ಮ ಒಡನಾಟದ ಎರಡು ದಶಕಗಳನ್ನು ಪೂರೈಸುತ್ತಿರುವುದಕ್ಕೆ ನಮಗೆ ಅಪಾರ ಸಂತೋಷವಾಗುತ್ತಿದೆ. ನಮ್ಮ ಗ್ರಾಹಕ-ಕೇಂದ್ರಿತ ವಿಧಾನವು, ನಿರಂತರವಾಗಿ ಬೆಳೆಯುತ್ತಿರುವ ವಾಹನ ಉದ್ದಿಮೆಯ ವ್ಯವಹಾರದಲ್ಲಿ ನಮ್ಮ ದೀರ್ಘಕಾಲೀನ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ನಮ್ಮ ಹೆಜ್ಜೆ ಗುರುತನ್ನು ಸ್ಥಿರವಾಗಿ ಬೆಳೆಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಈ ಎಲ್ಲಾ ವರ್ಷಗಳಲ್ಲಿ ನಾವು ಗ್ರಾಹಕರ ಮೊದಲ ಆದ್ಯತೆಯಾಗಿ ಉಳಿದಿದ್ದೇವೆ. ಈ ಸಾಧನೆಯ ಮಹತ್ವದ ಮೈಲುಗಲ್ಲನ್ನು ಗುರುತಿಸಲು, ನಾವು ‘ಸುಂದರಂ ಸಿಗ್ನೇಚರ್ ಸರ್ವೀಸಸ್" ಧ್ಯೇಯದಡಿ ಹೊಸ ಗ್ರಾಹಕ ಉಪಕ್ರಮಗಳ ದೊಡ್ಡ ಪಟ್ಟಿಯನ್ನೇ ಘೋಷಿಸುತ್ತಿದ್ದೇವೆ. ನಾವು ನಮ್ಮ ಬೆಳವಣಿಗೆ ಮತ್ತು ಮಾರುಕಟ್ಟೆಯಲ್ಲಿ ಯಶಸ್ಸನ್ನು ಸಾಧಿಸುವ ನಮ್ಮ ಗ್ರಾಹಕರ ಮಾಲೀಕತ್ವದ ಅನುಭವಕ್ಕೆ ಸರಿಸಾಟಿಯಿಲ್ಲದ ಮೌಲ್ಯವನ್ನು ಅದು ನೀಡುತ್ತದೆ' ಎಂದು ಹೇಳಿದ್ದಾರೆ.

English summary
Mercedes-Benz has launched an exciting new campaign for its Indian customers called the Dreamfest campaign. The Dreamfest campaign aims to attract prospective customers by offering attractive finance packages, buyback programmes, and low EMIs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X