ಬ್ಯಾಂಕ್ ಗಳ ಡಿವಿಡೆಂಡ್ ಅನುಮಾನ, ಸರಕಾರ- ಹೂಡಿಕೆದಾರ ಇಬ್ಬರಿಗೂ ಲಾಸ್

Posted By:
Subscribe to Oneindia Kannada

ನವದೆಹಲಿ, ಜನವರಿ 17: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಸಾರ್ವಜನಿಕ ವಲಯದ ಬ್ಯಾಂಕ್ ಷೇರುಗಳೆಂದರೆ ಬಲು ಅಚ್ಚುಮೆಚ್ಚು. ಹೂಡಿಕೆಗೆ ಉತ್ತಮ ಲಾಭ ಸಿಗುತ್ತದೆ ಎಂಬ ವಿಶ್ವಾಸ ಒಂದು ಕಡೆ ಆದರೆ, ತುಂಬ ಒಳ್ಳೆ ಡಿವಿಡೆಂಡ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಮತ್ತೊಂದು ಕಡೆ ಅದಕ್ಕೆ ಕಾರಣ.

ಆದರೆ, ಅಪನಗದೀಕರಣದ ಹೊಡೆತ, ಹೆಚ್ಚುತ್ತಿರುವ ಸಮಸ್ಯೆಗೊಳಗಾದ ಸಾಲ (ಬ್ಯಾಡ್ ಲೋನ್)ದ ಕಾರಣಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಡಿವಿಡೆಂಡ್ ಕೊಡುವುದು ಅನುಮಾನವಾಗಿದೆ. ಇದರಿಂದ ಸಾಮಾನ್ಯ ಹೂಡಿಕೆದಾರರಿಗಷ್ಟೇ ಅಲ್ಲ, ಸರಕಾರಕ್ಕೆ ದೊರೆಯುತ್ತಿದ್ದ ಡಿವಿಡೆಂಡ್ ಆದಾಯವೂ ಖೋತಾ ಆಗಲಿದೆ.[ಪ್ರಿಂಟಿಂಗ್ ಪ್ರೆಸ್ ನಿಂದ ನೇರ ಕಾಳಧನಿಕರ ಮನೆ ತಲುಪಿವೆ ಹೊಸ ನೋಟುಗಳು!]

Many PSU banks may skip dividend payout

ಕೆಲವು ಬ್ಯಾಂಕ್ ಗಳು ಈಗಾಗಲೇ ಈ ಬಗ್ಗೆ ವಿತ್ತ ಸಚಿವಾಲಯಕ್ಕೆ ತಿಳಿಸಿಯಾಗಿದೆ. ಲಾಭದಲ್ಲಿ ಕಡಿಮೆ ಆಗುವ ಎಲ್ಲ ಸಾಧ್ಯತೆ ಇದ್ದು, ಜತೆಗೆ ಅನುತ್ಪಾದಕ ಆಸ್ತಿಯ ಪ್ರಮಾಣದಲ್ಲೂ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. ಆದರೆ ಯಾವ ಬ್ಯಾಂಕ್ ಗಳು ತಿಳಿಸಿವೆ ಎಂಬುದು ಬಹಿರಂಗವಾಗಿಲ್ಲ.

ಅದ್ದರಿಂದ ಸಾರ್ವಜನಿಕ ವಲಯದ ಬ್ಯಾಂಕ್ ಗಳಿಂದ ಈ ಬಾರಿ ಸಾವಿರ ಕೋಟಿ ರುಪಾಯಿಗೂ ಕಡಿಮೆ ಆದಾಯ ಡಿವಿಡೆಂಡ್ ರೂಪದಲ್ಲಿ ದೊರೆಯುತ್ತದೆ. ಜೂನ್, 2016ಕ್ಕೆ ಸಾರ್ವಜನಿಕ ವಲಯದ ಅನುತ್ಪಾದಕ ಆಸ್ತಿ ಮೊತ್ತ 5,50,346 ಕೋಟಿ ಇತ್ತು. ಅದೇ ಸೆಪ್ಟೆಂಬರ್ 30ಕ್ಕೆ 6,30,323 ಕೋಟಿಯಾಗಿತ್ತು.[ಹಣದ ಸಮಸ್ಯೆ ಸಹಜಸ್ಥಿತಿಗೆ ಬರುವವರೆಗೆ ಸ್ಟೇಟ್ ಬ್ಯಾಂಕ್ ಬಂದ್ ಮಾಡಿ]

ಆರ್ಥಿಕ ತಜ್ಞರ ಪ್ರಕಾರ, ಅಪನಗದೀಕರಣದ ಕಾರಣಕ್ಕೆ ಬ್ಯಾಂಕಿಂಗ್ ವ್ಯವಹಾರಗಳು ಎರಡು ತಿಂಗಳ ಕಾಲ ಸಹಜವಾಗಿ ನಡೆಸಲು ಸಾಧ್ಯವಾಗಲಿಲ್ಲ. ಇದರಿಂದ ಬ್ಯಾಂಕ್ ಗಳ ಆದಾಯಕ್ಕೆ ಹೊಡೆತ ಬಿದ್ದಿದೆ. ಅಪನಗದೀಕರಣದ ನಂತರ ಸಾಲ ವಿತರಣೆಯಲ್ಲಿ ದಾಖಲೆ ಪ್ರಮಾಣದ (ಶೇ 5.3) ಕುಸಿತವಾಗಿದೆ.

ಸದ್ಯಕ್ಕೆ ಈ ವರ್ಷ ಬ್ಯಾಂಕ್ ಗಳು ಡಿವಿಡೆಂಡ್ ನೀಡುವ ಸ್ಥಿತಿಯಲ್ಲಿಲ್ಲ. ಎಲ್ಲ ಬ್ಯಾಂಕ್ ಗಳು ಹೆಚ್ಚಿನ ಬಂಡವಾಳದ ನಿರೀಕ್ಷೆಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hit by demonetisation and mounting bad loans, some public sector banks may skip paying dividend which will have implications for government receipts in the current fiscal.
Please Wait while comments are loading...