ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Maruti Suzuki : ತನ್ನ 17,362 ವಾಹನಗಳನ್ನು ಹಿಂಪಡೆಯಲಿದೆ, ಕಾರಣವೇನು ಗೊತ್ತೇ?

|
Google Oneindia Kannada News

ನವದೆಹಲಿ, ಜನವರಿ 18: ಭಾರತದಲ್ಲಿನ ಅತಿ ದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿಯು ತನ್ನ ಎಲ್ಲ ಮಾದರಿಯ ವಾಹನಗಳ ಬೆಲೆಯನ್ನು ಸುಮಾರು 1.1 ಪ್ರತಿಶತ ಹೆಚ್ಚಿಸಿದ ಬೆನ್ನಲ್ಲೆ ತಾನು ತಯಾರಿಸಿದ 17,362 ಕಾರುಗಳನ್ನು ಹಿಂಪಡೆಯುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.

ಮಾರುತಿ ಸುಜುಕಿ ಕಂಪನಿಯು ತನ್ನ ಏಳು ಮಾದರಿಯ ಕಾರ್‌ಗಳನ್ನು ಹಿಂಪಡೆಯುವುದಾಗಿ ತಿಳಿಸಿದೆ. ಆಲ್ಟೊ ಕೆ10, ಎಸ್‌-ಪ್ರೆಸ್ಸೊ,ಬ್ರೆಜ್ಜಾ,ಬಲೆನೋ, ಗ್ರ್ಯಾಂಡ್ ವಿಟಾರಾ ಮತ್ತು ಇಕೋ ಮಾದರಿಯ ಕಾರ್‌ಗಳನ್ನು ಹಿಂಪಡೆಯಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದೆ. ಕಾರ್‌ ಉತ್ಪಾದಕ ಸಂಸ್ಥೆಯ ಈ ತುರ್ತು ನಿರ್ಧಾರ ಗ್ರಾಹಕರಲ್ಲಿ ಪ್ರಶ್ನಾರ್ಥಕವಾಗಿ ಉಳಿದುಕೊಂಡಿದೆ.

ಕರ್ನಾಟಕ: ಸ್ಟಾರ್ಟಪ್ ನೀತಿಗೆ ಸಂಪುಟ ಅಸ್ತು: 10,000 ಕಂಪನಿ ಸ್ಥಾಪನೆ ಗುರಿಕರ್ನಾಟಕ: ಸ್ಟಾರ್ಟಪ್ ನೀತಿಗೆ ಸಂಪುಟ ಅಸ್ತು: 10,000 ಕಂಪನಿ ಸ್ಥಾಪನೆ ಗುರಿ

ಡಿಸೆಂಬರ್ 8ರ 2022 ರಿಂದ ಜನವರಿ 12ರ 2023ರ ನಡುವಿನ ಅವಧಿಯಲ್ಲಿ ಉತ್ಪಾದಿಸಲಾಗಿರುವ ಒಟ್ಟು 17,362 ಕಾರ್‌ಗಳನ್ನು ಹಿಂಪಡೆಯುವುದಾಗಿ ಮಾರುತಿ ಸುಜುಕಿ ಕಂಪನಿ ಪ್ರಕಟನೆಯಲ್ಲಿ ತಿಳಿಸಿದೆ.

Maruti Suzuki to recall 17,362 cars due to airbag defect

ಕಾರ್‌ ಹಿಂಪಡೆಯಲು ಕಾರಣವೇನು ?

8 ಡಿಸೆಂಬರ್ 2022 ರಿಂದ 12 ಜನವರಿ 2023ರ ನಡುವಿನ ಅವಧಿಯಲ್ಲಿ ಉತ್ಪಾದಿಸಲಾಗಿರುವ ಕಾರ್‌ನಲ್ಲಿ ಏರ್‌ಬ್ಯಾಗ್‌ ನಿಯಂತ್ರಣದಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಾರ್‌ಗಳನ್ನು ಹಿಂಪಡೆಯುವಂತೆ ಸಂಸ್ಥೆ ತಿಳಿಸಿದೆ. ಈಗಾಗಲೇ ಮಾರುತಿ ಸುಜುಕಿ ಕಂಪನಿಯು ಈ ಅವಧಿಯಲ್ಲಿ ಸಿದ್ಧಪಡಿಸಲಾಗಿರುವ ಕಾರ್‌ಗಳನ್ನು ಹಿಂಪಡೆದು ಏರ್‌ಬ್ಯಾಗ್‌ಗಳನ್ನು ಬದಲಾಯಿಸುವ ಕೆಲಸ ಕೈಗೊಂಡಿದೆ.

ಈಗಾಗಲೇ ಮಾರುತಿ ಸುಜುಕಿ ಸಂಸ್ಥೆಯ ವತಿಯಿಂದ ಗ್ರಾಹಕರ ಸುರಕ್ಷತೆಯ ಹಿತ ದೃಷ್ಠಿಯಿಂದ ಕಾರ್‌ ಖರೀದಿಸಿದ ಗ್ರಾಹಕರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಈ ಅವಧಿಯಲ್ಲಿ ಉತ್ಪಾದಿಸಲಾಗಿರುವ ಕಾರ್‌ಗಳನ್ನು ಬಳಕೆ ಮಾಡದಂತೆ ಸೂಚಿಸಲಾಗಿದೆ. ಯಾವುದೇ ತರಹದ ಅಪಘಾತ ಸಂಭವಿಸುವ ಮುನ್ನವೇ ಕಾರ್‌ಗಳನ್ನು ಹಿಂತಿರುಗಿಸುವಂತೆ ಸೂಚಿಸಲಾಗಿದ್ದು, ದೋಷಪೂರಿತ ಏರ್‌ಬ್ಯಾಗ್‌ ಬದಲಾಯಿಸುವ ವರೆಗೆ ಗ್ರಾಹಕರು ಸಹಕರಿಸಬೇಕು ಎಂದು ಸಂಸ್ಥೆ ತಿಳಿಸಿದೆ.

Maruti Suzuki to recall 17,362 cars due to airbag defect

ಬೆಲೆ ಏರಿಕೆಯ ಬಿಸಿ !

ಈ ಹಿಂದೆ ಏಪ್ರಿಲ್‌ 2022ರಲ್ಲಿ ಮಾರುತಿ ಸುಜುಕಿಯು ತನ್ನ ಎಲ್ಲ ಮಾದರಿಯ ವಾಹನಗಳ ಬೆಲೆಯನ್ನು ಹೆಚ್ಚಿಸಿತ್ತು. ಈಗ ಮತ್ತೇ 1.1 ಪ್ರತಿಶತ ಹೆಚ್ಚಿಸುವ ಮೂಲಕ ಆರ್ಥಿಕ ವರ್ಷದಲ್ಲಿ ಎರಡನೇ ಬಾರಿ ಬೆಲೆ ಏರಿಕೆ ಮಾಡಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ, ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳನ್ನು ಸರಿದೂಗಿಸಲು ತನ್ನ ವಾಹನಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಕಂಪನಿಯು ಹೇಳಿತ್ತು.

English summary
The largest car company, Maruti Suzuki, has announced a recall of 17,362 vehicles. The decision was taken to correct a technical fault in the airbag
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X